ಪುಸ್ತಕ ಹಬ್ಬ ಸಪ್ತಾಹದ ಸಮಾರೋಪ ‘ಪ್ರಶ್ನೆ ಸಂದೇಶ – ದೇವಪ್ರಶ್ನೆ ‘ಪುಸ್ತಕ ಬಿಡುಗಡೆ

Puttur_Advt_NewsUnder_1
Puttur_Advt_NewsUnder_1

22

* ಶಾಸ್ತ್ರದ ಸಹಾಯದ ಜೊತೆ ಪುರುಷ ಪ್ರಯತ್ನವೂ ಬೇಕು – ಬಿ.ಪುರಂದರ ಭಟ್ * ಶಾಸ್ತ್ರಗಳು ಯಾವತ್ತೂ ಗೊಂದಲ ನಿರ್ಮಾಣ ಮಾಡುವುದಿಲ್ಲ- ಡಾ |ಶ್ರೀಶ ಕುಮಾರ್ * ಜೋತಿಷ್ಯದಲ್ಲಿ ಮೂಡನಂಭಿಕೆ ಪ್ರಶ್ನೆ ಇಲ್ಲ-ಸುಕುಮಾರ ಅಲಂಪಾಡಿ
ಪುತ್ತೂರು: ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಪುತ್ತೂರು ತಾಲೂಕು ಘಟಕ ಮತ್ತು ಜ್ಞಾನಗಂಗಾ ಪುಸ್ತಕ ಮಳಿಗೆ ಸಂಯುಕ್ತ ಆಶ್ರಯದಲ್ಲಿ ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಅ.24ರಿಂದ ಪ್ರಾರಂಭವಾದ ಪುಸ್ತಕ ಹಬ್ಬ ಸಪ್ತಾಹದ ಸಮಾರೋಪ ಅ.30ರಂದು ಸುಕುಮಾರ ಅಲಂಪಾಡಿಯವರ ‘ಪ್ರಶ್ನೆ ಸಂದೇಶ – ದೇವಪ್ರಶ್ನೆ’ ಎಂಬ ಪುಸ್ತಕ ಬಿಡುಗಡೆಯೊಂದಿಗೆ ನಡೆಯಿತು.
ಶಾಸ್ತ್ರದ ಸಹಾಯದ ಜೊತೆ ಪುರುಷ ಪ್ರಯತ್ನವೂ ಬೇಕು: ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಂಘದ ಅಧ್ಯಕ್ಷ ಬಿ.ಪುರಂದರ ಭಟ್‌ರವರು ಮಾತನಾಡಿ ಶಾಸ್ತ್ರ ಒಂದು ಕಡೆಯಿಂದ ಸಹಾಯಕವಾಗುತ್ತದೆಯಾದರೂ ಪುರುಷ ಪ್ರಯತ್ನವೂ ಬೇಕು ಎಂದು ಹೇಳಿದರು. ಯಾವುದೇ ಶಾಸ್ತ್ರ ನಮ್ಮ ಬದುಕಿನ ಉದ್ದಾರಕ್ಕೆ ಸಹಾಯಕವಾಗಬೇಕು. ಅಷ್ಟಮಂಗಲ ಪ್ರಶ್ನೆಯಲ್ಲಿ ನಮ್ಮ ಕಣ್ಣಿಗೆ ಕಟ್ಟುವ ಹಾಗೆ ಸತ್ಯ ಬರುತ್ತದೆ. ಈ ನಿಟ್ಟಿನಲ್ಲಿ ಜೋತಿಷ್ಯ ನಮಗೆ ಪ್ರಯೋಜನವಿಲ್ಲ ಎಂದು ಹೇಳಲಾಗುವುದಿಲ್ಲ. ಎಲ್ಲರಿಗೂ ಭವಿಷ್ಯ ತಿಳಿದು ಕೊಳ್ಳುವ ಕುತೂಹಲ ಇದೆ. ಭವಿಷ್ಯ ನಮ್ಮೆಲ್ಲಾ ಆಯಾಮಗಳಿಗೆ ಮಾನಸಿಕವಾಗಿ ಧೈರ್ಯ ಕೊಡುವಂತಹ ಒಂದು ವಿಚಾರ ಆಗಿರಬಹುದು. ಆದರೆ ದೇವರಿಗೆ ಮಾತ್ರ ಸತ್ಯಗೊತ್ತಿರುವುದು ಎಂದು ನಾವು ತಿಳಿದು ಕೊಳ್ಳಬೇಕು. ಈ ನಿಟ್ಟಿನಲ್ಲಿ ನಮ್ಮ ಆತ್ಮಸ್ಥೈರ್ಯವನ್ನು ಕಳೆದು ಕೊಳ್ಳದೆ ಶಾಸ್ತ್ರವನ್ನು ಆಶಾವಾದಿಗಳಾಗಿ ನಾವು ಮನುಷ್ಯತ್ವವನ್ನು ರೂಪಿಸಿಕೊಳ್ಳಬೇಕೆಂದು ಹೇಳಿದರು.
ಶಾಸ್ತ್ರಗಳು ಯಾವತ್ತೂ ಗೊಂದಲ ನಿರ್ಮಾಣ ಮಾಡುವುದಿಲ್ಲ: ಪ್ರಶ್ನೆ ಸಂದೇಶ – ದೇವಪ್ರಶ್ನೆ ಪುಸ್ತಕ ಬಿಡುಗಡೆ ಮಾಡಿದ ವಿವೇಕಾನಂದ ಕಾಲೇಜಿನ ಉಪನ್ಯಾಸಕ ಡಾ ಶ್ರೀಶಕುಮಾರ್‌ರವರು ಮಾತನಾಡಿ ಮೌಢ್ಯಗಳ ಕುರಿತು ದೊಡ್ಡ ಚರ್ಚೆ ನಡೆಯುವ ಸಂದರ್ಭದಲ್ಲಿ ಶಾಸ್ತ್ರಗಳನ್ನು ಎಳೆದು ತಂದಿದ್ದಾರೆ. ಆದರೆ ಶಾಸ್ತ್ರಗಳು ಯಾವತ್ತೂ ಕೂಡಾ ಗೊಂದಲ ನಿರ್ಮಾಣ ಮಾಡುವುದಿಲ್ಲ ಎಂದು ಹೇಳಿದರು. ಜ್ಯೋತಿಷ್ಯ ಶಾಸ್ತ್ರಕ್ಕೆ ಸಂಬಂಧಿಸಿ ವಿವೇಕಾನಂದ ಕಾಲೇಜಿನಲ್ಲೂ ಶಿಕ್ಷಣ ಪ್ರಾರಂಭ ಮಾಡುವ ಚಿಂತನೆ ಇದೆ. ಇಂತಹ ಸಂದರ್ಭದಲ್ಲಿ ಈ ಪುಸ್ತಕ ಬಳಕೆಯಾಗಲಿದೆ ಎಂದರು.
ಜೋತಿಷ್ಯದಲ್ಲಿ ಮೂಡನಂಭಿಕೆ ಪ್ರಶ್ನೆ ಇಲ್ಲ: ಕೃತಿ ರಚನೆಗಾರ ಸುಕುಮಾರ ಅಲಂಪಾಡಿಯವರು ತನ್ನ ಕೃತಿಯ ಕುರಿತು ಮಾತನಾಡಿ ಜೋತಿಷ್ಯ ಒಂದು ಖಚಿತವಾದ ವಿಜ್ಞಾನ. ಇಲ್ಲಿ ಮೂಢನಂಬಿಕೆಯ ಪ್ರಶ್ನೆ ಇಲ್ಲ ಎಂದರು. ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಐತ್ತಪ್ಪ ನಾಯ್ಕ್ ಉಪಸ್ಥಿತರಿದ್ದರು. ಡಾ ಸುಬ್ರಹ್ಮಣ್ಯ ಭಟ್ ಅತಿಥಿಗಳನ್ನು ಗೌರವಿಸಿದರು. ಡಾ| ಶೋಭಿತಾ ಸತೀಶ್ ರಾವ್ ಸ್ವಾಗತಿಸಿ, ಡಾ| ಸತೀಶ್ ರಾವ್ ವಂದಿಸಿದರು. ಹರಿಣಾಕ್ಷಿ ಕಾರ್‍ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.