ಕೊಡಿಮಾರು ಅಬೀರದಲ್ಲಿ ದೀಪಾವಳಿಯ ಪ್ರಯುಕ್ತ 7ನೇ ವರ್ಷದ ಕ್ರೀಡಾಕೂಟ

Puttur_Advt_NewsUnder_1
Puttur_Advt_NewsUnder_1

kodimaru-photo_2

ಕಾಣಿಯೂರು: ಸಂಘಟನೆಯ ಮೂಲಕ ಅಭಿವೃದ್ಧಿಯ ಕೆಲಸವಾಗಬೇಕು. ಸೇವೆ ಮಾಡುವ ಮನೋಧರ್ಮದಿಂದ ಮನುಷ್ಯನ ಬದುಕು ಸನ್ಮಾರ್ಗದತ್ತ ಸಾಗಲು ಸಾಧ್ಯ. ಸಂಸ್ಕೃತಿ, ಸಂಸ್ಕಾರಗಳು ನಮ್ಮ ಮುಂದಿನ ಪೀಳಿಗೆಯು ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಮಕ್ಕಳಿಗೆ ಸಣ್ಣ ಪ್ರಾಯದಲ್ಲಿಯೇ ನಮ್ಮ ಸಂಸ್ಕಾರದ ಬಗ್ಗೆ ಅರಿವು ಮೂಡಿಸುವ ಕೆಲಸ ನಾವು ಅಗತ್ಯವಾಗಿ ಮಾಡಬೇಕಾಗಿದೆ ಎಂದು ಬೆಳಂದೂರು ಜಿ.ಪಂ ಕ್ಷೇತ್ರದ ಸದಸ್ಯೆ ಪ್ರಮೀಳಾ ಜನಾರ್ದನ ಹೇಳಿದರು. ಅವರು ಕೊಡಿಮಾರು ಅಬೀರ ಗೆಳೆಯರ ಬಳಗ ಇದರ ಆಶ್ರಯದಲ್ಲಿ ಅ 29ರಂದು ಕೊಡಿಮಾರು, ಅಬೀರದಲ್ಲಿ ದೀಪಾವಳಿಯ ಪ್ರಯುಕ್ತ ನಡೆದ 7ನೇ ವರ್ಷದ ಕ್ರೀಡಾಕೂಟ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಯುವ ಸಂಘಟನೆಗಳು ಕ್ರಿಯಾಶೀಲರಾದಾಗ ಮಾತ್ರ ಸಮಾಜ ಅಭಿವೃದ್ಧಿಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ಸಮಾಜ ಒಗ್ಗೂಡಿಸುವ ಕೆಲಸ ಯುವಕರಿಂದಾಗಬೇಕು ಎಂದರು. ಬಜತ್ತೂರು ಕ್ಲಸ್ಟರ್ ಸಿಆರ್‌ಪಿ ಗಣೇಶ್ ನಡುವಾಲ್ ಮಾತನಾಡಿ, ದೀಪದ ಬೆಳಕಿನಿಂದ ಕತ್ತಲೆಯು ಕಳೆದು, ಬೆಳಕು ಹರಿದು ಪರಿಸರವು ಚೈತನ್ಯಮಯವಾಗುತ್ತದೆ. ದೀಪಾವಳಿಯು ಒಂದು ವಿಶಿಷ್ಟ ಹಬ್ಬವಾಗಿದ್ದು, ಸಮಾಜಕ್ಕೆ ಸಾಮರಸ್ಯದ ಬದುಕನ್ನೂ ನೀಡುತ್ತದೆ. ಕತ್ತಲೆಯಿಂದ ಬೆಳಕಿನ ಕಡೆಗೆ ತೆರಳುವ ಮಹತ್ವವನ್ನು ಈ ಹಬ್ಬ ಸಾರುತ್ತದೆ ಎಂದರು. ಕೊಡಿಮಾರು ಅಬೀರ ಗೆಳೆಯರ ಬಳಗದ ಅಧ್ಯಕ್ಷ ಪದ್ಮಯ್ಯ ಗೌಡ ಹೊಸೊಕ್ಲು ಅಧ್ಯಕ್ಷತೆ ವಹಿಸಿದ್ದರು. ಕೊಡಿಮಾರು ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಉದಯ ರೈ ಮಾದೋಡಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಕ್ರೀಡಾಪಟು ಸ್ವಾತಿ ಕಂಡೂರು ಇವರನ್ನು ಸನ್ಮಾನಿಸಲಾಯಿತು.

ಬೆಳಿಗ್ಗೆ ಕಾರ್ಯಕ್ರಮವನ್ನು ದೇವಣ್ಣ ಗೌಡ ಕೆಳಗಿನ ಮನೆಯವರು ಉದ್ಘಾಟಿಸಿದರು. ಸಂಗೀತಾ ಹೊಸೊಕ್ಲು ಪ್ರಾರ್ಥಿಸಿ, ಕೊಡಿಮಾರು ಗೆಳೆಯರ ಬಳಗದ ಗೌರವಾಧ್ಯಕ್ಷ ಜಯಂತ್ ಅಬೀರ ಸ್ವಾಗತಿಸಿದರು. ಗೌರವ ಸಲಹೆಗಾರರಾದ ಶೇಷಪ್ಪ ಕರೆಮನೆರವರು ವಂದಿಸಿದರು. ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ  ವಸಂತ ರೈ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.