ಅಂಬಿಕಾ ಪದವಿ ಪೂರ್ವ ವಿದ್ಯಾಲಯಗಳ ವಾರ್ಷಿಕೋತ್ಸವ ‘ಮಾನಸೋಲ್ಲಾಸ’

Puttur_Advt_NewsUnder_1
Puttur_Advt_NewsUnder_1

1 2

3

ಪುತ್ತೂರು: ಅಂಬಿಕಾ ಪದವಿಪೂರ್ವ ವಿದ್ಯಾಲಯ ನೆಲ್ಲಿಕಟ್ಟೆ ಹಾಗೂ ಅಂಬಿಕಾ ಪದವಿಪೂರ್ವ ವಿದ್ಯಾಲಯ (ವಸತಿಯುತ) ಬಪ್ಪಳಿಗೆ ಇವುಗಳ 2016-17ನೇ ಸಾಲಿನ ಜಂಟಿ ವಾರ್ಷಿಕೋತ್ಸವ ‘ಮಾನಸೋಲ್ಲಾಸ’ ಕಾರ್ಯಕ್ರಮ ಅ. 31ರಂದು ಇಲ್ಲಿನ ಪುರಭವನದಲ್ಲಿ ನಡೆಯಿತು.

ನಟ್ಟೋಜ ಫೌಂಡೇಶನ್ ಟ್ರಸ್ಟ್‌ನ ಅಧ್ಯಕ್ಷ ನಟ್ಟೋಜ ಶಿವಾನಂದ ರಾವ್ ರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಬಳಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.

ನಾವೇನು ಮಾಡುತ್ತೇವೆ ಎನ್ನುವುದೇ ಮಹತ್ವದ್ದು – ಎಂ.ಸಿ. ಪ್ರಕಾಶ್: ಮುಖ್ಯ ಅತಿಥಿಯಾಗಿದ್ದ ಬೆಂಗಳೂರು ವಿದ್ಯಾವರ್ಧಕ ಸಂಘ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ| ಎಂ.ಸಿ. ಪ್ರಕಾಶ್ ಮಾತನಾಡಿ, ‘ವಿದ್ಯಾರ್ಥಿಗಳು ಏನು ಕಲಿಯುತ್ತಾರೋ ಎಂಬುದಕ್ಕಿಂತ ಏನು ಮಾಡುತ್ತಾರೆ ಎಂಬುವುದೇ ಮಹತ್ವಪೂರ್ಣವಾದುದು. ನಮ್ಮ ಗುರಿ ಕಾರ್ಯಸಾಧನೆಯ ಕಡೆ ಇರಬೇಕೆ ಹೊರತು ಅಧ್ಯಯನ ವಿಷಯದ ಮೇಲಲ್ಲ’ ಎಂದರು. ವಾರ್ಷಿಕೋತ್ಸವದ ಪ್ರಯುಕ್ತ ನಡೆಯಲಿರುವ ‘ಶ್ರೀರಾಮಾಯಣ ದರ್ಶನಂ’ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉಲ್ಲೇಖಿಸಿದ ಅವರು, ರಾಮಾಯಣವನ್ನು ಸರಿಯಾಗಿ ಯಾವನು ಓದಿದ್ದಾನೋ ಆತ ರಾಮಾಯಣವನ್ನು ಬೈಯೋದಿಲ್ಲ. ಬೈಯುವವರು ರಾಮಾಯಣ ಓದಿಲ್ಲ ಎಂದು ಅರ್ಥ. ರಾಮ, ಸೀತೆ ಹಾಗೂ ಹನುಮಂತರ ಆದರ್ಶ ಗುಣಗಳು ಸಾರ್ವಕಾಲಿಕ ಅನ್ವಯಾಗುವಂತದ್ದು, ವಿದ್ಯಾರ್ಥಿಗಳು ಇವುಗಳನ್ನು ಪರಿಪಾಲಿಸುವಂತಾಗಬೇಕು ಎಂದು ಹೇಳಿ ಶುಭ ಹಾರೈಸಿದರು.

ಪ್ರಾಸ್ತಾವಿಕ ಭಾಷಣಗೈದ ಸಂಸ್ಥೆಯ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜರವರು, ‘ನಮ್ಮ ಸಂಸ್ಥೆ ಇಷ್ಟು ಎತ್ತರವಾಗಿ ಏರಲು ಶ್ರೀ ಮಹಾಲಿಂಗೇಶ್ವರ ದೇವರು ಹಾಗೂ ಪುತ್ತೂರಿನ ಮಹಾಜನತೆಯ ಆಶೀರ್ವಾದ’ ಎಂದರು. ವೇದಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯರಾದ ಬಿ. ಪುರಂದರ ಭಟ್, ಸುರೇಶ್ ಶೆಟ್ಟಿ, ಕಿರಣ್ ರಾವ್, ಡಾ. ಶ್ರೀಕಾಂತ್ ರಾವ್, ಡಾ. ಎಂ.ಎಸ್. ಶೆಣೈ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ,  ವಿದ್ಯಾರ್ಥಿ ಘಟಕಗಳ ಅಧ್ಯಕ್ಷರಾದ ತೇಜಸ್ ಅಶೋಕ್ ದಲಾಲ್, ಧೀಮಂತ್ ಎಂ.ಡಿ., ಕಾರ್ಯದರ್ಶಿಗಳಾದ ಸಂದೀಪ್ ಸಿ.ಜಿ. ಹಾಗೂ ಪೂಜಾ ಕೆ.ಪಿ. ಉಪಸ್ಥಿತರಿದ್ದರು.  ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ಬಹುಮಾನಿತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಉಪನ್ಯಾಸಕರಾದ ವಿಂಧ್ಯಾ ಹಾಗೂ ಕಿಶೋರ್ ವಿವಿಧ ಸ್ಪರ್ಧೆಗಳ ಬಹುಮಾನಿತರ ವಿವರ ವಾಚಿಸಿದರು. ಅಂಬಿಕಾ ಪದವಿಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯ ಪ್ರಾಂಶುಪಾಲೆ ಶ್ರೀಮತಿ ರಾಜಶ್ರೀ ಎಸ್. ನಟ್ಟೋಜ ಸ್ವಾಗತಿಸಿ, ಅಂಬಿಕಾ ಪದವಿ ಪೂರ್ವ ವಿದ್ಯಾಲಯ (ವಸತಿಯುತ) ಬಪ್ಪಳಿಗೆಯ ಪ್ರಾಂಶುಪಾಲ ರಾಮಚಂದ್ರ ಕೆ. ವಂದಿಸಿದರು. ಆಂಗ್ಲ ಉಪನ್ಯಾಸಕಿ ಸುಚಿತ್ರಾ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಲಾ ಪ್ರಕಾರಗಳ ಮೂಲಕ ಶ್ರೀ ರಾಮಾಯಣ ದರ್ಶನಂ ಪ್ರದರ್ಶನಗೊಂಡಿತು. ವಿವೇಕಾನಂದ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಮಾಧವ ಭಟ್, ನಿವೃತ್ತ ಉಪನ್ಯಾಸಕ ಪ್ರೊ. ಬಿ.ಜೆ. ಸುವರ್ಣ, ವಕೀಲರಾದ ಎನ್.ಕೆ. ಜಗನ್ನೀವಾಸ ರಾವ್, ವಿ.ಬಿ. ಅರ್ತಿಕಜೆ, ಬೆಟ್ಟಂಪಾಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಾಲಕೃಷ್ಣ ರಾವ್, ಯುವಬ್ರಿಗೇಡ್‌ನ ಶ್ರೀಕೃಷ್ಣ ಉಪಾಧ್ಯಾಯ, ವಿದ್ಯಾರ್ಥಿಗಳ ಪೋಷಕರು ಸಭೆಯಲ್ಲಿ ಉಪಸ್ಥಿತರಿದ್ದರು.

ನಟ್ಟೋಜ ಫೌಂಡೇಶನ್ ಟ್ರಸ್ಟ್‌ನ ಎರಡು ಸಂಸ್ಥೆಗಳು ಮುಂದಕ್ಕೆ ನಳಂದಾ-ತಕ್ಷಶಿಲಾ ದಂತೆ ಪ್ರಜ್ವಲಿಸಲಿ. ಸಾವಿರಾರು ಚಾಣಕ್ಯ, ಆರ್ಯಭಟ-ಆರ್ಯಭಟಿಯರನ್ನು ಸಮಾಜಕ್ಕೆ ನೀಡುವಂತಾಗಲಿ.

-ಡಾ| ಎಂ.ಸಿ. ಪ್ರಕಾಶ್

ವಿದ್ಯೆಯಿಂದ ದೇಶ ಸೇವೆ ಮಾಡುವ ಮಕ್ಕಳಾಗಲಿ ಎಂಬ ಉzಶದಿಂದ ಮುನ್ನಡೆಯುತ್ತಿರುವ ಸಂಸ್ಥೆ ನಮ್ಮದು ಎಂದು ಹೇಳಲು ಹೆಮ್ಮೆ ಪಡುತ್ತೇನೆ.

– ನಟ್ಟೋಜ ಶಿವಾನಂದ ರಾವ್

ವಿದೇಶಿಯತೆಯನ್ನು ಹೋಗಲಾಡಿಸಿ ಭಾರತದ ಭಾವೀ ಪ್ರಜೆಗಳನ್ನು ಸಾಂಸ್ಕೃತಿಕ ರಾಯಭಾರಿಗಳನ್ನಾಗಿ ಮಾಡುವುದು ನಮ್ಮ ಉದ್ದೇಶವಾಗಿದೆ.

– ಸುಬ್ರಹ್ಮಣ್ಯ ನಟ್ಟೋಜ

ಸ್ಕ್ರೀನ್ ಮೂಲಕ ಶೈಕ್ಷಣಿಕ ವರದಿ

ಸಭಾ ಕಾರ್ಯಕ್ರಮದ ಬಳಿಕ ಪ್ರೊಜೆಕ್ಟರ್ ಸ್ಕ್ರೀನ್ ಮೂಲಕ ಸಂಸ್ಥೆಯ ಕಳೆದ ಒಂದು ವರುಷದ ವರದಿಯನ್ನು ಮುಂದಿಡಲಾಯಿತು. ವಿಡಿಯೋಗ್ರಫಿ, ಫೊಟೋಗ್ರಫಿ ಮೂಲಕ ಆಡಿಯೋ ಮುದ್ರಣ ಜೊತೆಗೆ ವರದಿ ನೀಡಿರುವುದು ಎಲ್ಲರ ಗಮನ ಸೆಳೆಯಿತು. ಸಭಾ ಕಾರ್ಯಕ್ರಮದಲ್ಲಿ ವರದಿ ವಾಚನಕ್ಕೆ ದೀರ್ಘ ಸಮಯ ವ್ಯರ್ಥವಾಗುವುದನ್ನು ತಪ್ಪಿಸಲು ಹಾಗೂ ಪರಿಣಾಮಕಾರಿಯಾಗಿ ನೆರೆದ ಸಭೆಗೆ ವರದಿ ತಲುಪಿಸುವಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡಿರುವುದು ಅಪೂರ್ವವಾದ ಪ್ರಯೋಗವಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.