Breaking News

ನೆಲ್ಯಾಡಿ: ಪೊಸ ಬದ್‌ಕ್ ತುಳು ನಾಟಕ ಮುಹೂರ್ತ

Puttur_Advt_NewsUnder_1
Puttur_Advt_NewsUnder_1

 

9ನೆಲ್ಯಾಡಿ: ನಮ್ಮ ಕಲಾವಿದೆರ್ ನೆಲ್ಯಾಡಿ ಇದರ 7ನೇ ಕಲಾಕೃತಿ ಪೊಸ ಬದ್‌ಕ್ ತುಳು ಸಾಂಸಾರಿಕ ಹಾಸ್ಯಮಯ ನಾಟಕದ ಮುಹೂರ್ತ ನೆಲ್ಯಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಅ.31ರಂದು ನಡೆಯಿತು. ದೇವಾಲಯದ ಪ್ರಧಾನ ಅರ್ಚಕ ಅಶ್ವತ್ಥ ನಾರಾಯಣರವರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ, ಕಲಾವಿದರನ್ನು ಆಶೀರ್ವದಿಸಿದರು.

ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಸುಧೀರ್ ಕುಮಾರ್ ಚೆಂಡೆ ಮತ್ತು ಪುತ್ತೂರು ಜಾನಪದ ಸಾಹಿತ್ಯ ವೇದಿಕೆ ಅಧ್ಯಕ್ಷ ಚಿದಾನಂದ ಕಾಮತ್ ಕಾಸರಗೋಡು ಡೋಲು ಬಾರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಚಿದಾನಂದ ಕಾಮತರು, ‘ಪುತ್ತೂರು ಸರಹದ್ದಿನಲ್ಲಿಯೇ ಅನೇಕ ನಾಟಕ ಸಂಸ್ಥೆಗಳು ಆರೋಗ್ಯಕರವಾಗಿ ತಲೆ ಎತ್ತುತ್ತಿರುವುದು ಸಂತಸದ ವಿಚಾರ. ಮುಂದಿನ ದಿನಗಳಲ್ಲಿ ನಾಟಕ ಕಲಾವಿದರ ಸಂಘಟನೆಯಾಗಿ, ವೇದಿಕೆಯಲ್ಲಿ ಮನೋರಂಜನೆ ನೀಡುವ ಕಲಾವಿದನ ನಿಜ ಬದುಕಿನಲ್ಲಿ ನೋವುಂಟಾದಾಗ, ಸಂಘಟನೆಯ ಮುಖೇನ ಸ್ಪಂದಿಸುವ ಕೆಲಸವಾಗಬೇಕೆಂದರು’.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ದೇವಾಲಯದ ಮಾಜಿ ಮೊಕ್ತೇಸರ ಶಿವದಾಸ್ ನೆಲ್ಯಾಡಿ, ವರ್ತಕ ಸಂಘದ ಕಾರ್ಯದರ್ಶಿ ಸುಬ್ರಹ್ಮಣ್ಯ ಜಿ. ಶಿವಕೃಪಾ, ಉದ್ಯಮಿ ಗಣೇಶ್ ಕೆ. ರಶ್ಮಿ, ವಕೀಲ ವಿನೋದ್ ಶುಭಹಾರೈಸಿದರು.
ದಿನೇಶ್ ಶೆಟ್ಟಿ ನೆಲ್ಯಾಡಿ ಸ್ವಾಗತಿಸಿದರು. ಅರುಣ್‌ಚಂದ್ರ ಬಿ.ಸಿ.ರೋಡ್ ಪ್ರಸ್ತಾವನೆಗೈದರು. ಹರೀಶ್ ಶೆಟ್ಟಿ ಗೋಳಿತ್ತೊಟ್ಟು ವಂದಿಸಿದರು. ಸಂಘಟಕ ದಯಾನಂದ ನೆಲ್ಯಾಡಿ ನಿರೂಪಿಸಿದರೆ, ಸಂತೋಷ್ ಕುಮಾರ್ ನೆಲ್ಯಾಡಿ ಸಹಕರಿಸಿ ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.