ಬ್ಲಾಕ್ ಕಾಂಗ್ರೆಸ್‌ನಿಂದ ಇಂದಿರಾ ಗಾಂಧಿಯವರ ಪುಣ್ಯತಿಥಿ ಆಚರಣೆ: ವಿಶ್ವವನ್ನೇ ಬೆರಗುಗೊಳಿಸಿದ ಮಹಾನಾಯಕಿ ಇಂದಿರಾಗಾಂಧಿ-ಶಕುಂತಳಾ ಶೆಟ್ಟಿ

Puttur_Advt_NewsUnder_1
Puttur_Advt_NewsUnder_1

congressಪುತ್ತೂರು: ಮಾಜಿ ಪ್ರಧಾನಿ ದಿ| ಇಂದಿರಾ ಗಾಂಧಿಯವರ ಪುಣ್ಯತಿಥಿ ಯನ್ನು ಪುತ್ತೂರು ಬ್ಲಾಕ್ ಕಾಂಗ್ರೆಸ್‌ನ ಆಶ್ರಯದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಾಯಿತು. ಶಾಸಕಿ ಹಾಗೂ ಸಂಸದೀಯ ಕಾರ್ಯದರ್ಶಿ ಶಕುಂತಳಾ ಶೆಟ್ಟಿಯವರು ಇಂದಿರಾ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಭಾರತದ ಇತಿಹಾಸದಲ್ಲಿಯೇ ಸುಧೀರ್ಘ ಕಾಲ ಆಡಳಿತ ನಡೆಸಿ ಇಡೀ ವಿಶ್ವವನ್ನೇ ಬೆರಗುಗೊಳಿಸಿದ ಮಹಾ ನಾಯಕಿ ಇಂದಿರಾ ಗಾಂಧಿಯವರನ್ನು ಭಾರತದ ವಿರೋಧ ಪಕ್ಷಗಳೂ ಸೇರಿದಂತೆ ಇಡೀ ವಿಶ್ವಖಂಡ ಮಹಾ ನಾಯಕಿ ಎಂದು ಬಣ್ಣಿಸಿದೆ ಎಂದರು.
ಕಾಂಗ್ರೆಸ್ ಬಲಿಷಗೊಳ್ಳಲು ಸಹಕಾರಿ-ಫಝಲ್ ರಹೀಂ: ಅಧ್ಯಕ್ಷತೆ ವಹಿಸಿದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ನ್ಯಾಯವಾದಿ ಫಝಲ್ ರಹೀಂರವರು ಮಾತನಾಡಿ, ಉಕ್ಕಿನ ಮಹಿಳೆಯೆಂದೇ ಖ್ಯಾತರಾದ ಇಂದಿರಾ ಗಾಂಧಿಯವರು ದೇಶವನ್ನು ಬಲಿಷ್ಟಗೊಳಿಸಿ ಭಾರತದ ಕೀರ್ತಿಯನ್ನು ವಿಶ್ವಕ್ಕೇ ಪಸರಿಸಿದ ಧೀಮಂತ ಮಹಿಳೆ. ತನ್ನ ದಿಟ್ಟತನ, ಧೈರ್ಯ, ದೇಶಕ್ಕಾಗಿ ಬಲಿದಾನ ಗೈದ ಮಹಾನ್ ನಾಯಕಿಯಾದ ಇಂದಿರಾ ಗಾಂಧಿಯವರ ಆದರ್ಶಗಳು ಕಾಂಗ್ರೆಸ್ ಬಲಿಷ್ಟ ಗೊಳ್ಳಲು ಸಹಕಾರಿಯಾಗಿದೆ ಎಂದರು.
ದೇಶ ಸುತ್ತುವುದರಿಂದ ಭಾರತ ಪ್ರಗತಿಯಾಗುವುದಿಲ್ಲ: ಸೂತ್ರಬೆಟ್ಟು ಜಗನ್ನಾಥ ರೈ: ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈರವರು ಮಾತನಾಡಿ, ಇಂದಿರಾ ಗಾಂಧಿಯವರ ಮೇಲಿನ ಗೌರವ ನಮ್ಮನ್ನು ಶಕ್ತಿಶಾಲಿಯನ್ನಾಗಿಸಿದೆ. ಕೇವಲ ದೇಶ ಸುತ್ತುವುದರಿಂದ ಭಾರತ ಪ್ರಗತಿಯಾಗುವುದಿಲ್ಲ. ಆದರೆ ಇಂದಿರಾ ಗಾಂಧಿ ಆ ಕಾಲದಲ್ಲಿ ಆಗಾಗ ದೇಶ ಸುತ್ತದೇ ದೇಶದ ಗೌರವವನ್ನು ವಿಶ್ವಕ್ಕೆ ಪಸರಿಸಿದ ಮತ್ತು ಇಡೀ ದೇಶವೇ ಪ್ರಗತಿಪಥದತ್ತ ಸಾಗಲು ಶ್ರಮಿಸಿದ ದಿಟ್ಟ ಮಹಿಳೆ ಎಂದರು. ಪುತ್ತೂರು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ನಿರ್ಮಲ್ ಕುಮಾರ್ ಜೈನ್‌ರವರು ಮಾತನಾಡಿ, ಇಂದಿರಾ ಗಾಂಧಿಯವರ ಲೀಡರ್ ಶಿಪ್ ದೇಶದ ಘನತೆಯನ್ನು ಹೆಚ್ಚಿಸಿದೆ. ಅಂತಹ ಮಹಾನ್ ನಾಯಕಿಯ ಆತ್ಮಕ್ಕೆ ಶಾಂತಿ ದೊರೆಯಬೇಕು ಮತ್ತು ಅವರ ಆದರ್ಶತೆಯ ಗುಣಗಳು ನಮ್ಮಲ್ಲಿ ಮೂಡಿಬರಬೇಕು ಎಂದರು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಜೋಕಿಂ ಡಿಸೋಜರವರು ಮಾತನಾಡಿ, ಇಂದಿರಾ ಗಾಂಧಿಯವರ ನೆನಪು ಮಾಡು ವುದರಿಂದ ಅವರ ಬಗ್ಗೆ ನಮ್ಮಲ್ಲಿ ಅತೀವ ಗೌರವ ಮೂಡುತ್ತದೆ. ಇಂದಿರಾ ಗಾಂಧಿ ದೇಶ ಕಂಡ ಉನ್ನತ ನಾಯಕಿಯಾಗಿದ್ದರು ಎಂದರು.
ನಗರ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಸಾಕ್ ಸಾಲ್ಮರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನಗರ ಕಾಂಗ್ರೆಸ್ ನಾಯಕಿ ನ್ಯಾಯವಾದಿ ಹರಿಣಾಕ್ಷಿ ಜೆ. ಶೆಟ್ಟಿ ವಂದಿಸಿದರು. ಸಭೆ ಯಲ್ಲಿ ಡಿ.ಸಿ.ಸಿ. ಸದಸ್ಯೆ ನ್ಯಾಯವಾದಿ ಸಾಹಿರಾ ಝುಬೈರ್, ಶಾರದಾ ಅರಸ್, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಕೋಶಾಧಿಕಾರಿ ಯಾಕೂಬ್ ಹಾಜಿ ದರ್ಬೆ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಅಝಾದ್, ನಗರ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಸಾದಿಕ್ ಬರೆಪ್ಪಾಡಿ, ಕಾಯದರ್ಶಿ ಯೂನುಸ್ ಖಾನ್ ದರ್ಬೆ, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಪುತ್ತೂರು ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ರೋಶನ್ ರೈ ಬನ್ನೂರು, ಅಶ್ವಿನಿ ಚಂದ್ರಶೇಖರ್, ನಾರಾಯಣ ಕುಡ್ವ, ವೆಂಕಪ್ಪ ವಿ., ಶ್ರೀಧರ ಭಂಡಾರಿ, ದಿನೇಶ್ ಪಿ.ವಿ. ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.