Breaking News

ಕುಂಬ್ರ: ಎಂ.ಎ ಆರ್ಕೇಡ್‌ನಲ್ಲಿ ಮಿಸ್ಮಾ ಎಂಟರ್‌ಪ್ರೈಸಸ್ ಶುಭಾರಂಭ ಬೆಳೆಯುತ್ತಿರುವ ಕುಂಬ್ರಕ್ಕೆ ಮಿಸ್ಮಾದಂತಹ ಸಂಸ್ಥೆ ಅಗತ್ಯ-ಪುತ್ತೂರು ತಂಙಳ್

Puttur_Advt_NewsUnder_1
Puttur_Advt_NewsUnder_1

2 1

ಪ್ರಥಮ ಖರೀದಿ : ಮಿಸ್ಮಾ ಎಂಟರ್‌ಪ್ರೈಸಸ್‌ ನಿಂದ ಕುಂಬ್ರ ವರ್ತಕ ಸಂಘದ ಪ್ರಧಾನ ಕಾರ್ಯದರ್ಶಿ ರಫೀಕ್ ಅಲ್ ರಾಯಾ ಅವರು ಟೈಲ್ಸ್ ಖರೀದಿಸುವ ಮೂಲಕ ಪ್ರಥಮ ಖರೀದಿ ಮಾಡಿದರು 

ಮಿಸ್ಮಾ ವಿಶೇಷತೆಗಳು… ಮಿಸ್ಮಾ ಎಂಟರ್‌ಪ್ರೈಸಸ್‌ನಲ್ಲಿ ಗ್ಲಾಸ್, ಪ್ಲೈವುಡ್, ಡೋರ್‍ಸ್, ಜಿ.ಐ ಶೀಟ್, ಫೈಬರ್ ಮತ್ತು ಪಿ.ವಿ.ಸಿ ಶೀಟ್, ಕಲರ್ ಕೋಟೆಡ್ ಶೀಟ್, ಅಲ್ಯೂಮಿನಿಯಂ ಶೀಟ್, ಸೈಡ್ ನೆಟ್ಸ್, ಪಿ.ವಿ.ಸಿ ಡೋರ್ ಶೀಟ್, ಮೊಸ್ಕಿಟೋ ನೆಟ್ಸ್, ಜಿ.ಐ ಮತ್ತು ಎಂ.ಎಸ್ ವೆಲ್ಡೆಡ್ ಮೆಸ್ಸ್, ಚೈನ್ ಮೆಸ್ಸ್, ಜಿ.ಐ ಪೈಪ್ ಮತ್ತು ಸ್ಕ್ವೇರ್ ಟ್ಯೂಬ್ಸ್, ಸ್ಯಾನಿಟರಿ, ಟೈಲ್ಸ್, ಸನ್‌ಮೈಕ ಸ್ಪರ್ಧಾತ್ಮಕ ದರದಲ್ಲಿ ನಮ್ಮಲ್ಲಿ ಲಭ್ಯವಿದೆ. ಅಲ್ಲದೇ ಫೈಬರ್, ಪ್ಲೈವುಡ್, ಡೋರ್ ವರ್ಕ್ಸ್ ಮತ್ತು ಅಲ್ಯೂಮಿನಿಯಂ ವರ್ಕ್ಸ್ ಮಾಡಿಕೊಡುವ ಸೌಲಭ್ಯವೂ ಇದೆ. ಗ್ರಾಹಕರ ಸಹಕಾರ ಬಯಸುತ್ತೇವೆ. -ಅಬ್ದುಲ್ ಮಜೀದ್ ಬಾಳಾಯ, ಮಾಲಕರು ಮಿಸ್ಮಾ ಎಂಟರ್‌ಪ್ರೈಸಸ್ ಕುಂಬ್ರ
ಪುತ್ತೂರು: ಕುಂಬ್ರದ ಎಂ.ಎ ಆರ್ಕೇಡ್‌ನಲ್ಲಿ ಮಿಸ್ಮಾ ಎಂಟರ್‌ಪ್ರೈಸಸ್ ಸಂಸ್ಥೆಯು ಅ.31ರಂದು ಶುಭಾರಂಭಗೊಂಡಿತು. ಸಂಸ್ಥೆಯನ್ನು ಉದ್ಘಾಟಿಸಿ ದುವಾ ಮಾಡಿದ ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ಮಾತನಾಡಿ ಮಿಸ್ಮಾದಂತಹ ಸಂಸ್ಥೆಗಳು ಬೆಳೆಯುತ್ತಿರುವ ಕುಂಬ್ರ ಪರಿಸರಕ್ಕೆ ಅತೀ ಅಗತ್ಯವಾಗಿತ್ತು ಎಂದು ಹೇಳಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪುತ್ತೂರು ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಎಸ್ ಇಬ್ರಾಹಿಂ ಕಮ್ಮಾಡಿ, ಕುಂಬ್ರ ಎಂ.ಎ ಆರ್ಕೇಡ್‌ನ ಮಾಲಕ ಹಾಜಿ ಕೆ ಮಮ್ಮಾಲಿ ಬೆಳ್ಳಾರೆ, ಕುಂಬ್ರ ಕೆ.ಐ.ಸಿ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ, ಉದ್ಯಮಿ ಯೂಸುಫ್ ಹಾಜಿ ಕೈಕಾರ, ಒಳಮೊಗ್ರು ಗ್ರಾ.ಪಂ ಸದಸ್ಯ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಕುಂಬ್ರ ವರ್ತಕರ ಸಂಘದ ಕಾರ್ಯದರ್ಶಿ ರಫೀಕ್ ಅಲ್‌ರಾಯಾ, ಇಸ್ಮಾಯಿಲ್ ಹಾಜಿ ಟಾಸ್ಕೋ, ಕೂಡುರಸ್ತೆ ಮಸೀದಿಯ ಖತೀಬ್ ಯಾಕೂಬ್ ದಾರಿಮಿ, ಪಣೆಮಜಲು ಮಸೀದಿಯ ಖತೀಬ್ ಅಬ್ಬಾಸ್ ಮದನಿ, ರಶೀದ್ ಹಾಜಿ ನೈತ್ತಾಡಿ, ಇಬ್ರಾಹಿಂ ಪಳ್ಳಿಕೆರೆ, ಉಮ್ಮರ್ ಸವಣೂರು, ಕೂಡುರಸ್ತೆ ಮಸೀದಿಯ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಕೂಡುರಸ್ತೆ, ಎಸ್.ಎಂ ಹಾರಿಸ್ ಕುಂಬ್ರ, ಮಾಹಿನ್ ಹಾಜಿ ಬಾಳಾಯ, ಇಸ್ಮಾಯಿಲ್ ದರ್ಬೆ, ಶರೀಫ್ ಎಲಿಯ, ನಾಸಿರ್ ಅಲ್‌ರಾಯಾ ಕುಂಬ್ರ, ಹಾರಿಸ್ ಕೂಡುರಸ್ತೆ, ಮುನೀರ್ ತಿಂಗಳಾಡಿ, ಹಕೀಂ ಕುಂಬ್ರ ಜುನೈದ್ ಕುಂಬ್ರ, ಆಸಿಫ್ ಸವಣೂರು, ಸಿದ್ದಿಕ್ ಅಜ್ಜಿಕಲ್ಲು ಹಾಗೂ ಮಿಸ್ಮಾ ಎಂಟರ್‌ಪ್ರೈಸಸ್‌ನ ಮಾಲಕರ ತಂದೆ ಯೂಸುಫ್ ಹಾಜಿ ಬಾಳಾಯ ಉಪಸ್ಥಿತರಿದ್ದರು. ಮಾಲಕರಾದ ಅಬ್ದುಲ್ ಮಜೀದ್ ಬಾಳಾಯ ಹಾಗೂ ಅಬ್ದುಲ್ ರಶೀದ್ ಬಾಳಾಯ ಅವರು ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.