ಪುಸ್ತಕ ಹಬ್ಬ ಸಪ್ತಾಹದಲ್ಲಿ ‘ಚೆಲುವತರು’ ಪುಸ್ತಕದ ವಿಚಾರಗೋಷ್ಠಿ ಭಾರತದ ಶಿಕ್ಷಣ ಪದ್ಧತಿಯನ್ನು ಬ್ರಿಟೀಷರೆ ಬುಡಮೇಲು ಮಾಡಿದ್ದು-ಡಾ| ಮಾಧವ ಪೆರಾಜೆ

Puttur_Advt_NewsUnder_1
Puttur_Advt_NewsUnder_1

6

ಕರುಣಾಳು ಬಾ ಬೆಳಕೆ ಪಾಶ್ಚಾತ್ಯದ ಪ್ರಾರ್ಥನೆ ಸಭಾಕಾರ್‍ಯಕ್ರಮದ ಪ್ರಾರಂಭದಲ್ಲಿ ಹೆಚ್ಚಿನ ಕಡೆ ಕರುಣಾಳು ಬಾ ಬೆಳಕೆ ಎಂದು ಪ್ರಾರ್ಥನೆ ಹಾಡುತ್ತಾರೆ. ಆದರೆ ಇದು ಭಾರತೀಯ ಪ್ರಾರ್ಥನೆಯಲ್ಲ. ಬಿ.ಎಂ.ಶ್ರೀಕಂಠಯ್ಯನವರು ಇಂಗ್ಲೀಷ್‌ನಲ್ಲಿದ್ದ ಪಾಶ್ಚಾತ್ಯರ ಪ್ರಾರ್ಥನೆಯನ್ನು ಕನ್ನಡಕ್ಕೆ ಅನುವಾದಿಸಿದ್ದು. ಭಾರತೀಯರಾದ ನಾವು ಬಿಡಿ ಬೆಳಕನ್ನು ಆರಾಧಿಸುವುದಿಲ್ಲ. ಅಖಂಡವಾದ ಮೂಲ ಬೆಳಕಾದ ಸೂರ್ಯ, ಚಂದ್ರನನ್ನು ಆರಾಧಿಸುತ್ತೇವೆ. ಕರುಣಾಳು ಬಾ ಬೆಳಕೆ ಎಂಬುದರಲ್ಲಿ ಜ್ಞಾನ ಇಲ್ಲ.-ಡಾ| ಮಾಧವ ಪೆರಾಜೆ

ಪುತ್ತೂರು: 18ನೇ ಶತಮಾನದ ಶಿಕ್ಷಣ ಪದ್ಧತಿಯನ್ನು ರಿವ್ಯೂ ಮಾಡಲು ಸಾಧ್ಯವಿಲ್ಲ. ನಮ್ಮ ಜ್ಞಾನದ ಮೂಲಕ್ಕೇ ಕೊಡಲಿ ಪೆಟ್ಟು ಹಾಕಿದ ಬ್ರಿಟೀಷರು ಅದರ ಬೇರನ್ನು ಕಿತ್ತು ಹಾಕಿದ್ದಾರೆ ಎಂದು ಹಂಪಿ ವಿಶ್ವವಿದ್ಯಾನಿಲಯದ ಫ್ರೊ. ಡಾ ಮಾಧವ ಪೆರಾಜೆಯವರು ಹೇಳಿದರು.
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಪುತ್ತೂರು ತಾಲೂಕು ಘಟಕ ಮತ್ತು ಜ್ಞಾನಗಂಗಾ ಪುಸ್ತಕ ಮಳಿಗೆ ಸಂಯುಕ್ತ ಆಶ್ರಯದಲ್ಲಿ ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯುತ್ತಿರುವ ಪುಸ್ತಕ ಹಬ್ಬ ಸಪ್ತಾಹದಲ್ಲಿ ಅ.೨೯ರಂದು, ಮಹಾತ್ಮಾ ಗಾಂಧೀಜಿಯವರ ಒಡನಾಡಿ ಧರ್ಮಪಾಲರವರು ಇಂಗ್ಲೀಷ್‌ನಲ್ಲಿ ಬರೆದು ಕನ್ನಡಕ್ಕೆ ಅನುವಾದಿಸಿದ ೞಚೆಲುವತರುೞ ಪುಸ್ತಕದ ವಿಚಾರಗೋಷ್ಠಿಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಾಶ್ಚಾತ್ಯರು ಬಿಡಿ ಬೆಳಕನ್ನು ಆರಾಧಿಸಿದರು. ಭಾರತೀಯರು ಮೂಲ ಬೆಳಕನ್ನು ಆರಾಧಿಸುವವರು. ಇಂತಹ ಸಂದರ್ಭದಲ್ಲಿ ಭಾರತಕ್ಕೆ ಆಗಮಿಸಿದ ಬ್ರಿಟೀಷರು ನಮ್ಮ ಶಿಕ್ಷಣ ಪದ್ಧತಿಯನ್ನು ಬುಡಮೇಲು ಮಾಡಿದ್ದಾರೆ. ಈ ಕುರಿತು ಗಾಂಧೀಜಿಯವರು ಅಂದೇ ಬ್ರಿಟೀಷರ ಎದುರು ಚರ್ಚಿಸಿದ್ದು, ವಾದ ಮಂಡನೆಗಾಗಿ ಭಾರತೀಯ ಶಿಕ್ಷಣದ ಮೂಲದ ದಾಖಲೆ ಸಂಗ್ರಹ ಮಾಡುತ್ತಿದ್ದ ವೇಳೆ ಅವರನ್ನು ಬ್ರಿಟೀಷರು ಬಂಧಿಸಿದ್ದರು. ಆದರೆ ಗಾಂಧೀಜಿಯವರ ಒಡನಾಡಿ ಧರ್ಮಪಾಲರವರು ಗಾಂಧೀಜಿಯವರ ಕೆಲಸವನ್ನು ಪೂರ್ಣಗೊಳಿಸಿ ಭಾರತೀಯ ಶಿಕ್ಷಣವೇ ಶ್ರೇಷ್ಟ ಎಂಬುದರ ಕುರಿತು ದಾಖಲೆ ಸಹಿತ ಕೃತಿ ಬರೆದರು. ಅದನ್ನೆ ಅವರ ಪುತ್ರಿಯ ಅನುಮತಿಯೊಂದಿಗೆ ಕನ್ನಡಕ್ಕೆ ಅನುವಾದಿಸಿದ್ದೇನೆ ಎಂದರು ಡಾ| ಮಾಧವ ಪೆರಾಜೆ ಹೇಳಿದರಲ್ಲದೆ ಭಾರತಕ್ಕೆ ಸಾರ್ವತ್ರಿಕ ಶಿಕ್ಷಣ ಕೊಟ್ಟವರು ಬ್ರಿಟೀಷರು ಎಂದು ನಂಬಿರುವ ಒಂದು ಸ್ಟೇಟ್‌ಮೆಂಟನ್ನು ಈ ಪುಸ್ತಕ ಅಲ್ಲಗಲೆಯುತ್ತದೆ ಮತ್ತು ಭಾರತೀಯ ಸಾರ್ವತ್ರಿಕ ಶಿಕ್ಷಣ 18ನೇ ಶತಮಾನದ ಹಿಂದೆಯೂ ಇತ್ತು ಎಂದು ದಾಖಲೆ ಸಹಿತ ಕೊಡುತ್ತದೆ ಎಂದರು.
ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ ವರದರಾಜ ಚಂದ್ರಗಿರಿಯವರು ಮಾತನಾಡಿ ಭಾರತ ಬಹಳ ಹಿಂದಿನಿಂದಲೂ ಶಿಕ್ಷಣಕ್ಕೆ ದೊಡ್ಡ ಸ್ಥಾನ ಕೊಟ್ಟಿದೆ ಎಂದರು. ಸ್ವೂರಪ ಚಿಂತನ ಜಾಥಾದ ಗೋಪಾಡ್ಕರ್‌ರವರು ಮಾತನಾಡಿ ಇವತ್ತು ಪಾಂಡಿತ್ಯದ ಶಿಕ್ಷಣಕ್ಕಿಂತ ಸರ್ಟಿಫಿಕೇಟ್ ಪಡೆಯುವುದೇ ಶಿಕ್ಷಣ ಎಂಬಂತಾಗಿದೆ. ಈ ಸರ್ಟಿಫಿಕೇಟ್ ಫ್ಯಾಕ್ಟರಿ ತಯಾರಿಸಿದವರು ಬ್ರಿಟೀಷರು ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಐತ್ತಪ್ಪ ನಾಯ್ಕ್ ಗೋಷ್ಠಿಯನ್ನು ಉದ್ಘಾಟಿಸಿದರು. ಕರ್ನಾಟಕ ಸಂಘದ ಅಧ್ಯಕ್ಷ ಬಿ.ಪುರಂದರ ಭಟ್, ಸರಸ್ವತಿ ಶಿಕ್ಷಣ ಸಂಸ್ಥೆಯ ಶೈಲಜಾ ಶೆಟ್ಟಿ, ವಿಶ್ವನಾಥ ಬಲ್ಯಾಯ, ವಿದ್ಯಾರ್ಥಿ ಅಕಿನ್ಯ ಅತಿಥಿಗಳನ್ನು ಗೌರವಿಸಿದರು. ಅನುಶ್ರೀ, ಕಾವ್ಯ ಪ್ರಾರ್ಥಿಸಿದರು. ಜ್ಞಾನಗಂಗಾ ಪುಸ್ತಕ ಮಳಿಗೆಯ ಪ್ರಕಾಶ್ ಕೊಡಂಕೀರಿ ಸ್ವಾಗತಿಸಿ, ಸರಸ್ವತಿ ವಿದ್ಯಾಸಂಸ್ಥೆಯ ಅವಿನಾಶ್ ಕೊಡೆಂಕಿರಿ ಕಾರ್‍ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.