ದಿವಿತ್ ಯು.ರೈ, ಹಾರಾಡಿ ಶಾಲೆಯ ವತಿಯಿಂದ ಶಿಕ್ಷಣ ಸಚಿವರಿಗೆ ಅಭಿನಂದನೆ ಸಲ್ಲಿಕೆ

Puttur_Advt_NewsUnder_1
Puttur_Advt_NewsUnder_1

divithಪುತ್ತೂರು: ಹಾರಾಡಿ ಶಾಲೆಯಲ್ಲಿ ಹೆಚ್ಚುವರಿಯೆಂದು ಗುರುತಿಸಲ್ಪಟ್ಟಿದ್ದ ಶಿಕ್ಷಕರನ್ನು ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಒಟ್ಟು ಶೈಕ್ಷಣಿಕ ಹಿತದೃಷ್ಟಿಯಿಂದ ಶಾಲೆಯಲ್ಲಿಯೇ ಉಳಿಸಿಕೊಡಬೇಕೆಂಬ ವಿದ್ಯಾರ್ಥಿಗಳ ಹಾಗೂ ಪೋಷಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಶಿಕ್ಷಕರನ್ನು ಶಾಲೆಯಲ್ಲಿಯೇ ಉಳಿಸಿಕೊಡುವಲ್ಲಿ ಕಾರಣರಾದ ರಾಜ್ಯ ಪ್ರೌಢ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್ ಸೇಠ್ ಇವರನ್ನು ಭೇಟಿಯಾದ ಹಾರಾಡಿ ಶಾಲೆಯ ನಿಯೋಗವು ವಿದ್ಯಾರ್ಥಿ ದಿವಿತ್ ಯು.ರೈ ಹಾಗೂ ಶಾಲಾಭಿವೃದ್ಧಿ ಸಮಿತಿಯ ಪರವಾಗಿ ಸಚಿವರಿಗೆ ಅಭಿನಂದನೆಯನ್ನು ಸಲ್ಲಿಸಿತು.
ಅ.30ರಂದು ಮಂಗಳೂರಿಗೆ ಭೇಟಿ ನೀಡಿದ್ದ ಸಚಿವರನ್ನು ನಿರೀಕ್ಷಣಾ ಮಂದಿರದಲ್ಲಿ ಭೇಟಿ ಮಾಡಿ ಶಾಲು ಹೊದಿಸಿ ಕೃತಜ್ಞತಾ ಪತ್ರ ನೀಡಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿ ದಿವಿತ್ ಯು.ರೈ ತಾನೇ ಆಂಗ್ಲ ಭಾಷೆಯಲ್ಲಿ ರಚಿಸಿದ ಸಚಿವರಿಗೆ ಕೃತಜ್ಞತೆ ಸಲ್ಲಿಸುವ ಸ್ವ ರಚಿತ ಕವನವನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ವಾಲ್ಟರ್ ಡಿ’ಮೆಲ್ಲೋ ಶಾಲೆಯ ಒಟ್ಟು ಕಾರ್ಯಚಟುವಟಿಕೆಗಳ ಕುರಿತಂತೆ ಸಚಿವರಿಗೆ ಮಾಹಿತಿ ನೀಡಿದರು. ಶಾಲೆಯ ಮಕ್ಕಳ ವಾರ್ಷಿಕ ಹಬ್ಬಕ್ಕೆ ಆಗಮಿಸುವಂತೆ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಪ್ರತಿಮಾ ಯು. ರೈ ಮಾಡಿದ ಮನವಿಗೆ ಸ್ಪಂದಿಸಿದ ಸಚಿವರು ತಾವು ಹಾಗೂ ಗೃಹಸಚಿವರು ಇಬ್ಬರೂ ಬರುತ್ತೇವೆ ಎಂಬ ಭರವಸೆ ನೀಡಿದರು. ಅಲ್ಲದೆ ವಿದ್ಯಾರ್ಥಿ ದಿವಿತ್ ರೈ ರಚಿಸಿರುವ ಆಂಗ್ಲ ಕವನ ಸಂಕಲನಕ್ಕೆ ಶುಭಹಾರೈಕೆ ಬರೆದು ಕಳಿಸುತ್ತೇನೆಂದು ತಿಳಿಸಿದರು. ಈ ಸಂದರ್ಭದಲ್ಲಿ ಪುತ್ತೂರು ಕಾಂಗ್ರೆಸ್ ಸಮಿತಿಯ ಸದಸ್ಯರಾದ ರವಿಪ್ರಸಾದ್ ಶೆಟ್ಟಿ, ಪುತ್ತೂರು ನಗರಸಭಾ ಸದಸ್ಯ ಶಕ್ತಿ ಸಿನ್ಹಾ, ನಿತ್ಯಾನಂದ ಮಂಗಳೂರು, ಹಾರಾಡಿ ಶಾಲಾ ಮುಖ್ಯ ಶಿಕ್ಷಕ ಮುದರ ಎಸ್, ಪೋಷಕರಾದ ಉದಯ ಕುಮಾರ್ ರೈ, ಚೈತ್ರಾ , ಶಿಕ್ಷಕ ಪ್ರಶಾಂತ್ ಅನಂತಾಡಿ ಮತ್ತಿತರರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.