ಹನುಮಗಿರಿ ದೀಪಾವಳಿ ದೀಪೋತ್ಸವ, ಪಂಚಮುಖಿ ಟ್ರೋಫಿ 2016 ಪ್ರಥಮ ಕ್ಲಾಸಿಕ್ ರೆಂಜ, ಯಂಗ್ ಸ್ಟಾರ್ ಆರ್‍ಲಪದವು ರನ್ನರ್‍ಸ್

Puttur_Advt_NewsUnder_1
Puttur_Advt_NewsUnder_1

10 11ಪುತ್ತೂರು: ನವಚೇತನ ಮಿತ್ರವೃಂದ ಹನುಮಗಿರಿ ಇದರ ಆಶ್ರಯದಲ್ಲಿ ದೀಪಾವಳಿ ಪ್ರಯುಕ್ತ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟ ಪಂಚಮುಖಿ ಟ್ರೋಫಿ 2016ಅ.30 ರಂದು ಹನುಮಗಿರಿ ವಠಾರದಲ್ಲಿ ನಡೆಯಿತು.ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಹನುಮಗಿರಿ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ ವಹಿಸಿ ಮಾತನಾಡಿ ದೀಪಾವಳಿ ಹಬ್ಬವನ್ನು ವಿಶ್ವಸಂಸ್ಥೆ ಕೂಡ ಆಚರಿಸುವ ಮೂಲಕ ಜಗತ್ತಿಗೆ ಹಿಂದೂ ಧರ್ಮ ಬೇಕು ಎಂದು ಸಾರಿದೆ. ನಾವೆಲ್ಲರೂ ಧಾರ್ಮಿಕ ಆಚರಣೆಗಳನ್ನು ಅರ್ಧಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ನವಚೇತನ ಮಿತ್ರವೃಂದ ಕ್ರೀಡೆಯಲ್ಲದೆ ಧಾರ್ಮಿಕತೆಯಲ್ಲೂ ಉತ್ತಮ ಕಾರ್ಯಮಾಡುತ್ತಿದೆ. ಮಣ್ಣಿನ ಆಟ ಕಬಡ್ಡಿಯೊಂದಿಗೆ ದೀಪಾವಳಿಯನ್ನು ಆಚರಿಸುವುದು ವಿಶೇಷವಾಗಿದೆ ಎಂದರು..ಮುಖ್ಯ ಅತಿಥಿ ಗಳಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ದುರ್ಗಾಪ್ರಸಾದ್ ರೈ ಕುಂಬ್ರ ಮಾತನಾಡಿ ಹಿಂದೂ ಧರ್ಮದ ಸಂಸ್ಕ್ರತಿಯಲ್ಲಿ ಬದುಕುವವರು ನಾವು. ನಮ್ಮ ಸಂಸ್ಕೃತಿಗೆ ಚ್ಯುತಿಬಾರದ ರೀತಿಯಲ್ಲಿ ಹಬ್ಬ ಆಚರಿಸಬೇಕು. ಗೋವು ಎಲ್ಲವನ್ನು ಕೊಡುವ ವಸ್ತು. ಅದೇ ನಮಗೆ ದೊಡ್ಡ ಸಂಪತ್ತು. ಬಲೀಂದ್ರ ಪೂಜೆಯೊಂದಿಗೆ ಗೋವನ್ನು, ಮನುಷ್ಯರನ್ನು ಪ್ರೀತಿಸುವ ಕೆಲಸ ಮಾಡಬೇಕು. ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ಪ್ರೌಢಶಾಲೆಯ ಮುಖ್ಯಗುರು ಸರ್ವೋತ್ತಮ ಬೋರ್ಕರ್ ಶುಭಹಾರೈಸಿದರು. ಈ ಸಂದರ್ಭದಲ್ಲಿ ನಿವೃತ್ತರಾಗಲಿರುವ ಮುಖ್ಯಗುರು ಸರ್ವೋತ್ತಮ ಬೋರ್ಕರ್‌ರವರನ್ನು ಸನ್ಮಾನಿಸಲಾಯಿತು. ಗೋ ಪೂಜೆ, ಬಲೀಂದ್ರ ಪೂಜೆ ನಡೆಯಿತು. ಸಂಜೆ ಶ್ರೀ ಕ್ಷೇತ್ರದಲ್ಲಿ ದೀಪಾವಳಿ ದೀಪೋತ್ಸವದಲ್ಲಿ ಸಹಸ್ರ ದೀಪಾಲಂಕಾರ, ಪವಮಾನ ರಥೋತ್ಸವ, ರಂಗ ಪೂಜೆ, ಪ್ರಸಾದ ಭೋಜನ. ವಿಶೇಷ ಆಕರ್ಷಣೆಯಾಗಿ ಬೆಳಕಿನ ಚಿತ್ತಾರ ಪ್ರದರ್ಶನ ನಡೆಯಿತು. ನವಚೇತನ ಮಿತ್ರವೃಂದ ಅಧ್ಯಕ್ಷ ದೇವಿಪ್ರಕಾಶ್ ಉಪಸ್ಥಿತರಿದ್ದರು. ನವಚೇತನ ಮಿತ್ರವೃಂದದ ಗೌರವಾಧ್ಯಕ್ಷ ಶಿವರಾಮ್ ಪಿ ಸ್ವಾಗತಿಸಿ, ಸಂಚಾಲಕ ಪ್ರಶಾಂತ್ ಕೆ ನಾಯರ್ ಕುಂಟಾಪು ವಂದಿಸಿದರು. ಚೆತನಾ ಪ್ರಾರ್ಥನೆ ಹಾಡಿದರು. ಸುಖೇಶ್ ರೈ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಶಿಕ್ಷಕ ಆನಂದ ರೈ, ನವಚೇತನ ಮಿತ್ರವೃಂದದ ಕೋಶಾಧಿಕಾರಿ ರಾಜೇಶ್, ಸದಸ್ಯ ರಾಮರವರು ಹೂವು ನೀಡಿ ಅತಿಥಿಗಳನ್ನು ಸ್ವಾಗತಿಸಿದರು. ಸಮಾರೋಪ ಸಮಾರಂಭಲ್ಲಿ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ರಮೇಶ್, ಬಹುಮಾನ ವಿತರಿಸಿ ಶುಭಹಾರೈಸಿದರು ಗಜಾನನ ಶಾಲೆ ಹಳೆ ವಿದ್ಯಾರ್ಥಿನಿ ಗಂಗಾದೇವಿ ರಮೇಶ್ ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.