ರಾಮಕುಂಜ ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ಆಗ್ರಹ: ಕೃಷಿಕರಿಗೆ ಕಷ್ಟ ನಷ್ಟವಾಗದಂತೆ ಬೋರ್‌ವೆಲ್ ಕೊರೆಯಲು ಅನುಮತಿ

Puttur_Advt_NewsUnder_1
Puttur_Advt_NewsUnder_1

ramakunjaರಾಮಕುಂಜ: ಬೋರ್‌ವೆಲ್ ಕೊರೆಯಲು ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳಬೇಕೆಂಬ ಸರಕಾರದ ನಿಯಮದಿಂದ ಕೃಷಿಕರಿಗೆ ಸಂಕಷ್ಟ ಎದುರಾಗಿದೆ. ಆದ್ದರಿಂದ ಬೋರ್‌ವೆಲ್ ಕೊರೆಯಲು ಈ ಹಿಂದಿನಂತೆ ಅನುಮತಿ ನೀಡಬೇಕೆಂದು ಕೋರಿ ಸರಕಾರಕ್ಕೆ ಬರೆಯಲು ರಾಮಕುಂಜ ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿದೆ.
ಸಭೆ ಅ.೨೬ರಂದು ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಆರ್.ಕೆ.,ಯವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯರುಗಳು, ಬೋರ್‌ವೆಲ್ ಕೊರೆಯಲು ಷರತ್ತು ವಿಧಿಸಿರುವುದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬೇಸಿಗೆ ಕಾಲದಲ್ಲಿ ಕೃಷಿಗಳಿಗೆ ನೀರಿನ ಅವಶ್ಯಕತೆ ಇದೆ. ಸಕಾಲದಲ್ಲಿ ಕೃಷಿಗೆ ನೀರು ಪೂರೈಕೆಯಾಗದೇ ಇದ್ದಲ್ಲಿ ಕೃಷಿಕರು ನಷ್ಟ, ಕಷ್ಟ ಎದುರಿಸಬೇಕಾಗುತ್ತದೆ. ಆದ್ದರಿಂದ ಈ ಹಿಂದಿನಂತೆಯೇ ಬೋರ್‌ವೆಲ್ ಕೊರೆಯಲು ಕೃಷಿಕರಿಗೆ ಅನುಮತಿ ನೀಡಬೇಕೆಂದು ಒತ್ತಾಯಿಸಿದರು. ಬಳಿಕ ಈ ಬಗ್ಗೆ ಸರಕಾರಕ್ಕೆ ಬರೆಯಲು ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.
ವರ್ತಕರ ಸಭೆಗೆ ನಿರ್ಧಾರ: ಪ್ಲಾಸ್ಟಿಕ್ ನಿಷೇಧ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆದು ಇದಕ್ಕೆ ಸಂಬಂಧಿಸಿದಂತೆ ಗ್ರಾ.ಪಂ.ವ್ಯಾಪ್ತಿಯ ವರ್ತಕರ ಸಭೆ ಕರೆದು ಸೂಕ್ತ ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಣಯಿಸಲಾಯಿತು. ಸದಸ್ಯರ ಆಸ್ತಿ ಘೋಷಣೆ ಮಾಡಬೇಕೆಂಬ ಸರ್ಕಾರದ ಹೊಸ ಸುತ್ತೋಲೆ ಕುರಿತೂ ಸಭೆಯಲ್ಲಿ ಸದಸ್ಯರು ಚರ್ಚೆ ನಡೆಸಿದರು. ನ.೧೦ರಂದು ಉದ್ಯೋಗ ಖಾತ್ರಿ ಯೋಜನೆ ಗ್ರಾಮಸಭೆ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಸ್ಥಾಯಿ ಸಮಿತಿ ಪುನರ್ರಚನೆ: ಕಲಂ ೭೩ನೇ ತಿದ್ದುಪಡಿ ಪ್ರಕಾರ ಸಭೆಯಲ್ಲಿ ಹೊಸ ಸ್ಥಾಯಿ ಸಮಿತಿ ರಚನೆ ಮಾಡಲಾಯಿತು. ಹಣಕಾಸು-ಲೆಕ್ಕಪರಿಶೋಧನಾ ಸಮಿತಿ ಅಧ್ಯಕ್ಷರಾಗಿ ಗ್ರಾ.ಪಂ.ಅಧ್ಯಕ್ಷ ಪ್ರಶಾಂತ್ ಆರ್.ಕೆ., ಸದಸ್ಯರುಗಳಾಗಿ ಯತೀಶ್ ಕುಮಾರ್, ಹೊನ್ನಪ್ಪ ಪೂಜಾರಿ, ಪ್ರೇಮಲತಾ, ಜೊಹರಾ ನಝೀರ್, ಯೋಜನಾ ಸಮಿತಿ ಅಧ್ಯಕ್ಷರಾಗಿ ಗ್ರಾ.ಪಂ.ಅಧ್ಯಕ್ಷ ಪ್ರಶಾಂತ್ ಆರ್.ಕೆ., ಸದಸ್ಯರುಗಳಾಗಿ ಶೀಲಾವತಿ, ಜಯಶ್ರೀ, ಅಬ್ದುಲ್ ರಹಿಮಾನ್,ಸದಾನಂದ, ಸುಶೀಲಾರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ತಾ.ಪಂ.ಸದಸ್ಯೆಯರಾದ ಜಯಂತಿ ಆರ್.ಗೌಡ, ತೇಜಸ್ವಿನಿ ಶೇಖರ ಗೌಡ, ಉಪಾಧ್ಯಕ್ಷೆ ಜಯಂತಿ ನಾಯ್ಕ್, ಸದಸ್ಯರುಗಳಾದ ಕೇಶವ ಗಾಂಧಿಪೇಟೆ, ಸುಶೀಲಾ ವಿ.ಟಿ., ಪ್ರೇಮಲತಾ ಪಿ., ಜೊಹರಾ ನಝೀರ್, ಅಬ್ದುಲ್ ರಹಿಮಾನ್ ಹೆಚ್., ಜಯಶ್ರೀ ಇರ್ಕಿ, ವಾರಿಜಾ ಕೆ., ಯತೀಶ್ ಕುಮಾರ್ ಬಿ,, ಶೀಲಾವತಿ, ಹೊನ್ನಪ್ಪ ಪೂಜಾರಿ, ಅವಿನಾಶ್, ಸದಾನಂದ ಸಾಂತ್ಯ, ಪಿ.ಟಿ.ಲೀಲಾವತಿ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಪಿಡಿಒ ರವಿಚಂದ್ರ ಸ್ವಾಗತಿಸಿ ಸಾರ್ವಜನಿಕರ ಹಾಗೂ ಸರಕಾರಿ ಸುತ್ತೋಲೆಯನ್ನು ಸಭೆಗೆ ಮಂಡಿಸಿದರು. ಕಾರ‍್ಯದರ್ಶಿ ಮರಿಯಮ್ಮ ವಿ.ಎಂ.,ವರದಿ ಮಂಡಿಸಿ ಕೊನೆಯಲ್ಲಿ ವಂದಿಸಿದರು. ಸಿಬ್ಬಂದಿಗಳಾದ ದುರ್ಗಾಪ್ರಸಾದ್, ನಾರಾಯಣ, ಮಾಧವ, ದೀಕ್ಷಿತಾರವರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.