ಗೋಳಿತ್ತೊಟ್ಟು: ವಿದ್ಯುತ್ ಬಿಲ್ಲು ಸಂಗ್ರಹ ಆರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

golithottu

ನೆಲ್ಯಾಡಿ: ಗೋಳಿತ್ತೊಟ್ಟು ಗೌಡ ಕಾಂಪ್ಲೆಕ್ಸ್‌ನಲ್ಲಿ ಮೆಸ್ಕಾಂನ ವಿದ್ಯುತ್ ಬಿಲ್ಲು ಸಂಗ್ರಹ ಕೌಂಟರ್ ನ.2ರಂದು ಆರಂಭಗೊಂಡಿದೆ.

ನೆಲ್ಯಾಡಿ ಕ್ಷೇತ್ರದ ಜಿ.ಪಂ.ಸದಸ್ಯ ಸರ್ವೋತ್ತಮ ಗೌಡರವರು ದೀಪ ಬೆಳಗಿಸಿ ಬಿಲ್ಲು ಸಂಗ್ರಹಕ್ಕೆ ಚಾಲನೆ ನೀಡಿದರು. ಕಾರ‍್ಯಕ್ರಮದಲ್ಲಿ ತಾ.ಪಂ.ಸದಸ್ಯೆ ತೇಜಸ್ವಿನಿ ಶೇಖರ ಗೌಡ ಕಟ್ಟಪುಣಿ, ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷೆ ಶಾಲಿನಿ ಶೇಖರ ಪೂಜಾರಿ, ಉಪಾಧ್ಯಕ್ಷ ಪ್ರಸಾದ್ ಕೆ.ಪಿ.ಸುಲ್ತಾಜೆ, ಸದಸ್ಯರುಗಳಾದ ವಿಶ್ವನಾಥ ಕುಲಾಲ್, ನೇಮಿರಾಜ್ ಕಲಾಯಿ, ಕಟ್ಟಡ ಮಾಲಕ ವೆಂಕಪ್ಪ ಗೌಡ ಡೆಬ್ಬೇಲಿ, ಕಡಬ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ನಾಸೀರ್ ಹೊಸಮನೆ, ಕೊಣಾಲು ದೇವತೆ ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ರೈ ಕೊಣಾಲುಗುತ್ತು, ಗೋಳಿತ್ತೊಟ್ಟು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೊರಗಪ್ಪ ಗೌಡ ಕಲ್ಲಡ್ಕ, ಸ್ಥಳೀಯ ಪ್ರಮುಖರಾದ ನೋಣಯ್ಯ ಗೌಡ ಅನಿಲ, ಕುಶಾಲಪ್ಪ ಗೌಡ ಅನಿಲ, ರಮೇಶ್ ಕೆ.ಬಿ., ಧನಂಜಯ ಅಲೆಕ್ಕಿ, ಗಣೇಶ್ ಬೊಟ್ಟಿಮಜಲು, ಪಾರ್ಶ್ವನಾಥ ಜೈನ್, ಪ್ರತಾಪ್‌ಚಂದ್ರ ಶೆಟ್ಟಿ ಕುದ್ಮಾರುಗುತ್ತು ಮತ್ತಿತರರು ಉಪಸ್ಥಿತರಿದ್ದರು.

ಮೆಸ್ಕಾಂ ಉಪ್ಪಿನಂಗಡಿ ಶಾಖಾ ಜೆಇ ಸುಂದರ್‌ರವರು ಸ್ವಾಗತಿಸಿ ಮಾತನಾಡಿ, ಬಳಕೆದಾರರ ಬೇಡಿಕೆಯಂತೆ ಗೋಳಿತ್ತೊಟ್ಟಿನಲ್ಲಿ ವಿದ್ಯುತ್ ಬಿಲ್ಲು ಸಂಗ್ರಹ ಕೌಂಟರ್ ತೆರೆಯಲಾಗಿದೆ. ಇಲ್ಲಿ ಪ್ರತಿ ತಿಂಗಳ 2ನೇ ತಾರೀಖಿನಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ತನಕ ವಿದ್ಯುತ್ ಬಿಲ್ಲು ಸ್ವೀಕರಿಸಲಾಗುತ್ತದೆ. ಬಳಕೆದಾರರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಹೇಳಿದರು. ಮೆಸ್ಕಾಂ ಲೈನ್‌ಮ್ಯಾನ್‌ಗಳಾದ ದುರ್ಗಾಸಿಂಗ್, ಭವಿತ್, ರಾಜೇಶ್, ಬಸವರಾಜುರವರು ಸಹಕರಿಸಿದರು.

ಚಿತ್ರ: ಆಪ್ತ ಗೋಳಿತ್ತೊಟ್ಟು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.