ಪುತ್ತೂರಿನಲ್ಲಿ 24ನೇ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶ; ಮಂಗಳೂರಿನಲ್ಲಿ ದ.ಕ. ಜಿಲ್ಲಾಡಳಿತ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

vijnana

  •  ರಾಜ್ಯದ 34 ಜಿಲ್ಲೆಗಳಿಂದ 340 ತಂಡಗಳು ಭಾಗಿ

  •  1700 ವಿದ್ಯಾರ್ಥಿಗಳು, ತೀರ್ಪುಗಾರರು, ಸಂಯೋಜಕರು, ಮಾರ್ಗದರ್ಶಿ ಶಿಕ್ಷಕರು ಸೇರಿದಂತೆ 2 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ

  •  ಸುಮಾರು ರೂ. 15 ಲಕ್ಷ ಖರ್ಚು 

  • ಇಲಾಖೆಗಳು ಸಹಕರಿಸುವಂತೆ ಸಚಿವ ರಮಾನಾಥ ರೈ ಆದೇಶ

ಪುತ್ತೂರು: ೨೪ನೇ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶ ದ.೩, ೪, ೫ರಂದು ಪುತ್ತೂರು ಸುದಾನ ವಸತಿಯುತ ಶಾಲೆಯಲ್ಲಿ, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಹಕಾರದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಬೆಂಗಳೂರು, ದ.ಕ. ಜಿಲ್ಲಾ ಸಮಿತಿ ಆಶ್ರಯದಲ್ಲಿ ನಡೆಯಲಿದ್ದು, ದ.ಕ. ಜಿಲ್ಲಾಡಳಿತ ಸಭೆ ನ.೨ರಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವರೂ, ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ. ರಮಾನಾಥ ರೈಯವರ ನೇತೃತ್ವದಲ್ಲಿ ಮಂಗಳೂರಿನ ದ.ಕ. ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ ಜರಗಿತು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಬೆಂಗಳೂರು ರಾಜ್ಯ ಅಧ್ಯಕ್ಷರೂ, ವಿಧಾನ ಪರಿಷತ್ತು ಸದಸ್ಯರೂ (ಎಂ.ಎಲ್.ಸಿ.) ಆದ ಎಸ್.ವಿ. ಸಂಕನೂರುರವರು ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದ ೩೪ ಶೈಕ್ಷಣಿಕ ಜಿಲ್ಲೆಗಳಿಂದ ತಲಾ ೧೦ ವಿದ್ಯಾರ್ಥಿಗಳ ತಂಡದಂತೆ ಒಟ್ಟು ೩೪೦ ತಂಡಗಳು, ಪ್ರತಿ ತಂಡದಲ್ಲಿ ೫ ಮಕ್ಕಳಿದ್ದು, ಅಂದಾಜು ೧೭೦೦ ಮಂದಿ ವಿದ್ಯಾರ್ಥಿಗಳು, ತೀರ್ಪುಗಾರರು, ಜಿಲ್ಲಾ ಸಂಯೋಜಕರು, ಮಾರ್ಗದರ್ಶಿ ಶಿಕ್ಷಕರು ಸೇರಿ ಒಟ್ಟು ೨೦೦೦ ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು, ಸುಮಾರು ರೂ. ೧೫ ಲಕ್ಷ ಖರ್ಚನ್ನು ಅಂದಾಜಿಸಲಾಗಿದೆ. ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಸಂಪೂರ್ಣ ಸಹಕಾರವನ್ನು ನೀಡಿ ಸಮಾವೇಶವನ್ನು ಅತ್ಯಂತ ಯಶಸ್ವಿಯಾಗಿ ನಡೆಸುವಂತೆ ವಿನಂತಿಸಿದರು. ಉಸ್ತುವಾರಿ ಸಚಿವ ಬಿ. ರಮಾನಾಥ ರೈ ವಿವಿಧ ಇಲಾಖೆಗಳು ಸಹಕಾರ ನೀಡುವಂತೆ ಆದೇಶಿಸಿದರು. ದ.ಕ. ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್‌ರವರು ಸಂಪೂರ್ಣ ಸಹಕಾರವನ್ನು ಜಿಲ್ಲಾಡಳಿತದಿಂದ ನೀಡುವ ಭರವಸೆ ನೀಡಿದರು.

ಸಭೆಯಲ್ಲಿ ದ.ಕ.ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸಾಹುಲ್ ಹಮೀದ್, ಜಿ.ಪಂ. ಉಪಕಾರ್ಯದರ್ಶಿ ಕೆ. ಉಮೇಶ್, ಸಾರ್ವಜನಿಕ ಶಿಕ್ಷಣ ಉಪನಿರ್ದೇಶಕ ವಾಲ್ಟರ್ ಡಿಮೆಲ್ಲೊ, ಮಂಗಳೂರು ಪಿಲಿಕುಳ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ| ಕೆ.ವಿ. ರಾವ್, ಉಪನಿರ್ದೇಶಕರು ಪಿ.ಯು. ಶಿಕ್ಷಣ ಕೆ.ಆರ್. ತಿಮ್ಮಯ್ಯ, ಪರಿಸರ ಮತ್ತು ಮಾಲಿನ್ಯ ಇಲಾಖೆಯ ಜಯಪ್ರಕಾಶ್ ಎಸ್. ನಾಯಕ್, ವಿಜ್ಞಾನ ವಿಷಯ ಪರಿವೀಕ್ಷಕ ಪುರುಷೋತ್ತಮ, ಡಿ.ಡಿ.ಪಿ.ಐ. ಕಛೇರಿ ಶಿಕ್ಷಣಾಧಿಕಾರಿ ಸದಾನಂದ ಪೂಂಜ, ಮಂಗಳೂರು ದಕ್ಷಿಣ ಶಿಕ್ಷಣಾಧಿಕಾರಿ ಎಂ.ಪಿ. ಜ್ಞಾನೇಶ್, ಪುತ್ತೂರು ಶಿಕ್ಷಣಾಧಿ ಕಾರಿ ಶಶಿಧರ ಜಿ.ಎಸ್., ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಶ್ವರಿ , ಮಂಗಳೂರು ಉತ್ತರ ಶಿಕ್ಷಣಾಧಿಕಾರಿ ಮಂಜುಳ, ಆರಕ್ಷಕ ಉಪನಿರ್ದೇಶಕರ ಪರವಾಗಿ ಸುಜಾತ, ಮೂಡಬಿದ್ರಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ರಾಜಶ್ರೀ, ಯುವಜನ ಮತ್ತು ಕ್ರೀಡಾ ಇಲಾಖೆ ಮಂಗಳೂರು ಉಪನಿರ್ದೇಶಕ ಪ್ರದೀಪ ಡಿಸೋಜ, ಕಾರ್ಯಪಾಲಕ ಅಭಿಯಂತರ ಮಂಗಳೂರು ಗಣೇಶ್ ಆರ್., ಅರಳಿ ಕಟ್ಟೆ, ಡಿ.ಎಚ್.ಒ. ರಾಮಕೃಷ್ಣ, ಪುತ್ತೂರು ಸುದಾನ ವಸತಿಯುತ ಶಾಲಾ ಸಂಚಾಲಕ ರೆ. ವಿಜಯ ಹಾರ್ವಿನ್, ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಕ.ರಾ.ವಿ.ಪ. ಕಾರ್ಯಕಾರಿ ಸದಸ್ಯ ಸಿ. ಕೃಷ್ಣೇಗೌಡ, ಕ.ರಾ.ವಿ.ಪ. ದ.ಕ. ಜಿಲ್ಲಾ ಸಮಿತಿ ಕೋಶಾಧಿಕಾರಿ ರೆನ್ನಿ ಡಿಸೋಜ, ಜಂಟಿ ಕಾರ್ಯದರ್ಶಿ ಅನಂತರಾಮ ಹೇರಳೆ, ಜಿ.ಪಂ. ಇಂಜಿನಿಯರ್ ಲೊಯ್ಡ ರೋಡ್ರಿಗಸ್, ವಾಣಿಜ್ಯ ತೆರಿಗೆ ಜಂಟಿ ಆಯುಕ್ತೆ ಪಿ. ವಿದ್ಯಾ ಕುಮಾರಿ, ಮಂಗಳೂರು ಅಭಿ ವೃದ್ಧಿ ಉಪನಿರ್ದೇಶಕರು ಹಾಗೂ ಪ್ರಾಂಶುಪಾಲ ಸಿಪ್ರಿಯಾನ್ ಮೊಂತೆರೊ ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ದ.ಕ. ಜಿಲ್ಲಾ ಸಮಿತಿ ಅಧ್ಯಕ್ಷ ಕಡಮಜಲು ಸುಭಾಸ್ ರೈ ಸ್ವಾಗತಿಸಿ, ಸಹಕಾರ ಯಾಚಿಸಿದರು. ಮಂಗಳೂರು ಡಿ.ಡಿ.ಪಿ.ಐ. ವಾಲ್ಟರ್ ಡಿಮೆಲ್ಲೊ ವಂದಿಸಿದರು. ಕರಾ.ವಿ.ಪ. ಕಾರ್ಯದರ್ಶಿ ಕರುಣಾಕರ್ ಎಚ್.ಎಸ್. ಕಾರ್ಯಕ್ರಮ ನಿರ್ವಹಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.