ಕೂಡುರಸ್ತೆ-ತಿಂಗಳಾಡಿ ಮಧ್ಯೆ ತ್ಯಾಜ್ಯ ಎಸೆಯುವ ಸ್ಥಳದಲ್ಲಿ ಮುಂಡೂರು ಗ್ರಾ.ಪಂ.ನಿಂದ ‘ಎಚ್ಚರಿಕೆ’ ಫಲಕ ಅಳವಡಿಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

munduru

ಪುತ್ತೂರು: ಮುಂಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೂಡುರಸ್ತೆ-ತಿಂಗಳಾಡಿ ಮಧ್ಯೆ ಇರುವ ನಿರ್ಜನ ಪ್ರದೇಶದಲ್ಲಿ ಕೋಳಿ ತ್ಯಾಜ್ಯ ಹಾಗೂ ಇನ್ನಿತರ ತ್ಯಾಜ್ಯಗಳನ್ನು ತಂದು ಹಾಕುತ್ತಿರುವ ಪ್ರದೇಶದಲ್ಲಿ ಮುಂಡೂರು ಗ್ರಾ.ಪಂ ವತಿಯಿಂದ ಎಚ್ಚರಿಕೆಯ ಸೂಚನಾ ಫಲಕ ಅಳವಡಿಸಲಾಗಿದ್ದು ಮುಂದಿನ ದಿನಗಳಲ್ಲಿ ಸದ್ರಿ ಪ್ರದೇಶದಲ್ಲಿ ಯಾರಾದರೂ ತ್ಯಾಜ್ಯ ಎಸೆಯುವುದು ಗಮನಕ್ಕೆ ಬಂದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಫಲಕದಲ್ಲಿ ಸೂಚಿಸಲಾಗಿದೆ. ತಿಂಗಳಾಡಿ-ಕೂಡುರಸ್ತೆ ಮಧ್ಯೆ ಇರುವ ನಿರ್ಜನ ಪ್ರದೇಶದಲ್ಲಿ ಹಲವು ವರ್ಷಗಳಿಂದ ಕೋಳಿ ತ್ಯಾಜ್ಯ ಹಾಗೂ ಇನ್ನಿತರ ತ್ಯಾಜ್ಯಗಳನ್ನು ಯಾರೋ ಗೋಣಿ ಚೀಲದಲ್ಲಿ ತಂದು ರಾತ್ರಿ ವೇಳೆ ಎಸೆದು ಹೋಗುತ್ತಿದ್ದು ಒಂದು ರೀತಿಯ ಅನಧಿಕೃತ ಡಂಪಿಂಗ್ ಯಾರ್ಡ್ ನಿರ್ಮಾಣವಾಗಿತ್ತು. ಇದರಿಂದಾಗಿ ಅಲ್ಲಿ ನಿತ್ಯ ಗಬ್ಬು ವಾಸನೆ ಬರುತ್ತಿದ್ದುದಲ್ಲದೇ ರೋಗ ಹರಡುವ ಭೀತಿಯೂ ಎದುರಾಗಿತ್ತು. ಇಲ್ಲಿನ ಸಮಸ್ಯೆಯ ಕುರಿತು ಸುದ್ದಿ ಪತ್ರಿಕೆಯಲ್ಲಿ ಸಚಿತ್ರ ವರದಿಯೂ ಪ್ರಕಟಗೊಂಡಿತ್ತು. ಬಳಿಕ ಗ್ರಾ.ಪಂ ಸಾಮಾನ್ಯ ಸಭೆಯಲ್ಲೂ ಈ ಬಗ್ಗೆ ಚರ್ಚಿಸಿ ತ್ಯಾಜ್ಯ ಎಸೆಯುವ ಸ್ಥಳದಲ್ಲಿ ಸೂಚನಾ ಫಲಕ ಅಳವಡಿಸುವುದಾಗಿ ನಿರ್ಣಯ ಕೈಗೊಳ್ಳಲಾಗಿತ್ತು. ಇದೀಗ ತ್ಯಾಜ್ಯ ಎಸೆಯುವ ಮೂರು ಕಡೆ ಗ್ರಾ.ಪಂ ವತಿಯಿಂದ ಸೂಚನಾ ಫಲಕ ಅಳವಡಿಸುವ ಮೂಲಕ ಮುಂದಕ್ಕೆ ತ್ಯಾಜ್ಯ ಎಸೆಯದಂತೆ ಕ್ರಮ ಕೈಗೊಳ್ಳಲಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.