ಗ್ರಾಮೀಣ ರೈತರಿಗೆ ವರದಾನ-ಎಸ್.ಡಿ ವಸಂತ
ಪುತ್ತೂರು: ಪಶು ಆಹಾರ ಉತ್ಪಾದನೆ ಮತ್ತು ಮಾರಾಟ ಮಳಿಗೆ ಗೋಪಿಕಾ ಫೀಡ್ಸ್ ಕಂಪೆನಿ ಸರ್ವೆ ಷಣ್ಮುಖ ಕಾಂಪ್ಲೆಕ್ಸ್ನಲ್ಲಿ ನ.9ರಂದು ಶುಭಾರಂಭಗೊಂಡಿತು. ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮುಂಡೂರು ಗ್ರಾ.ಪಂ ಅಧ್ಯಕ್ಷ ಎಸ್.ಡಿ ವಸಂತ ಮಾತನಾಡಿ ಗುಣ ಮಟ್ಟದ ಫೀಡ್ಸ್ ಕಂಪೆನಿ ಸರ್ವೆಯಲ್ಲಿ ಆರಂಭಗೊಂಡಿರುವುದರಿಂದ ಈ ಭಾಗದ ಗ್ರಾಮೀಣ ರೈತರಿಗೆ ವರದಾನವಾಗಲಿದೆ ಎಂದು ಹೇಳಿದರು. ಜನರಿಗೆ ಉತ್ತಮ ಗುಣಮಟ್ಟದ ಫೀಡ್ಸ್ ಒದಗಿಸುವ ಮೂಲಕ ಸಂಸ್ಥೆಯು ಉತ್ತರೋತ್ತರ ಅಭಿವೃದ್ದಿ ಸಾಧಿಸಲಿ ಎಂದು ಅವರು ಶುಭ ಹಾರೈಸಿದರು. ಅರುಣ್ ಕುಮಾರ್ ಪುತ್ತಿಲ ಮಾತನಾಡಿ ಸರ್ವೆಯಲ್ಲಿ ಗೋಪಿಕಾ ಫೀಡ್ಸ್ ಕಂಪೆನಿ ಪ್ರಾರಂಭಗೊಂಡಿರುವುದು ಸಂತೋಷದ ವಿಚಾರವಾಗಿದ್ದು ಕಂಪೆನಿಯು ಮುಂದಿನ ದಿನಗಳಲ್ಲಿ ತಾಲೂಕು ಹಾಗೂ ಜಿಲ್ಲಾ ಮಟ್ಟಕ್ಕೆ ವಿಸ್ತರಣೆಯಾಗಲಿ ಎಂದು ಹಾರೈಸಿದರು. ಸರ್ವೆ ಎಸ್ಜಿಎಂ ಪ್ರೌಢ ಶಾಲೆಯ ಮುಖ್ಯಗುರು ಶ್ರೀನಿವಾಸ್ ಹೆಚ್.ಬಿ, ಸರ್ವೆ ಷಣ್ಮುಖ ಸಂಕೀರ್ಣದ ಮಾಲಕ ಸುರೇಶ್ ಸರ್ವೆ, ಕೃಷಿಕ ಗಣಪತಿ ಭಟ್, ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ಪುಂಡಲೀಕ ಕೆ ಮಾತನಾಡಿ ಶುಭ ಹಾರೈಸಿದರು. ಶಂಕರ ನಾರಾಯಣ, ಸತೀಶ್ ಮರಡಿತ್ತಾಯ, ಪಿ.ಜಿ ಶಂಕರ ನಾರಾಯಣ ಭಟ್ ಅತಿಥಿಗಳಿಗೆ ಸ್ಮರಣಿಕೆ ನೀಡಿ ಅಭಿನಂದಿಸಿದರು. ಗೋಪಿಕಾ ಫೀಡ್ಸ್ ಕಂಪೆನಿ ಮಾಲಕ ಶಿವರಾಮ ಭಟ್ ಕೆ ಸ್ವಾಗತಿಸಿದರು. ಮಾಲಕರ ಪತ್ನಿ ಪಾರ್ವತಿ ಸುಮಾ ಸಹಕರಿಸಿದರು.
ನಮ್ಮ ಸಂಸ್ಥೆಯಲ್ಲಿ ಉತ್ತಮ ಗುಣ ಮಟ್ಟದ ಪಶು ಆಹಾರ ಉತ್ಪಾದನೆ ಮತ್ತು ಮಾರಾಟ ವ್ಯವಸ್ಥೆ ಇದೆ. ರೈತರಿಗೆ ಹೈನುಗಾರಿಕೆಗೆ ಬೇಕಾಗಿರುವ ಎಲ್ಲ ವಿಧದ ಪಶು ಆಹಾರವು ನಮ್ಮ ಸಂಸ್ಥೆಯಲ್ಲಿ ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದೆ. ಗ್ರಾಹಕರು ಇದರ ಸದುಪಯೋಗವನ್ನು ಪಡೆಯುವುದರ ಮೂಲಕ ಸಹಕರಿಸಬೇಕಾಗಿ ವಿನಂತಿ.
-ಶಿವರಾಮ ಭಟ್ ಕೆ, ಮಾಲಕರು ಗೋಪಿಕಾ ಫೀಡ್ಸ್ ಕಂಪೆನಿ ಸರ್ವೆ