Breaking News

ಜಮ್ಮುವಿನ ನಗ್ರೋಟದಲ್ಲಿ ಹುತಾತ್ಮರಾದ 7 ಮಂದಿ ಯೋಧರಿಗೆ ಹಿಂದು ಜಾಗರಣಾ ವೇದಿಕೆಯಿಂದ ಶ್ರದ್ಧಾಂಜಲಿ ಅರ್ಪಣೆ

Puttur_Advt_NewsUnder_1
Puttur_Advt_NewsUnder_1

jammu

* ಒಮ್ಮೆ ಪಾಕಿಸ್ತಾನವನ್ನು ಧ್ವಂಸ ಮಾಡಬೇಕು – ರಮಾನಾಥ ರೈ

* ಭಯೋತ್ಪಾದಕರಲ್ಲಿದೆ ಆಧುನಿಕ ಶಸ್ತ್ರಾಸ್ತ್ರ – ರಾಜಾರಾಮ ಶೆಟ್ಟಿ

ಪುತ್ತೂರು: ಜಮ್ಮುವಿನ ನಗ್ರೋಟದಲ್ಲಿ ನ.29ರಂದು ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ 7 ಮಂದಿ ಯೋಧರಿಗೆ ಹಿಂದು ಜಾಗರಣಾ ವೇದಿಕೆ ಪುತ್ತೂರು ಘಟಕದಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರಿನ ಗಾಂಧಿ ಕಟ್ಟೆಯ ಬಳಿ ಮೌನ ಪ್ರಾರ್ಥನೆ ಮಾಡಿ, ಹಣತೆ ಬೆಳಗಿಸಿ ಯೋಧರ ಅತ್ಮಕ್ಕೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಒಮ್ಮೆ ಪಾಕಿಸ್ತಾನವನ್ನು ಧ್ವಂಸ ಮಾಡಬೇಕು:

ಮಾಜಿ ಸೈನಿಕ ರಮಾನಾಥ ರೈಯವರು ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿ ಪಾಕಿಸ್ತಾನಕ್ಕೆ ಎಷ್ಟೇ ಎಚ್ಚರಿಕೆ ನೀಡಿದರು ಮತ್ತೆ ಮತ್ತೆ ಅದು ದಾಳಿ ಮುಂದುವರಿಸುತ್ತಿದೆ. ದಾಳಿಯನ್ನು ಹತ್ತಿಕ್ಕಲು ಹೋಗಿ ನಮ್ಮ ಸೇನಾನಿಗಳು ಹುತಾತ್ಮರಾಗಿದ್ದಾರೆ.  ಹುತಾತ್ಮರಾದ ಸೇನಾನಿಗಳಿಗೆ ಸರಕಾರದಿಂದ ಸಿಗುವ ಸವಲತ್ತೂ ಸರಿಯಾಗಿ ಸಿಗುವುದಿಲ್ಲ. ಇಂತಹ ಸಂದರ್ಭದಲ್ಲಿ ಒಮ್ಮೆ ಪಾಕಿಸ್ತಾನವನ್ನು ಧ್ವಂಸ ಮಾಡಿ ನಿರಂತರ ನಮ್ಮ ಕಣ್ಣೀರು ಒರೆಸುವ ಪ್ರಯತ್ನ ಆಗಬೇಕು ಎಂಬ ಭಾವನೆ ನಮ್ಮ ಮನಸ್ಸಿನಲ್ಲಿದೆ ಎಂದರು.

ಭಯೋತ್ಪಾದಕರಲ್ಲಿದೆ ಆಧುನಿಕ ಶಸ್ತ್ರಾಸ್ತ್ರ:

ಜಿಲ್ಲಾ ಧರ್ಮ ಜಾಗೃತಿಯ ಸಂಚಾಲಕ ರಾಜಾರಾಮ ಶೆಟ್ಟಿ ಕೋಲ್ಪೆ ಗುತ್ತುರವರು ಮಾತನಾಡಿ ಪಾಕಿಸ್ತಾನದ ಪೈಶಾಚಿಕ ಕೃತ್ಯದಿಂದ ನಮ್ಮ ಯೋಧರು ಬೆನ್ನು ಬೆನ್ನು ಹುತಾತ್ಮರಾಗುತ್ತಿರುವುದು ತುಂಬಾ ದುಃಖದ ಸಂಗತಿ. ಭಾರತದ ಗಡಿ ಭಾಗದಲ್ಲಿ ತಗಾದೆ ತೆಗೆಯುತ್ತಿದ್ದಾರೆ. ದೇಶವನ್ನು ಹಿಂದೆ ಆಳಿದ ಸರಕಾರ ರಕ್ಷಣಾ ವ್ಯವಸ್ಥೆ ಕಡೆ ಹೆಚ್ಚು ಗಮನ ಕೊಡದ ಕಾರಣ ನಮ್ಮಲ್ಲಿ ಆಧುನಿಕ ಪದ್ಧತಿಯ ರಕ್ಷಣಾ ಸಾಮಾಗ್ರಿಗಳು ಕಡಿಮೆ ಇದೆ. ನರೇಂದ್ರ ಮೋದಿ ನೇತೃತ್ವದ ಸರಕಾರ ರಕ್ಷಣಾ ಕ್ಷೇತ್ರ ಸುಧಾರಣೆಗೆ ಮಹತ್ವದ ಹೆಜ್ಜೆ ಇಟ್ಟಿದ್ದು ಇದು ಭಯೋತ್ಪಾದನೆ ಸೃಷ್ಟಿಸುವವರಿಗೆ ತಕ್ಕ ಪಾಠ ಕಲಿಸುವ ಮುನ್ಸೂಚನೆ ಎಂದು ಹೇಳಿದರು. ಬಲಿಯಾದವರ ಕುಟುಂಬಕ್ಕೆ ದೇವರು ಶಕ್ತಿ ಕೊಡಲಿ ಎಂದು ಅವರು ಪ್ರಾರ್ಥಿಸಿದರು. ಹಿಂದು ಜಾಗರಣಾ ವೇದಿಕೆ ಜಿಲ್ಲಾ ಪ್ರಧಾನ ಕಾರ‍್ಯದರ್ಶಿ ಅಜಿತ್ ರೈ ಹೊಸಮನೆ, ಪ್ರಮುಖರಾದ ಅರುಣ್ ಕುಮಾರ್ ಪುತ್ತಿಲ, ರಾಮಕೃಷ್ಣ ಮಿಶನ್‌ನ ಸ್ವಚ್ಛ ಪುತ್ತೂರು ಯೋಜನೆಯ  ಶ್ರೀಕೃಷ್ಣ ಉಪಾಧ್ಯಾಯ, ನಗರಸಭಾ ಸದಸ್ಯ ರಾಜೇಶ್ ಬನ್ನೂರು, ನಾಗೇಶ್ ಟಿ.ಎಸ್, ಅವಿನಾಶ್, ಅಶೋಕ್, ಶಶಿಕಾಂತ್ ಮತ್ತಿತರರು ಉಪಸ್ಥಿತರಿದ್ದರು. ಹಿಂದು ಜಾಗರಣಾ ವೇದಿಕೆ ಪುತ್ತೂರು ಘಟಕದ ಅಧ್ಯಕ್ಷ ಕೃಷ್ಣಪ್ರಸಾದ್ ಶೆಟ್ಟಿ ಸ್ವಾಗಸಿ, ಪುರುಷೋತ್ತಮ ಕೋಲ್ಪೆ ಕಾರ‍್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.