ಜನವರಿಯಲ್ಲಿ ’ವಿವೇಕ ಉದ್ಯೋಗ ಮೇಳ’- ನೋಂದಾವಣೆ ಆರಂಭ

Puttur_Advt_NewsUnder_1
Puttur_Advt_NewsUnder_1

2017 ಜ 13 : ಉದ್ಯೋಗ ಮೇಳ

* ಉದ್ಯೋಗದಾತರು: 120 ಪ್ರಖ್ಯಾತ ಕಂಪೆನಿಗಳು

* ಡಿಪ್ಲೊಮಾ  ಐಟಿಐ ಅಭ್ಯರ್ಥಿಗಳಿಗೆ ಹೆಚ್ಚು ಅವಕಾಶ

* ಯಾವುದೇ ನೋಂದಣಿ ಶುಲ್ಕವಿಲ್ಲ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘವು ಪ್ರಥಮ ಬಾರಿಗೆ ನೆಹರು ನಗರದ ತನ್ನ ವಿಶಾಲ ಕ್ಯಾಂಪಸ್‌ನಲ್ಲಿ ಬೃಹತ್ ’ವಿವೇಕ ಉದ್ಯೋಗ ಮೇಳ’ ವೊಂದನ್ನು ಆಯೋಜಿಸುತ್ತಿದ್ದು, ಗ್ರಾಮೀಣ ಪ್ರದೇಶದ ಯುವ ಸಮೂಹ ಎದುರಿಸುತ್ತಿರುವ ನಿರುದ್ಯೋಗದ ಸಮಸ್ಯೆಯನ್ನು ಲಕ್ಷ್ಯದಲ್ಲಿರಿಸಿ ಈ ಉದ್ಯೋಗ ಮೇಳವನ್ನು ರೂಪಿಸಲಾಗಿದೆ.

ವಿವೇಕಾನಂದ ವಿದ್ಯಾವರ್ಧಕ ಸಂಘದ ಮೂಲ ಆಶಯವಾದ ಗ್ರಾಮಾಭಿವೃದ್ಧಿಯ ಕನಸು ಈ ಉದ್ಯೋಗಮೇಳದ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈಗಾಗಲೇ ವಿದ್ಯಾವರ್ಧಕ ಸಂಘ ವಿವಿಧ ಗ್ರಾಮಗಳನ್ನು ದತ್ತು ತೆಗೆದುಕೊಂಡು ಅಲ್ಲಿನ ಸಮಗ್ರ ಅಭ್ಯುದಯದಲ್ಲಿ ಕಾರ್ಯಪ್ರವೃತ್ತವಾಗಿದೆ. ಅದರ ಮುಂದುವರೆದ ಭಾಗವಾಗಿ ಉದ್ಯೋಗ ಕ್ಷೇತ್ರದ ಬಗೆಗೆ ಸರಿಯಾದ ಮಾಹಿತಿ, ಜ್ಞಾನ ದೊರಕದೆ ಉದ್ಯೋಗಹೀನರಾಗಿ ಗ್ರಾಮಗಳಲ್ಲುಳಿದ ಯುವ ಸಮೂಹವನ್ನು ಗಮನದಲ್ಲಿರಿಸಿ ಈ ಮೇಳ ಆಯೋಜಿಸಲಾಗಿದೆ. 2017ರ ಜನವರಿ 13 ರಂದು ಉದ್ಯೋಗಮೇಳ ನಡೆಯಲಿದ್ದು, ರಾಜ್ಯ ಹಾಗೂ ಹೊರರಾಜ್ಯದ ಮಾಹಿತಿ ತಂತ್ರಜ್ಞಾನ, ರಿಯಲ್ ಎಸ್ಟೇಟ್, ಬ್ಯಾಂಕಿಂಗ್, ರಿಟೇಲ್ ಕ್ಷೇತ್ರದ ಉದ್ಯಮ, ಉತ್ಪಾದನಾ ಘಟಕಗಳು ಮೊದಲಾದ ಅನೇಕ ಉದ್ಯಮಗಳು ಈ ಉದ್ಯೋಗಮೇಳದಲ್ಲಿ ಭಾಗವಹಿಸಲಿವೆ. ಮುಂದಿನ ವರ್ಷಗಳಲ್ಲಿ ಉದ್ಯೋಗ ಮೇಳವನ್ನು ವಾರ್ಷಿಕವಾಗಿ ಹಮ್ಮಿಕೊಳ್ಳುವ ಯೋಜನೆಯಯನ್ನೂ ವಿವಿಎಸ್ ಹೊಂದಿದೆ.

ಯಾರು ಭಾಗವಹಿಸಬಹುದು?- ರಾಜ್ಯದ ಯಾವುದೇ ಭಾಗದಿಂದ ಭಾಗವಹಿಸಬಹುದಾಗಿದ್ದು, ಪ್ರಾಥಮಿಕ, ಪ್ರೌಢಶಾಲಾ ಮಟ್ಟದಿಂದ ತೊಡಗಿ ಪಾರಂಪರಿಕ ಪದವಿಗಳಾದ ಬಿ.ಎ, ಬಿ.ಎಸ್ಸಿ, ಬಿ.ಕಾಂ ಪದವೀಧರರು, ಐಟಿಐ, ಡಿಪ್ಲೋಮಾದಂತಹ ವಿಷಯ ವೃತ್ತಿ ಶಿಕ್ಷಣ ಪಡೆದವರು, ಇಂಜಿನಿಯರಿಂಗ್, ಎಂ.ಬಿ.ಎ ಮೊದಲಾದ ವೃತ್ತಿಪರ ಶಿಕ್ಷಣ ಹೊಂದಿದವರು ಮಾತ್ರವಲ್ಲದೇ ಪ್ರಶಿಕ್ಷಿತರೂ, ಉದ್ಯೋಗಾರ್ಥಿಗಳು ಈ ಮೇಳದಲ್ಲಿ ಭಾಗವಹಿಸಬಹುದು.

ಆನ್‌ಲೈನ್ ನೋಂದಾವಣೆಗೆ ಸುದ್ದಿ ಸೆಂಟರ್‌ನಲ್ಲಿ ಉಚಿತ ಅವಕಾಶ

ಆನ್‌ಲೈನ್ ನೋಂದಾವಣೆ ಮಾಡುವವರಿಗೆ ಸುದ್ದಿ ಸೆಂಟರ್‌ನಲ್ಲಿ ಉಚಿತ ಅವಕಾಶ ಕಲ್ಪಿಸಲಾಗಿದೆ.

ಪುತ್ತೂರು ದಿನೇಶ್ ಭವನದ ಸುದ್ದಿ ಶಿಕ್ಷಣ ಉದ್ಯೋಗ ಮಾಹಿತಿ ಕೇಂದ್ರ ದಿನೇಶ್ ಭವನ, ಎಂ.ಟಿ. ರಸ್ತೆ, ಪುತ್ತೂರು

ಸುದ್ದಿ ಸೆಂಟರ್, ಪುರಸಭಾ ವಾಣಿಜ್ಯ ಸಂಕೀರ್ಣ ಮುಖ್ಯ ರಸ್ತೆ, ಪುತ್ತೂರು

ಹೆಚ್ಚಿನ ಮಾಹಿತಿಗಾಗಿ 08251-238949 ಸಂಪರ್ಕಿಸಬಹುದಾಗಿದೆ.

ನೋಂದಾವಣೆ ಹೇಗೆ?

ಆನ್‌ಲೈನ್ : www.vivekudyoga.com ನಲ್ಲಿ ನಿಮ್ಮ ಹೆಸರು, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ, ಇ-ಮೇಲ್, ನೀವು ಬಯಸುವ ಉದ್ಯೋಗ ಕ್ಷೇತ್ರವನ್ನು ತುಂಬಿ ಸರಳವಾಗಿ ನೋಂದಾಯಿಸಿಕೊಳ್ಳಬಹುದಾಗಿದೆ. ನೋಂದಾವಣೆಯಾದ ತಕ್ಷಣ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಅರ್ಜಿಯನ್ನು ತುಂಬಿ ಉದ್ಯೋಗ ಮೇಳದ ದಿನ ಸಲ್ಲಿಸಬೇಕಾಗುತ್ತದೆ.

ಆಫ್‌ಲೈನ್: ಉದ್ಯೋಗ ಮೇಳ ಮಾಹಿತಿ ಕೇಂದ್ರ, ವಿವೇಕಾನಂದ ಕ್ಯಾಂಪಸ್ ನೆಹರೂನಗರ (ಬೆಳಿಗ್ಗೆ 9.೦೦ ರಿಂದ ಸಂಜೆ 5.೦೦)

ಅಥವಾ 8105650446/08251-298599 ಈ ಸಂಖ್ಯೆಗೆ ಕರೆ ಮಾಡಿ ಹೆಸರು ನೋಂದಾವಣೆ ಮಾಡಿಕೊಳ್ಳಬಹುದು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.