ಕಾರ್ಮಿಕರಿಗೆ ಮನೆ ನೀಡುವ ಮೂಲಕ ಜನ್ಮದಿನಾಚರಣೆ- ಮಾಸ್ಟರ್ ಪ್ಲಾನರಿ ಎಸ್.ಕೆ.ಆನಂದ್ ಕುಟುಂಬದಿಂದ ಸಮಾಜಕ್ಕೆ ಉತ್ತಮ ಸಂದೇಶ

Puttur_Advt_NewsUnder_1
Puttur_Advt_NewsUnder_1

masther-planery1 masther-planary2

* ಸಮಾಜವನ್ನು ಕಟ್ಟುವಲ್ಲಿ ಆನಂದ್‌ರವರು ಯಶಸ್ವಿ- ಡಾ.ಯು.ಪಿ.ಶಿವಾನಂದ್

* ಸಾರ್ಥಕ ಬದುಕಿಗೆ ಪ್ರೇರಣೆ – ರಘುನಾಥ್ ರಾವ್

* ನೂರಾರು ವರ್ಷ ಮನೆ ಬೆಳಗಲಿ – ಚಂದ್ರಾವತಿ

* ಕರ್ಮಕ್ಕೆ ಸಿಕ್ಕಿದ ಫಲ – ಎಸ್.ಕೆ.ಆನಂದ್

* ಬುಡಕ್ಕೆ ನೀರೆರೆವ ಕೆಲಸ ಆಗಿದೆ – ರಾಘವೇಂದ್ರ

ಪುತ್ತೂರು: ಸಂಸ್ಥೆಯಲ್ಲಿ ಕಾರ್ಮಿಕರಾಗಿ ದುಡಿದವರಿಗೆ ಸ್ವಂತ ಮನೆ ನಿರ್ಮಿಸಿ ನೀಡುವ ಕಾರ್ಯವನ್ನು ಹಲವಾರು ವರ್ಷಗಳಿಂದ ಮಾಡುತ್ತಾ ಬಂದಿರುವ ಮಾಸ್ಟರ್ ಪ್ಲಾನರಿಯ ಎಸ್.ಕೆ.ಆನಂದ್‌ರವರು ಈ ಬಾರಿ ತನ್ನ ಹುಟ್ಟು ಹಬ್ಬದ ನೆನಪಿನಲ್ಲಿ 6 ಮನೆಗಳನ್ನು ಕೊಡುಗೆಯಾಗಿ ಹಸ್ತಾಂತರ ಮಾಡಿದ್ದಾರೆ.

ಸಂಸ್ಥೆಯನ್ನೇ ನಂಬಿ ದುಡಿಯುತ್ತಿರುವವರಿಗೆ ಈ ಭಾಗ್ಯವನ್ನು ಅವರು ಒದಗಿಸುತ್ತಿದ್ದು, ಈ ಬಾರಿ  ಕಾರ್ಮಿಕರಾದ ಶಾಂತಿ, ನಿರ್ಮಲ ಶಿವರಾಜ್, ಹನುಮಂತ ಗುಬ್ಬಿಯವರ ಪುತ್ರ ಮಂಜುನಾಥ್, ಸಂಗಪ್ಪರವರ ಪುತ್ರ ಮಲ್ಲಪ್ಪ, ಪ್ರಸನ್ನ ಮತ್ತು ಲಿಂಗಪ್ಪರವರಿಗೆ ನ.೩೦ರಂದು ಇಡ್ಕಿದು ಗ್ರಾಮದ ಅಳಕೆ ಮಜಲು ಎಂಬಲ್ಲಿ ಮನೆ ಹಸ್ತಾಂತರ ಮಾಡಲಾಯಿತು. ಸುದ್ದಿ ಬಿಡುಗಡೆ ಪತ್ರಿಕೆ ಸಂಪಾದಕ ಡಾ. ಯು.ಪಿ.ಶಿವಾನಂದ್, ಇಡ್ಕಿದು ಗ್ರಾ.ಪಂ ಅಧ್ಯಕ್ಷೆ ಚಂದ್ರಾವತಿ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಗೋಕುಲ್‌ದಾಸ್ ಭಕ್ತ, ರಾಜೇಶ್ ಪವರ್‌ಪ್ರೆಸ್‌ನ ಮಾಲಕ ರಘುನಾಥ್ ರಾವ್, ನಂದಕಿಶೋರ್ ನಾಯಕ್, ರೇಖಾ ಆನಂದ್‌ರವರು ಮನೆಗಳನ್ನು ಉದ್ಘಾಟಿಸಿದರು.

ಸಮಾಜವನ್ನು ಕಟ್ಟುವಲ್ಲಿ ಆನಂದ್‌ರವರು ಯಶಸ್ವಿಯಾಗಿದ್ದಾರೆ:

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕ ಡಾ. ಯು.ಪಿ.ಶಿವಾನಂದ್‌ರವರು ಮಾತನಾಡಿ ತಾವು ಮಾಡುವ ಎಲ್ಲಾ ಕೆಲಸಗಳು ಮನಪೂರ್ವಕವಾಗಿ ಇದ್ದರೆ ಜನರಿಗೆ ಪ್ರೀತಿ ಬೆಳೆಯುತ್ತದೆ. ಅಂತಹ ಕೆಲಸ ಇವತ್ತು ಎಸ್.ಕೆ.ಆನಂದ್‌ರವರು ಮಾಡುತ್ತಿದ್ದಾರೆ. ಅದೇ ರೀತಿ ಸ್ಥಳೀಯ ಪತ್ರಿಕೆಯಾಗಿ ಸುದ್ದಿ ಬಿಡುಗಡೆ ಕೆಲಸ ಮಾಡುವ ಮೂಲಕ ಸ್ಥಳೀಯ ಮುಖ, ಮನಸ್ಸು, ಸಾಧನೆಗಳನ್ನು ತೆಗೆದು ಕೊಂಡು ಎಲ್ಲರಿಗೂ ಆತ್ಮೀಯವಾಗಿ ಬೆಳೆದಿದೆ. ಆನಂದ್‌ರವರು ಒಂದು ಕಡೆ ಪ್ರಕೃತಿ ಮೇಲಿನ ಪ್ರೀತಿಯಿಂದ ಮರಗಳ ಬಳಕೆ ಇಲ್ಲದೆ ಮನೆ ಕಟ್ಟಿದ್ದಾರೆ. ಅದರ ಜೊತೆ ಮನೆಯ ಪಕ್ಕದಲ್ಲಿ ಗಿಡಗಳನ್ನು ನೆಟ್ಟು ಮರಗಳನ್ನು ಬೆಳೆಸಲು ಪ್ರೇರಣೆ ನೀಡಿದ್ದಾರೆ. ಅವರು ಸಮಾಜವನ್ನು ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರಲ್ಲದೆ ಅವರು ಕೊಟ್ಟಂತಹ ಕೊಡುಗೆಗಳನ್ನು ಇನ್ನಷ್ಟು ಮಂದಿ ತೆಗೆದು ಕೊಳ್ಳುವ ನಿಟ್ಟಿನಲ್ಲಿ ಇದು ಪ್ರೇರಣೆ ನೀಡಲಿ ಎಂದರು.

ಪ್ರೇರಣೆ ನೀಡುವ ಪ್ರಚಾರ ಅಗತ್ಯ: ಎಸ್.ಕೆ.ಆನಂದ್‌ರವರು ಪ್ರಚಾರ ಬಯಸುವವರಲ್ಲ. ಆದರೆ ಅವರ ಸಾಧನೆ ಹೊರಗೆ ಗೊತ್ತಾಗುವುದರ ಜೊತೆಗೆ ಇನ್ನೊಬ್ಬರಿಗೆ ಪ್ರೇರಣೆ ಕೊಡುವಂತಾಗಬೇಕು. ಈ ನಿಟ್ಟಿನಲ್ಲಿ ವಾಸ್ತವ ವಿಚಾರ ತಿಳಿಸುವ ಪ್ರಚಾರ ಅಗತ್ಯವಾಗಿ ಆಗಬೇಕು ಎಂದು ಡಾ. ಯು.ಪಿ.ಶಿವಾನಂದ್ ಹೇಳಿದರು.

ಸಾರ್ಥಕ ಬದುಕಿಗೆ ಪ್ರೇರಣೆ: ರಾಜೇಶ್ ಪವರ್ ಪ್ರೆಸ್‌ನ ಮಾಲಕ ರಘುನಾಥ್ ರಾವ್‌ರವರು ಮಾತನಾಡಿ ಬದುಕಿಗೆ ಸಾರ್ಥಕತೆ ಬರುವುದು ಉತ್ತಮ ಕೆಲಸದಿಂದ ಮಾತ್ರ. ಅದನ್ನು ಅರ್ಥಪೂರ್ಣವಾಗಿ ಎಸ್.ಕೆ.ಆನಂದ್‌ರವರು ಮಾಡಿದ್ದಾರೆ. ಮುಂದೆ ಇನ್ನಷ್ಟು ಮಂದಿಗೆ ಮನೆಯ ಭಾಗ್ಯ ಸಿಗುವಂತಾಗಲಿ ಎಂದು ಹೇಳಿದರು.

ನೂರಾರು ವರ್ಷ ಮನೆ ಬೆಳಗಲಿ: ಇಡ್ಕಿದು ಗ್ರಾ.ಪಂ ಅಧ್ಯಕ್ಷೆ ಚಂದ್ರಾವತಿಯವರು ಮಾತನಾಡಿ ಮನೆ ಪಡೆದು ಕೊಂಡವರು ನೂರಾರು ವರ್ಷ ಸಂತೋಷದಿಂದ ಬಾಳುವುದರೊಂದಿಗೆ ಮನೆಯೂ ಬೆಳಗಲಿ ಎಂದು ಹಾರೈಸಿದರು.

ಕರ್ಮಕ್ಕೆ ಸಿಕ್ಕಿದ ಫಲ:  ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿದ ಮಾಸ್ಟರ್ ಪ್ಲಾನರಿಯ ಎಸ್.ಕೆ.ಆನಂದ್‌ರವರು ಮಾತನಾಡಿ ಅವರವರು ಮಾಡಿದ ಕರ್ಮದ ಫಲವನ್ನು ಅನುಭವಿಸಿದಂತೆ ಇದೊಂದು ಕರ್ಮಕ್ಕೆ ಸಿಕ್ಕಿದ ಫಲ. ಈ ಮನೆ ಇಲ್ಲಿಗೇ ನಿಲ್ಲುವುದಿಲ್ಲ. ಮುಂದೆಯೂ ನಮ್ಮ ಕಾರ್ಮಿಕರಿಗೆ ಸಾಕಷ್ಟು ಮನೆ ಕೊಡುವ ಯೋಜನೆ ಇದೆ ಎಂದು ಹೇಳಿ ಶುಭ ಹಾರೈಸಿದರು.

ಬುಡಕ್ಕೆ ನೀರೆರೆವ ಕೆಲಸ ಆಗಿದೆ:  ಸಂಸ್ಥೆಯ ಹಿತೈಸಿ ರಾಘವೇಂದ್ರರವರು ಪ್ರಾಸ್ತಾವಿಕವಾಗಿ ಮಾತನಾಡಿ ಬುಡವನ್ನು ಅಥವಾ ಹೃದಯವನ್ನು ಒದ್ದೆಯಾಗಿಟ್ಟರೆ ಎಲ್ಲರು ಅಂಟಿಕೊಳ್ಳುತ್ತಾರೆ ಎಂಬಂತೆ ಮಾಸ್ಟರ್ ಪ್ಲಾನರಿ ಬೆಳವಣಿಗೆ ನೋಡಿ ಅರಿಯಬೇಕು. ಸುದ್ದಿ ಬಿಡುಗಡೆ ಪತ್ರಿಕೆ ಮತ್ತು ರಾಜೇಶ್ ಪವರ್ ಪ್ರೆಸ್ ಸಂಸ್ಥೆಯ ಬೆಳವಣಿಗೆಯೂ ಇದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದೆ ಎಂದ ಅವರು ನೂತನ ಮನೆಗಳು ಸರ್ವಾನು ಸುಂದರ ಸರ್ವಮಂಗಳವುಂಟು ಮಾಡಲಿ ಎಂದರು. ವೇದಿಕೆಯಲ್ಲಿ ಎಸ್.ಕೆ.ಆನಂದ್‌ರವರ  ಪತ್ನಿ ರೇಖಾ ಆನಂದ್, ಪುತ್ರರಾದ ಅರ್ಜುನ್ ನಾಯಕ್, ಅಕ್ಷಯ್ ನಾಯಕ್ ಉಪಸ್ಥಿತರಿದ್ದರು. ರಾಘವೇಂದ್ರ ನಾಯಕ್, ಕೃಷ್ಣ ನಾಯಕ್, ಲಕ್ಷ್ಮೀ ನಾಯಕ್, ಸುಬ್ರಹ್ಮಣ್ಯ ಗೌಡ, ಗೌರಿ ಅಕ್ಷಯ, ಪ್ರಭಾಕರ್, ವಿನಯ ಕುಮಾರ್, ನವೀನ್ ಕುಮಾರ್ ಅತಿಥಿಗಳನ್ನು ಗೌರವಿಸಿದರು. ಕೀರ್ತಿ, ಆರತಿ ಪ್ರಾರ್ಥಿಸಿದರು. ಚಂದ್ರಶೇಖರ್ ಭಟ್ ಸ್ವಾಗತಿಸಿ, ಎಂ.ಎನ್.ಪ್ರಭಾಕರ್ ವಂದಿಸಿದರು. ಮುಕ್ತ ನಾಯಕ್ ಕಾರ‍್ಯಕ್ರಮ ನಿರೂಪಿಸಿದರು.

ಕಡಿಮೆ ವೆಚ್ಚದಲ್ಲಿ ಮರರಹಿತ ಮನೆಗಳು

ಪ್ರಕೃತಿಯನ್ನು ಉಳಿಸುವ ಚಿಂತನೆಯೊಂದಿಗೆ ಮರಗಳನ್ನು ಬಳಸದೆ ಕೇವಲ ಸಿಮೆಂಟ್ ಮತ್ತು ಕಬ್ಬಿಣದಲ್ಲಿ ಮನೆ ನಿರ್ಮಾಣ ಮಾಡಲಾಗಿದೆ. ಒಂದೊಂದು ಮನೆಗೂ ಒಂದೊಂದು ಗಿಡವನ್ನು ನೆಡಲಾಗಿದೆ. ಇದು ಹಸಿರಿನ ಮೇಲಿರುವ ಮಾಸ್ಟರ್ ಪ್ಲಾನರಿ ತೋರಿಸಿದ ಕಾಳಜಿಯನ್ನು ಎತ್ತಿ ತೋರಿಸಿದೆ. ಒಟ್ಟಿನಲ್ಲಿ ಒಂದೊಂದು ಮನೆಗಳಿಗೆ ರೂ. ೫ ರಿಂದ ೬ ಲಕ್ಷ ವೆಚ್ಚ ತಗುಲಿದೆ ಎಂದು ಸಂಸ್ಥೆಯ ಪ್ರಭಾಕರ್ ತಿಳಿಸಿದ್ದಾರೆ.

ಬಂದ್ ವಿರೋಧಕ್ಕೆ ಬೆಂಬಲ ನೀಡಿದವರು

ಬಂದ್ ವಿರೋಧ ಆಂದೋಲನಕ್ಕೆ ಮಾಸ್ಟರ್ ಪ್ಲಾನರಿಯ ಎಸ್.ಕೆ. ಆನಂದ್‌ರವರು ಪೂರ್ಣ ಬೆಂಬಲ ನೀಡಿ ತಮ್ಮ ಸಂಸ್ಥೆಯಲ್ಲೂ ಫಲಕ ಅಳವಡಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.