ಗೋಳಿತ್ತೊಟ್ಟು ಗ್ರಾ.ಪಂ.ಪಿಡಿಒಗೆ ಬೀಳ್ಕೊಡುಗೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

golithottu
ಜನರೊಂದಿಗೆ ಭಾವನಾತ್ಮಕ ಸಂಬಂಧ ಬೇರೂರಿದೆ: ತಿರುಪತಿ

ನೆಲ್ಯಾಡಿ: ಕಳೆದ ಆರೂವರೇ ವರ್ಷಗಳಿಂದ ಗೋಳಿತ್ತೊಟ್ಟು ಗ್ರಾ.ಪಂ.ನಲ್ಲಿ ಪಿಡಿಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ವರ್ಗಾವಣೆಗೊಂಡ ತಿರುಪತಿ ಟಿ ಉಪ್ಪಾರರವರಿಗೆ ಬೀಳ್ಕೊಡುಗೆ ಸಮಾರಂಭ ನ.30ರಂದು ಗೋಳಿತ್ತೊಟ್ಟು ಗ್ರಾ.ಪಂ.ಕಚೇರಿಯಲ್ಲಿ ನಡೆಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ತಿರುಪತಿ ಟಿ.ಉಪ್ಪಾರರವರು, ಕಳೆದ ಆರೂವರೇ ವರ್ಷಗಳಿಂದ ಕುಟುಂಬವನ್ನು ಬಿಟ್ಟು ಗೋಳಿತ್ತೊಟ್ಟಿಗೆ ಬಂದು ಕರ್ತವ್ಯ ನಿರ್ವಹಿಸಿದ್ದೇನೆ. ಇಲ್ಲಿನ ಜನರೊಂದಿಗೆ ಭಾವನಾತ್ಮಕ ಸಂಬಂಧ ಬೇರೂರಿದ್ದು ಎಂದಿಗೂ ನಾನು ಕುಟುಂಬದಿಂದ ದೂರ ಉಳಿದಿದ್ದೇನೆ ಎಂಬ ಅನುಭವವೇ ಆಗಿಲ್ಲ. ಇಲ್ಲಿನ ಜನರ ಈ ಪ್ರೀತಿ, ವಿಶ್ವಾಸವನ್ನು ಜೀವನದ ಕೊನೆಯ ತನಕವೂ ಮರೆಯಲು ಸಾಧ್ಯವಿಲ್ಲ ಎಂದು ಬಾವುಕರಾಗಿ ಹೇಳಿದರು. ಇಲ್ಲಿ ಅವ್ಯವಹಾರ ನಡೆದಿದೆ ಎಂಬ ದೂರಿನ ಮೇರೆಗೆ ಜಿ.ಪಂ.ನ ಅಧಿಕಾರಿಗಳ ತಂಡ ತನಿಖೆಗೆ ಬಂದ ವೇಳೆಯಲ್ಲೂ, ನನ್ನ ಮೇಲಿನ ವಿಶ್ವಾಸದಿಂದ ಇಲ್ಲಿನ ಜನರು ನನ್ನ ಹಾಗೂ ಪಂಚಾಯತ್‌ನ ಮೇಲಿನ ಆರೋಪವನ್ನು ನಿರಾಕರಿಸಿ ಬೆನ್ನಿಗೆ ನಿಂತು ರಕ್ಷಣೆ ಮಾಡಿದ್ದಾರೆ. ಗೋಳಿತ್ತೊಟ್ಟು ಪಂಚಾಯತ್‌ಗೆ ರಾಜ್ಯ ಮಟ್ಟದ ಪ್ರಶಸ್ತಿ ಬಂದಿದ್ದು, ಇದೀಗ ರಾಷ್ಟ್ರಪ್ರಶಸ್ತಿಗೆ ದ.ಕ.ಜಿಲ್ಲೆಯ ನಾಲ್ಕು ಪಂಚಾಯತ್‌ಗಳೊಂದಿಗೆ ಗೋಳಿತ್ತೊಟ್ಟು ಪಂಚಾಯತ್‌ಯೂ ನಾಮನಿರ್ದೇಶನಗೊಂಡಿದೆ. ನನ್ನ ಪ್ರಾಮಾಣಿಕ ಸೇವೆಗೆ ಪ್ರಸ್ತುತ ಹಾಗೂ ಕಳೆದ ಆಡಳಿತ ಮಂಡಳಿ, ಗ್ರಾ.ಪಂ.ಸಿಬ್ಬಂದಿಗಳು, ಗ್ರಾಮಸ್ಥರು ಸಂಪೂರ್ಣ ಸಹಕಾರ ನೀಡಿದ್ದಾರೆ. ನೀವೆಲ್ಲರೂ ತೋರಿದ ಪ್ರೀತಿ, ವಿಶ್ವಾಸಕ್ಕೆ ಚಿರಋಣಿಯಾಗಿzನೆ ಎಂದು ತಿರುಪತಿ ಹೇಳಿದರು.

ತಿರುಪತಿಯವರನ್ನು ಗ್ರಾಮಸ್ಥರ ಪರವಾಗಿ ಸನ್ಮಾನಿಸಿ ಮಾತನಾಡಿದ ಜಿ.ಪಂ.ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸರ್ವೋತ್ತಮ ಗೌಡರವರು, ಆರೂವರೇ ವರ್ಷಗಳ ಕಾಲ ಗ್ರಾಮೀಣ ಪ್ರದೇಶವಾದ ಇಲ್ಲಿ ಪಿಡಿಒ ಆಗಿ ಕರ್ತವ್ಯ ನಿರ್ವಹಿಸಿದ ತಿರುಪತಿಯವರು ಅಮೂಲಾಗ್ರ ಬದಲಾವಣೆ ತಂದಿದ್ದಾರೆ. ಬಡವರ ಕಣ್ಣಿರೊರೆಸುವ ಕಾರ್ಯ ಮಾಡಿದ್ದಾರೆ. ಇತರೇ ಅನುಭವಿ ಅಧಿಕಾರಿಗಳಿಗಿಂತ ಕಡಿಮೆ ಇಲ್ಲದೇ ತನ್ನ ಕೆಲಸ, ಕಾರ್ಯದ ಬಗ್ಗೆ ಆಳವಾಗಿ ಅಧ್ಯಯನ ಮಾಡಿಕೊಂಡು ಹಳ್ಳಿಯ ಜನರಿಗೆ ತ್ವರಿತ ಸೇವೆ ನೀಡುವ ಕಾರ್ಯ ಮಾಡಿದ್ದಾರೆ ಎಂದು ಹೇಳಿದರು. ತಿರುಪತಿಯವರ ವರ್ಗಾವಣೆಯಿಂದ ತೆರವಾಗಿರುವ ಪಿಡಿಒ ಸ್ಥಾನಕ್ಕೆ ಹೊಸ ನೇಮಕಾತಿ ಆಗಿಲ್ಲ. ರಾಮಕುಂಜ ಗ್ರಾ.ಪಂ.ಪಿಡಿಒರವರು ಪ್ರಭಾರ ಪಿಡಿಒ ಆಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಇಲ್ಲಿಗೆ ಖಾಯಂ ಪಿಡಿಒ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ತಾ.ಪಂ.ಸದಸ್ಯೆ ಉಷಾ ಅಂಚನ್ ಮಾತನಾಡಿ, ತಿರುಪತಿ ಟಿ ಉಪ್ಪಾರವರು ಗೋಳಿತ್ತೊಟ್ಟು ಗ್ರಾಮದ ಪ್ರಜೆಯಾಗಿದ್ದು ಗ್ರಾಮದ ಪ್ರತಿಯೊಬ್ಬರ ಮನೆ ಬಾಗಿಲಿಗೆ ತೆರಳಿ ಅವರ ಸಮಸ್ಯೆಗಳಿಗೆ ಸ್ಪಂಧಿಸುತ್ತಿದ್ದರು. ರಾಜೀವಗಾಂಧಿ ವಿದ್ಯುದ್ದೀಕರಣ ಯೋಜನೆಯಡಿ ವಿದ್ಯುತ್ ಸಂಪರ್ಕವಿಲ್ಲದ ಮನೆಗಳ ಪಟ್ಟಿ ಮಾಡಿ ಪ್ರತಿ ಮನೆಗೆ ಬೆಳಕು ಕಲ್ಪಿಸಿದ್ದಾರೆ. ಅಹಂ ಇಲ್ಲದೇ, ಎಲ್ಲರೊಂದಿಗೂ ಒಡನಾಟದಿಂದ ಇದ್ದ ಅವರ ಸಮಾಜಮುಖಿ ಕಾರ‍್ಯಗಳು ಇತರರಿಗೆ ಮಾದರಿಯಾಗಿದೆ ಎಂದರು. ಇನ್ನೋರ್ವ ತಾ.ಪಂ.ಸದಸ್ಯೆ ತೇಜಸ್ವಿನಿ ಶೇಖರ ಗೌಡ ಮಾತನಾಡಿ, ತಿರುಪತಿಯವರು ತಾಲೂಕಿನ ಉತ್ತಮ ಪಿಡಿಒ ಎಂದು ಗುರುತಿಸಿಕೊಂಡಿದ್ದರು. ಅವರು ಇನ್ನಷ್ಟೂ ವರ್ಷ ಇಲ್ಲಿಯೇ ಕರ್ತವ್ಯ ನಿರ್ವಹಿಸಿದ್ದರೇ ಅಭಿವೃದ್ಧಿ ಕೆಲಸಗಳಿಗೆ ಉತ್ತೇಜನ ಸಿಗಬಹುದಿತ್ತು. ವರ್ಗಾವಣೆಗೊಳ್ಳುತ್ತಿರುವ ಅವರಿಗೆ ಉದ್ಯೋಗದಲ್ಲಿ ಹೆಚ್ಚಿನ ಅವಕಾಶಗಳು ದೊರೆತು ಎತ್ತರಕ್ಕೇ ಏರಲಿ ಎಂದು ಶುಭಹಾರೈಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ.ಅಧ್ಯಕ್ಷೆ ಶಾಲಿನಿ ಶೇಖರ ಪೂಜಾರಿ ಮಾತನಾಡಿ, ತಿರುಪತಿ ಉಪ್ಪಾರರವರು ಒಳ್ಳೆಯ ಕೆಲಸಗಾರ. ಪ್ರತಿಯೊಂದು ಸಂದರ್ಭದಲ್ಲೂ ಸಲಹೆ ಸೂಚನೆ ನೀಡುತ್ತಿದ್ದರು. ಅವರ ಸಹಕಾರದಿಂದಲೇ ಗೋಳಿತ್ತೊಟ್ಟು ಗ್ರಾ.ಪಂ.ಗೆ ಪ್ರಶಸ್ತಿ ಬಂದಿದೆ. ಅವರಿಗೆ ಉದ್ಯೋಗದಲ್ಲಿ ಇನ್ನಷ್ಟೂ ಯಶಸ್ಸು ಸಿಗಲಿ ಎಂದು ಹಾರೈಸಿದರು. ಗ್ರಾ.ಪಂ.ಉಪಾಧ್ಯಕ್ಷ ಪ್ರಸಾದ್ ಕೆ.ಪಿ.ಮಾತನಾಡಿ, ತಿರುಪತಿ ಉಪ್ಪಾರರವರು ಕುಟುಂಬದ ಸದಸ್ಯರಂತೆ ಇದ್ದರು. ಅವರು ವರ್ಗಾವಣೆಗೊಳ್ಳುತ್ತಿದ್ದರೂ ೩ ಗ್ರಾಮಗಳ ಜನರ ಮನಸ್ಸಿನೊಳಗಿಂದ ಬಿಟ್ಟು ಬಿಡಲು ಸಾಧ್ಯವಿಲ್ಲ. ಮುಂದೆ ಉನ್ನತ ಹುದ್ದೆಗೇರಿ ದ.ಕ.ಜಿಲ್ಲೆಗೆ ಅವರು ಅಧಿಕಾರಿಯಾಗಿ ಬರಲಿ ಎಂದು ಹಾರೈಸಿದರು.

ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಅಬ್ದುಲ್ ನಾಸೀರ್ ಹೊಸಮನೆ, ಗ್ರಾ.ಪಂ.ಸದಸ್ಯೆ ವಾಣಿ ಶೆಟ್ಟಿ, ಗ್ರಾಮಸ್ಥ ನಾಸೀರ್ ಸಮರಗುಂಡಿಯವರು ಶುಭಹಾರೈಸಿದರು. ಗ್ರಾ.ಪಂ.ಸದಸ್ಯರುಗಳು, ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು, ಗ್ರಾಮಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಕಣ್ಣೀರಿನ ವಿದಾಯ

ಪಿಡಿಒ ತಿರುಪತಿ ಟಿ ಉಪ್ಪಾರರವರಿಗೆ ಸಭೆಯಲ್ಲಿದ್ದವರು ಕಣ್ಣೀರಿನ ಮೂಲಕ ವಿದಾಯ ಹೇಳಿದ್ದು ವಿಶೇಷವಾಗಿತ್ತು. ಗ್ರಾಮಸ್ಥರ ಈ ಕಣ್ಣೀರಿನಿಂದಾಗಿ ತಿರುಪತಿಯವರು ಮಾತು ಬಾರದೇ ಕೆಲ ಹೊತ್ತು ಮೌನಿಯಾಗಿದ್ದು ಬಳಿಕ ತಾನೂ ಕಣ್ಣೀರು ಒರೆಸಿಕೊಂಡು ಬಾವುಕರಾಗಿಯೇ ಮಾತು ಆರಂಭಿಸಿದ್ದರು. ಸಭೆಯಲ್ಲಿದ್ದ ಗ್ರಾ.ಪಂ.ಅಧ್ಯಕ್ಷೆ, ಸದಸ್ಯೆಯರ ಕಣ್ಣಿನಲ್ಲಿ ಕಣ್ಣೀರು ಸುರಿಯಿತು. ಸದಸ್ಯೆ ವಾಣಿ ಶೆಟ್ಟಿಯವರು ಕಣ್ಣೀರು ಸುರಿಸಿಕೊಂಡೇ ತಿರುಪತಿಯವರ ಸೇವೆ, ಕರ್ತವ್ಯ, ಜನರೊಂದಿಗಿನ ಒಡನಾಟ ನೆನಪಿಸಿಕೊಂಡು ಶುಭಹಾರೈಸಿದರು. ಗ್ರಾ.ಪಂ.ಸದಸ್ಯರುಗಳು ಗುಲಾಬಿ ಹೂ ನೀಡಿ ಬೀಳ್ಕೊಟ್ಟರು. ಕಳೆದ ಆರೂವರೇ ವರ್ಷಗಳ ಕಾಲ ಗೋಳಿತ್ತೊಟ್ಟು ಗ್ರಾ.ಪಂ. ಪಿಡಿಒ ಆಗಿದ್ದ ತಿರುಪತಿಯವರು ತಾಲೂಕಿನಲ್ಲಿ ಓರ್ವ ನಿಷ್ಠಾವಂತ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.