ಅಡೆತಡೆ ಓಟ ರಾಜ್ಯಮಟ್ಟದಲ್ಲಿ ಸುಜಿತ್ ಜೋರ್ಜ್‌ಪ್ರಥಮ

Puttur_Advt_NewsUnder_1
Puttur_Advt_NewsUnder_1

sujithನೆಲ್ಯಾಡಿ: ಧಾರವಾಡದಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟದ 17ರ ವಯೋಮಾನದ ಬಾಲಕರ ವಿಭಾಗದ 100 ಮೀ. ಅಡೆತಡೆ ಓಟದಲ್ಲಿ ಕೊಣಾಲು ಗ್ರಾಮದ ಒರಪ್ಪಂಗಲ್ ನಿವಾಸಿ ಸುಜಿತ್ ಜೋರ್ಜ್‌ರವರು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಸುಜಿತ್ ಜಾರ್ಜ್ ಪ್ರಸ್ತುತ ಮೂಡಬಿದ್ರೆ ಆಳ್ವಾಸ್ ವಿದ್ಯಾಸಂಸ್ಥೆಯ ೧೦ನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ. ಕೊಣಾಲು ಒರಪ್ಪಂಗಲ್ ನಿವಾಸಿ ಒ.ಜೆ.ಜಾರ್ಜ್ ಮತ್ತು ಸಿಮಿ ಜಾರ್ಜ್ ದಂಪತಿ ಪುತ್ರ. ಅಳ್ವಾಸ್ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಶಾಂತರಾಮ್ ಶೆಟ್ಟಿಯವರು ಇವರಿಗೆ ತರಬೇತಿ ನೀಡಿದ್ದರು. ಸುಜಿತ್ ನೆಲ್ಯಾಡಿ ಬೆಥನಿ ವಿದ್ಯಾಸಂಸ್ಥೆಯ ಹಳೆ ವಿದ್ಯಾರ್ಥಿಯಾಗಿದ್ದು ಇಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಶಿಜೋರವರು ಇವರಿಗೆ ತರಬೇತಿ ನೀಡಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.