Breaking News

ದ.23 : ಸಂಪ್ಯ ಉದಯಗಿರಿಯಲ್ಲಿ ರಕ್ತೇಶ್ವರಿ ದೈವಕ್ಕೆ ಧರ್ಮ ನೇಮ  ನಡಾವಳಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸಂಪ್ಯ ಉದಯಗಿರಿಯಲ್ಲಿನ ಶ್ರೀ ವಿಷ್ಣುಮೂರ್ತಿ ಮತ್ತು ಅನ್ನಪೂರ್ಣೇಶ್ವರಿ ದೇವಾಲಯದ ವಠಾರದಲ್ಲಿ ದ.23 ರಂದು ರಾತ್ರಿ ರಕ್ತೇಶ್ವರಿ ದೈವಕ್ಕೆ ಧರ್ಮ ನೇಮ ನಡಾವಳಿ ನಡೆಯಲಿದೆ ಎಂದು ಶ್ರೀ ರಕ್ತೇಶ್ವರಿ ದೈವದ ಧರ್ಮ ನಡಾವಳಿ ಉತ್ಸವದ ಸಂಚಾಲಕ ಕೆ ಪ್ರೀತಂ ಪುತ್ತೂರಾಯ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ದೈವದ ನುಡಿಕಟ್ಟಿನಂತೆ ಮೂಲ ಸಂಪ್ರದಾಯ ಪ್ರಕಾರ ನಡೆಯುವ ಈ ಧರ್ಮ ನಡಾವಳಿ ತುಳುನಾಡಿನ ಚರಿತ್ರೆಯಲ್ಲೇ ಪ್ರಥಮ ಮಹಾಸೇವೆಯಾಗಿದೆ. ಧರ್ಮನಡಾವಳಿಗೆ ವೀಳ್ಯದೆಲೆಯ ೧೬ ಬಾಗಿಲು ಇರುವ ಚಪ್ಪರ, ಕಬ್ಬಿನ ಅಡ್ಡ ಸಿಕ್ಕಿಸಿ ೧೬ ಬಾಗಿಲಿನಲ್ಲಿ ೧೬ ಬಗೆಯ ವಸ್ತುಗಳನ್ನು ಇರಿಸಲಾಗುತ್ತದೆ. ಬೆಲ್ಲದ ಒಲೆಗೆ ಗಂಧದ ಕಟ್ಟಿಗೆ, ೧೬ ಮುಡಿ ಅಕ್ಕಿಯ ಚರು, ೧೬ ಗಂಟು ಬಿದಿರಿನ ಸಿರಿಮುಡಿ ಕಟ್ಟಿಸಿ ರಕ್ತೇಶ್ವರಿಗೆ ಧರ್ಮ ನೇಮ ನಡಾವಳಿ ನಡೆಯಲಿದೆ ಎಂದರು.

ದ. ೨೩ರಂದು ಬೆಳಗ್ಗೆ ಗಣಪತಿ ಹವನ, ತ್ರಿಕಾಲ ಪೂಜೆ, ಬೆಳಗ್ಗೆ ಭಂಡಾರ ಹೊರಡುವುದು, ಬಳಿಕ ಶ್ರೀ ಅನ್ನಪೂರ್ಣೇಶ್ವರಿ ದೇವರ ವಿಶೇಷ ಮಹಾಪೂಜೆ, ಚಂಡಿಕಾ ಹವನ, ತ್ರಿಕಾಲ ಪೂಜೆ, ಶ್ರೀ ರಕ್ತೇಶ್ವರಿ ದೈವದ ಮಹಾಪೂಜೆ, ನಿರಂತರ ಅನ್ನಸಂತರ್ಪಣೆ ನಡೆಯಲಿದೆ.  ಸಂಜೆ ನಡೆಯುವ ಸಭಾ ಕಾರ‍್ಯಕ್ರಮದಲ್ಲಿ ಕಟೀಲು ಶ್ರೀಕ್ಷೇತ್ರದ ಅನುವಂಶಿಕ ಪ್ರಧಾನ ಅರ್ಚಕ ವಾಸುದೇವ ಆಸ್ರಣ್ಣ ಆಶೀರ್ವಚನ ನೀಡಲಿದ್ದಾರೆ. ರಾಜ್ಯ ಸಂಸದೀಯ ಕಾರ್ಯದರ್ಶಿ, ಶಾಸಕಿ ಶಕುಂತಳಾ.ಟಿ ಶೆಟ್ಟಿ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿ, ಉದ್ಯಮಿ ಅಶೋಕ್ ಕುಮಾರ್ ರೈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ತುಳುನಾಡ ದೈವ ಪರಿಚಾರಕರಿಗೆ ಇದೇ ಸಂದರ್ಭದಲ್ಲಿ ಗೌರವಾರ್ಪಣೆ ನಡೆಯಲಿದೆ. ರಾತ್ರಿ ರಕ್ತೇಶ್ವರಿಗೆ ಧರ್ಮ ನಡಾವಳಿ ಆರಂಭಗೊಳ್ಳಲಿದೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ಶ್ರೀ ರಕ್ತೇಶ್ವರಿ ದೈವದ ಧರ್ಮ ನೇಮ ನಡಾವಳಿ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷ ಮಹೇಶ್ ಕಜೆ,  ಜತೆ ಕಾರ್ಯದರ್ಶಿ ಸೀತಾರಾಮ ಶೆಟ್ಟಿ ಕಂಬಳತ್ತಡ್ಡ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.