Breaking News

ದ.3: ಬೆದ್ರೋಡಿ ವಿದ್ಯಾನಗರ ಶಾಲಾ ದಶಮಾನೋತ್ಸವ

Puttur_Advt_NewsUnder_1
Puttur_Advt_NewsUnder_1

bedrodiನೆಲ್ಯಾಡಿ: ೩-೯-೨೦೦೬ರಂದು ಸ್ಥಾಪನೆಗೊಂಡ ಬಜತ್ತೂರು ಗ್ರಾಮದ ಬೆದ್ರೋಡಿ ವಿದ್ಯಾನಗರ ಸರಕಾರಿ ಕಿ.ಪ್ರಾ.ಶಾಲೆಯ ದಶಮಾನೋತ್ಸವ ’ದಶ ಸಂಭ್ರಮ ೨೦೧೬’ ಹಾಗೂ ದಶಮಾನೋತ್ಸವದ ಸವಿನೆನಪಿಗಾಗಿ ದಾನಿಗಳಿಂದ ನಿರ್ಮಾಣಗೊಂಡ ’ವಿದ್ಯಾಸಿರಿ’ ರಂಗಮಂದಿರ ಉದ್ಘಾಟನೆ ದ.೩ರಂದು ನಡೆಯಲಿದೆ ಎಂದು ದಶಮಾನೋತ್ಸವ ಸಮಿತಿ ಅಧ್ಯಕ್ಷ ಜಗದೀಶ್ ರಾವ್ ಮಣಿಕ್ಕಳ, ಸಂಚಾಲಕ ಶ್ರೀಧರ ರಾವ್ ಮಣಿಕ್ಕಳ, ಎಸ್‌ಡಿಎಂಸಿ ಅಧ್ಯಕ್ಷ ಜಯವಿಠಲ, ಮುಖ್ಯಗುರು ವನಿತಾ ಎ., ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ. ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ರಂಗಮಂದಿರ ಉದ್ಘಾಟಿಸಲಿದ್ದಾರೆ. ಸಂಸದೀಯ ಕಾರ್ಯದರ್ಶಿ, ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿಯವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಬಜತ್ತೂರು ಗ್ರಾ.ಪಂ.ಅಧ್ಯಕ್ಷ ಸಂತೋಷ್ ಕುಮಾರ್ ಪಂರ್ದಾಜೆ ಅಧ್ಯಕ್ಷತೆ ವಹಿಸಲಿದ್ದಾರೆ. ತಾ.ಪಂ.ಅಧ್ಯಕ್ಷೆ ಭವಾನಿ ಚಿದಾನಂದ್, ಜಿ.ಪಂ.ಸದಸ್ಯೆ ಶಯನಾ ಜಯಾನಂದ, ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಮುಕುಂದ ಗೌಡ ಬಜತ್ತೂರು, ಬಜತ್ತೂರು ಗ್ರಾ.ಪಂ.ಸದಸ್ಯರುಗಳಾದ ರಾಜೇಶ್ ಪಿಜಕ್ಕಳ,ಪ್ರೆಸಿಲ್ಲಾ ಡಿ.ಸೋಜ, ನಝೀರ್ ಬೆದ್ರೋಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್., ಪುತ್ತೂರು ಬಿಆರ್‌ಸಿ ಕೇಂದ್ರದ ಸಮನ್ವಯಾಧಿಕಾರಿ ವಿಷ್ಣು ಪ್ರಸಾದ್ ಸಿ., ಪ್ರಾಥಮಿಕ ಶಾಲಾ ಶಿ.ಸಂಘದ ಅಧ್ಯಕ್ಷ ಮಾಮಚ್ಚನ್ ಎಂ., ಶ್ರೀ ಕ್ಷೇ.ಧ.ಗ್ರಾ.ಯೋಜನೆ ಯೋಜನಾಧಿಕಾರಿ ಧರ್ಣಪ್ಪ ಮೂಲ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಂಜೆ ಬಹುಮಾನ  ವಿತರಣಾ ಕಾರ್ಯಕ್ರಮ, ಬಳಿಕ ಶಾಲಾ ವಿದ್ಯಾರ್ಥಿಗಳಿಂದ’ ಪ್ರತಿಭಾ ಸಿಂಚನ’ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ ದಯಾನಂದ ವಾಣಿಶ್ರೀ ನೆಲ್ಯಾಡಿ ಸಾರಥ್ಯದ’ನಮ್ಮ ಕಲಾವಿದೆರ್ ನೆಲ್ಯಾಡಿ’ಇವರಿಂದ ಪನ್ಪಿನಕ್ಲು ಪನ್ಪೆರ್..ವಿನೂತನ ಶೈಲಿಯ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.