Breaking News

ರೋಯಲ್ ಸೌಹಾರ್ದ ಸಹಕಾರಿ ಸಂಘದ ಪ್ರಥಮ ಮಹಾಸಭೆ-ಸನ್ಮಾನ

Puttur_Advt_NewsUnder_1
Puttur_Advt_NewsUnder_1

1_2

ಪುತ್ತೂರು: ರೋಯಲ್ ಸೌಹಾರ್ದ ಸಹಕಾರಿ ಸಂಘದ ಪ್ರಥಮ ಮಹಾಸಭೆ ಮತ್ತು ಸನ್ಮಾನ ಕಾರ್ಯಕ್ರಮವು ಬೊಳ್ವಾರ್ ಅಲ್ಮಾಸ್ ಟವರ್ ಬಿಲ್ಡಿಂಗ್‌ನವಲ್ಲಿರುವ ಸಂಘದ ಕೇಂದ್ರ ಕಛೇರಿಯಲ್ಲಿ ಡಿ.೧ರಂದು ನಡೆಯಿತು.

photo1 photo2 photo3

 

ಆನಂದಾಶ್ರಮಕ್ಕೆ 1 ಕ್ವಿಂಟಾಲ್  ಅಕ್ಕಿ ಕೊಡುಗೆ

ಪುತ್ತೂರು: ರೋಯಲ್ ಸೌಹಾರ್ದ ಸಹಕಾರಿ ಸಂಘದ ಪ್ರಥಮ ಮಹಾಸಭೆ ಮತ್ತು ಸನ್ಮಾನ ಕಾರ್ಯಕ್ರಮ ಬೊಳ್ವಾರ್ ಅಲ್ಮಾಸ್ ಟವರ್ ಬಿಲ್ಡಿಂಗ್‌ನಲ್ಲಿರುವ ಸಂಘದ ಕೇಂದ್ರ ಕಛೇರಿಯಲ್ಲಿ ಡಿ.1ರಂದು ನಡೆಯಿತು.

ಸನ್ಮಾನ ಕಾರ್ಯಕ್ರಮ: ಮಹಾಸಭೆಯ ಮೊದಲು ರೋಯಲ್ ಟ್ರಸ್ಟ್‌ನಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.

ಭಾರತೀಯ ಸೇನೆಯಲ್ಲಿ ಸುಬೇದಾರರಾಗಿದ್ದ ಪುತ್ತೂರು ನಿವಾಸಿಗಳಾದ ಕೆ.ಪಿ ಶೆಟ್ಟಿ ಮತ್ತು ರಮೇಶ್ ಬಾಬು ಹಾಗೂ ಕಾರ್ಮಿಕ ಇಲಾಖೆಯಿಂದ ಸೇವೆಯಿಂದ ನಿವೃತ್ತಿಗೊಂಡ ಚಿದಾನಂದ ಕಾಮತ್ ಕಾಸರಗೋಡು ಮತ್ತು ಅವರ ಪತ್ನಿ ಅನಿತಾ ಕಾಮತ್‌ರವರನ್ನು ರೋಯಲ್ ಟ್ರಸ್ಟ್‌ನಿಂದ ಸನ್ಮಾನಿಸಲಾಯಿತು. ಆನಂದಾಶ್ರಮ ಸೇವಾ ಟ್ರಸ್ಟ್‌ನ ಡಾ. ಗೌರಿ ಪೈಯವರು ಸನ್ಮಾನಿತರಿಗೆ ಹಾರ, ಶಾಲು ಹಾಕಿ, ಕಾಲುದೀಪ ನೀಡಿ ಸನ್ಮಾನಿಸಿ ಅಭಿನಂದಿಸಿದರು.

ಆನಂದಾಶ್ರಮ ಸೇವಾ ಸಂಸ್ಥೆಗೆ ರೋಯಲ್ ಟ್ರಸ್ಟ್‌ನಿಂದ 1 ಕ್ವಿಂಟಾಲ್ ಅಕ್ಕಿಯ ಸಹಾಯಧನದ ಚೆಕ್ಕನ್ನು ಡಾ. ಗೌರಿ ಪೈಯವರಿಗೆ ಈ ಸಂದರ್ಭದಲ್ಲಿ ನೀಡಲಾಯಿತು.

ಒಳ್ಳೆಯ ಕೆಲಸಕ್ಕೆ ಗೌರವ ಇದ್ದೇ ಇರುತ್ತದೆ-ಚಿದಾನಂದ ಕಾಮತ್: ಕಾರ್ಮಿಕ ಇಲಾಖೆಯಿಂದ ನಿವೃತ್ತಿ ಹೊಂದಿರುವ ಬೊಳುವಾರು ಸಾಂಸ್ಕೃತಿಕ ಕಲಾ ಕೇಂದ್ರದ ನಿರ್ದೇಶಕ ಚಿದಾನಂದ ಕಾಮತ್ ಕಾಸರಗೋಡುರವರು ಸನ್ಮಾನ ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿ ಮಾತನಾಡಿ ಸಮಾಜದಲ್ಲಿ ಒಳ್ಳೆಯ ಕೆಲಸಗಳನ್ನು ಗುರುತಿಸುವವರು ಇದ್ದಾರೆ, ಟೀಕಿಸುವವರು ಇದ್ದಾರೆ, ಒಳ್ಳೆಯ ಕೆಲಸಗಳಿಗೆ ಗೌರವ ಸಿಕ್ಕೇ ಸಿಗುತ್ತದೆ. ಎಲ್ಲಾ ಸಂಘಟನೆಗಳು ನಂಬಿಕೆಯ ಮೇಲೆ ಅವಲಂಬಿತವಾಗಿದೆ, ನಾನು ಕಾರ್ಮಿಕ ಇಲಾಖೆಯಲ್ಲಿ ಸೇವೆಯಲ್ಲಿದ್ದಾಗ ಅಲ್ಲಿನ ಅಧಿಕಾರಿಗಳು ನನಗೆ ಪ್ರೋತ್ಸಾಹ ಬೆಂಬಲ ನೀಡಿದ್ದಾರೆ ಎಂದು ಹೇಳಿದರು.

ಸೈನಿಕರ ಕಷ್ಟ ನೋಡಿದರೆ ಬ್ಯಾಂಕ್ ಮುಂದಿನ ಕ್ಯೂ ಲೆಕ್ಕಕ್ಕೇ ಇಲ್ಲ: ರಮೇಶ್ ಬಾಬು: ಭಾರತೀಯ ಸೇನೆಯ ನಿವೃತ್ತ ಸುಬೇಧಾರ್ ರಮೇಶ್ ಬಾಬುರವರು ಸನ್ಮಾನ ಸ್ವೀಕರಿಸಿ ಮಾತನಾಡಿ ಭಾರತದ ಗಡಿಯಲ್ಲಿ ಸೈನಿಕರು ಪಡುವ ಕಷ್ಟಗಳನ್ನು ನೋಡಿದರೆ ಬ್ಯಾಂಕ್ ಮುಂದೆ ಕ್ಯೂ ನಿಲ್ಲುವ ಕಷ್ಟ ಲೆಕ್ಕಕ್ಕೇ ಇಲ್ಲವಾಗಿದೆ, ತಮ್ಮ ಬಂಧು ಬಳಗ, ಮನೆ ಮಠವನ್ನು ಬಿಟ್ಟು ದೇಶಕ್ಕಾಗಿ ಹಗಲಿರುಳು ದೇಶ ಸೇವೆ ಮಾಡುತ್ತಿರುವ ಸೈನಿಕರಿಗೆ ನಾವು ಸ್ಫೂರ್ತಿ ತುಂಬುವ ಕೆಲಸ ಮಾಡಬೇಕಿದೆ, ಯೋಚನೆ, ಯೋಜನೆ ಮಾಡುವುದಕ್ಕಿಂತ ಮುಖ್ಯವಾಗಿ ಕಾರ್ಯಗತ ಮಾಡುವವರನ್ನು ನಾವು ಮೆಚ್ಚಿ ಪ್ರೋತ್ಸಾಹಿಸಬೇಕು, ದೇಶ ಸೇವೆ ಮಾಡಿ ಬಂದ ಮಾಜಿ ಸೈನಿಕರ ಬಗ್ಗೆ ಕಾಳಜಿ ವಹಿಸಿ ಅಭಿನಂದಿಸುವ ಕಾರ್ಯ ಶ್ಲಾಘನೀಯ, ಇದು ಎಲ್ಲಾ ಕಡೆಗಳಲ್ಲಿಯೂ ನಡೆಯಬೇಕು, ನಮ್ಮನ್ನು ಸನ್ಮಾನಿಸಿದ ರೋಯಲ್ ಗ್ರೂಪ್‌ಗೆ ನಾವು ಕೃತಜ್ಞರಾಗಿzವೆ ಎಂದು ಹೇಳಿದರು.

ಸಂಸ್ಥೆಯ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ-ಲೋಕೇಶ್ ಹೆಗ್ಡೆ: ಅಧ್ಯಕ್ಷತೆ ವಹಿಸಿದ್ದ ರೋಯಲ್ ಟ್ರಸ್ಟ್‌ನ ಗೌರವಾಧ್ಯಕ್ಷ ಲೋಕೇಶ್ ಹೆಗ್ಡೆ ಮಾತನಾಡಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಆರಂಭಗೊಂಡಿರುವ ರೋಯಲ್ ಸಂಸ್ಥೆ, ಇದೀಗ ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದು ಇದರ ಯಶಸ್ಸಿಗೆ ಸಂಸ್ಥೆಯ ಎಲ್ಲರ ಸಹಕಾರ ಅಗತ್ಯವಿದೆ ಎಂದು ಹೇಳಿದರು.

ಸುಶ್ಮಾ ಭಟ್ ಪ್ರಾರ್ಥಿಸಿದರು. ರೋಯಲ್ ಟ್ರಸ್ಟ್‌ನ ಅಧ್ಯಕ್ಷ ದಂಬೆಕಾನ ಸದಾಶಿವ ರೈ ಸ್ವಾಗತಿಸಿ, ಆನಂದ ರೈ ವಂದಿಸಿದರು. ಸುದರ್ಶನ್ ಜೈನ್ , ಬೇಬಿ ಸದಾನಂದ ಅತಿಥಿಗಳನ್ನು ಹಾರಹಾಕಿ ಗೌರವಿಸಿದರು. ಡಾ| ರಾಜೇಶ್ ಬೆಜ್ಜಂಗಳರವರು ಕಾರ್ಯಕ್ರಮ ನಿರೂಪಿಸಿದರು.

ಪ್ರಥಮ ಮಹಾಸಭೆ: ರಾಜ್ಯಮಟ್ಟದ ಏಕೈಕ ಸಂಸ್ಥೆ-ದಂಬೆಕಾನ ಸದಾಶಿವ ರೈ: ರೋಯಲ್ ಸೌಹಾರ್ದ ಸಹಕಾರಿ ಸಂಘದ ಪ್ರಥಮ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಮುಖ್ಯಪ್ರವರ್ತಕ ದಂಬೆಕಾನ ಸದಾಶಿವ ರೈಯವರು ಮಾತನಾಡಿ ರೋಯಲ್ ಸೌಹಾರ್ದ ಸಹಕಾರಿ ಸಂಘವು ರಾಜ್ಯಮಟ್ಟದಲ್ಲಿ ಆರಂಭಗೊಂಡಿರುವ ಏಕೈಕ ಸಂಸ್ಥೆಯಾಗಿದೆ, ಈಗಾಗಲೇ ೧೦೫೩ ಜನ ಸದಸ್ಯತ್ವವನ್ನು ಪಡೆದುಕೊಂಡಿದ್ದು, ಮುಂದಿನ ತಿಂಗಳಲ್ಲಿ ೧೭ಜನರ ಆಡಳಿತ ಮಂಡಳಿಗಾಗಿ ಚುನಾವಣೆ ಪ್ರಕ್ರಿಯೆ ನಡೆಯಲಿದೆ, ಈಗಾಗಲೇ ಬೊಳ್ವಾರ್‌ನಲ್ಲಿರುವ ಕೇಂದ್ರ ಕಛೇರಿಯಲ್ಲಿ ಬ್ಯಾಂಕಿಂಗ್ ಮಾದರಿಯ ಸ್ಟ್ರಾಂಗ್‌ರೂಂ, ಸೇಫ್ ಲಾಕರ್ ವ್ಯವಸ್ಥೆಗಳು ಆಗಿದೆ, ಸಂಸ್ಥೆಯ ಬೆಳವಣಿಗೆ, ಅಭಿವೃದ್ಧಿಗಾಗಿ ಸಂಘದ ಸದಸ್ಯರೆಲ್ಲರೂ ಸಹಕರಿಸಬೇಕಿದೆ ಎಂದು ಹೇಳಿದರು.

ನ್ಯಾಯವಾದಿ ಮಹೇಶ್ ಕಜೆಯವರು ಮಾತನಾಡಿ ದೇಶದ ಪರಿವರ್ತನೆಯ ಕಾಲಘಟ್ಟದಲ್ಲಿ ಆರಂಭಗೊಳ್ಳುತ್ತಿರುವ ರೋಯಲ್ ಸೌಹಾರ್ದ ಸಹಕಾರಿ ಸಂಘವು ಖಂಡಿತವಾಗಿಯೂ ಯಶಸ್ಸನ್ನು ಕಾಣಲಿದೆ,  ರಾಜ್ಯಮಟ್ಟದ ಸಂಸ್ಥೆಯಾಗಿರುವುದರಿಂದ ರೋಯಲ್‌ನ ಸೇವೆ ರಾಜ್ಯವ್ಯಾಪಿ ವಿಸ್ತಾರವಾಗಲಿದೆ ಎಂದು ಹೇಳಿದರು.

ಸಂಸ್ಥೆಯ ಕಾರ್ಯದರ್ಶಿ ಡಾ. ರಾಜೇಶ್ ಬೆಜ್ಜಂಗಳ ಸ್ವಾಗತಿಸಿ ವಂದಿಸಿದರು.

ರೋಯಲ್ ಸೌಹಾರ್ದ ಸಹಕಾರಿ ಸಂಘವು ರೋಯಲ್ ಟ್ರಸ್ಟ್‌ನ ಒಂದು ಭಾಗವಾಗಿದೆ, ಇನ್ನೂ ಅನೇಕ ಭಾಗಗಳು, ಸಮಾಜಮುಖಿ ಕೆಲಸಗಳು ಟ್ರಸ್ಟ್ ಮೂಲಕ ನಡೆಯಲಿದೆ, ರೋಯಲ್ ಸೌಹಾರ್ದ ಸಹಕಾರಿಯು ರಾಜ್ಯಮಟ್ಟದ ಸಂಸ್ಥೆಯಾಗಿರುವುದರಿಂದ ರಾಜ್ಯದ ಯಾವ ಭಾಗದ ಜನರಿಗೂ ಇದರಲ್ಲಿ ಸದಸ್ಯತ್ವವನ್ನು ಪಡೆದುಕೊಳ್ಳಬಹುದು, ರಾಜ್ಯದ ಯಾವ ಕಡೆಯೂ ಶಾಖೆಗಳನ್ನು ತೆರೆಯಬಹುದು ಮತ್ತು ಈ ಸಂಸ್ಥೆಯು ನೇರವಾಗಿ ರಾಜ್ಯಮಟ್ಟದಲ್ಲಿ ಸಂಯುಕ್ತ ಸಹಕಾರ ಇಲಾಖೆಯ ಅಧೀನದಲ್ಲಿ ಕೆಲಸ ಮಾಡಲಿದೆ.

-ದಂಬೆಕಾನ ಸದಾಶಿವ ರೈ,

ಮುಖ್ಯಪ್ರವರ್ತಕರು ರೋಯಲ್ ಸೌಹಾರ್ದ ಸಹಕಾರಿ ನಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.