ಅಬ್ಬಕ್ಕ ಉತ್ಸವ : ಕವಯತ್ರಿಯರಿಗೆ ಆಹ್ವಾನ

Puttur_Advt_NewsUnder_1
Puttur_Advt_NewsUnder_1

ಮಂಗಳೂರು: ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯು ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಜನವರಿಯಲ್ಲಿ ’ವೀರರಾಣಿ ಅಬ್ಬಕ್ಕ ಉತ್ಸವ – 2016’ ರಲ್ಲಿ ’ಮಹಿಳಾ ಕವಿಗೋಷ್ಠಿ’ಯೊಂದನ್ನು ಆಯೋಜಿಸಲು ನಿರ್ಧರಿಸಲಾಗಿದೆ.ಈವರೆಗಿನ ಅಬ್ಬಕ್ಕ ಉತ್ಸವಗಳಲ್ಲಿ ಭಾಗವಹಿಸದೇ ಇರುವ ಮಹಿಳಾ ಕವಿಗಳನ್ನು ಅವರ ಕವನಗಳ ಆಧಾರದಲ್ಲಿ ಆರಿಸಿ ’ಬಹುಭಾಷಾ ಕವಿಗೋಷ್ಠಿ’ಯನ್ನು ಏರ್ಪಡಿಸುವುದು ಸಮಿತಿಯ ಉzಶವಾಗಿದೆ. ಈ ಹಿನ್ನೆಲೆಯಲ್ಲಿ ನಾಡು – ಹೊರನಾಡುಗಳಲ್ಲಿರುವ ಪ್ರತಿಭಾವಂತ ಕವಯತ್ರಿಯರ ವಿವರಗಳನ್ನು ಆಹ್ವಾನಿಸಲಾಗಿದೆ.

ಮಹಿಳಾ ಕವಿಗಳು ತಮ್ಮ ಹೆಸರು / ವಿಳಾಸ / ಸಾಧನೆ / ಪ್ರಕಟಿತ ಕವನ ಸಂಕಲನ ಮತ್ತಿತರ ವಿವರಗಳೊಂದಿಗೆ ತಾವು ಪ್ರಸ್ತುತ ಪಡಿಸಲು ಇಚ್ಛಿಸುವ ಕನ್ನಡ / ತುಳು / ಕೊಂಕಣಿ/ ಬ್ಯಾರಿ / ಅರೆಭಾಷೆ.. ಇತ್ಯಾದಿಗಳಲ್ಲಿ ಕನಿಷ್ಠ ಎರಡು ಕವಿತೆಗಳನ್ನು (ಅದು ಬೇರೆಲ್ಲೂ ಪ್ರಕಟವಾಗಿರಬಾರದು) ಬರೆದು ಸಂಚಾಲಕರು ’ಮಹಿಳಾ ಕವಿಗೋಷ್ಠಿ’ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಉಳ್ಳಾಲ, ಅಂಚೆ : ಪೆರ್ಮನ್ನೂರು, ಮಂಗಳೂರು ದ.ಕ.- ಈ ವಿಳಾಸಕ್ಕೆ ದಶಂಬರ್ ೧೫, ೨೦೧೬ ರೊಳಗೆ ಕಳುಹಿಸಿಕೊಡಬೇಕೆಂದು ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಭಾಸ್ಕರ ರೈ ಕುಕ್ಕುವಳ್ಳಿ (೯೪೪೯೦೧೬೬೧೬) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.