ರಾಷ್ಟ್ರೀಯ ಹಿರಿಯರ ಕ್ರೀಡಾಕೂಟ; ಓಂತ್ರಡ್ಕ ಶಾಲಾ ನಿವೃತ್ತ ಶಿಕ್ಷಕಿ ವಿಮಲರವರಿಗೆ ಪ್ರಶಸ್ತಿ

Puttur_Advt_NewsUnder_1
Puttur_Advt_NewsUnder_1

vimala_2ಕಡಬ: ಪಂಜ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಹಿರಿಯರ ಕ್ರೀಡಾಕೂಟದಲ್ಲಿ ಓಂತ್ರಡ್ಕ ಸ.ಉ.ಹಿ.ಪ್ರಾ. ಶಾಲಾ ನಿವೃತ್ತ ಶಿಕ್ಷಕಿ ವಿಮಲ ಎಚ್‌ರವರು ನಾಲ್ಕು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಕ್ರೀಡಾಭಿವೃದ್ದಿ ಸಮಿತಿ ಪಂಜ ಹಿರಿಯರ ಕ್ರೀಡಾ ಒಕ್ಕೂಟ ಭಾರತ, ಕರ್ನಾಟಕ ಹಿರಿಯರ ಕ್ರೀಡಾ ಒಕ್ಕೂಟ ಬೆಂಗಳೂರು ಮತ್ತು ಹಿರಿಯರ ಕ್ರೀಡಾ ಒಕ್ಕೂಟ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಸುಳ್ಯ ಪಂಜದ ಪದವಿ ಪೂರ್ವ ಕಾಲೇಜಿನ ಕೋಟಿ-ಚೆನ್ನಯ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಿರಿಯರ ಕ್ರೀಡಾಕೂಟ ನಡೆದಿದ್ದು ವಿಮಲರವರು ಉದ್ದಜಿಗಿತದಲ್ಲಿ ಪ್ರಥಮ, ೧೦೦ಮೀಟರ್ ಓಟದಲ್ಲಿ  ದ್ವಿತೀಯ, ೧೫೦೦ ಮೀಟರ್ ಓಟದಲ್ಲಿ ದ್ವಿತೀಯ, ಗುಂಡೆಸೆತದಲ್ಲಿ ತೃತೀಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಮಹಾರಾಷ್ಟ್ರ, ಪಂಜಾಬ್, ತಮಿಳ್ನಾಡು, ಮಧ್ಯಪ್ರದೇಶ, ಗುಜರಾತ್, ಉತ್ತರಾಖಂಡ, ಉತ್ತರಪ್ರದೇಶ, ಕರ್ನಾಟಕ ರಾಜ್ಯಗಳ ಮತ್ತು ಶ್ರೀಲಂಕಾದ ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.