ನಿಡ್ಪಳ್ಳಿ ಗ್ರಾಮ ಪಂಚಾಯತ್ ಮಕ್ಕಳ ಗ್ರಾಮ ಸಭೆ

nidpalli

ನಿಡ್ಪಳ್ಳಿ: ವದಂತಿಗಳಿಗೆ ಕಿವಿ ಕೊಟ್ಟು ಆತಂಕ ಪಡಬೇಡಿ ಎಂದು ಸಂಪ್ಯ ಪೊಲೀಸ್ ಠಾಣೆಯ ಅಧಿಕಾರಿ ಕುಮಾರ ಸ್ವಾಮಿ ಹೇಳಿದರು.

ಅವರು ನಿಡ್ಪಳ್ಳಿ ಗ್ರಾಮ ಪಂಚಾಯತ್ ವತಿಯಿಂದ ನ30 ರಂದು ನಿಡ್ಪಳ್ಳಿ ಶಾಲೆಯಲ್ಲಿ ನಡೆದ ಮಕ್ಕಳ ಗ್ರಾಮ ಸಭೆಯಲ್ಲಿ ಮಾಹಿತಿ ನೀಡಿದರು. ಮಕ್ಕಳು ಏಕಾಂಗಿಯಾಗಿ ಹೊರಗಡೆ ಹೋಗದಂತೆ ಪೋಷಕರು ಎಚ್ಚರ ವಹಿಸಿ. ಮಕ್ಕಳು ಯಾರೂ ಕೂಡ ಅಪರಿಚಿತರು ತಿಂಡಿ ಕೊಟ್ಟರೆ ಸ್ವೀಕರಿಸಬೇಡಿ. ಅನುಮಾನಾಸ್ಪದ ವ್ಯಕ್ತಿ, ವಾಹನ ಕಂಡು ಬಂದರೆ  ನಮಗೆ ತಿಳಿಸಿ ಎಂದು ಅವರು ಹೇಳಿದರು. ಬೆಟ್ಟಂಪಾಡಿ ಕ್ಲಸ್ಟರ್ ನ ಸಿ.ಅರ್.ಪಿ ಜನಾದನ ಅಲ್ಚಾರ್ ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡಿ ಮಕ್ಕಳ ಬದುಕುವ ಹಕ್ಕು, ರಕ್ಷಣೆಯ ಹಕ್ಕು, ಭಾಗವಹಿಸುವ ಹಕ್ಕು, ವಿಕಾಸ ಹೊಂದುವ ಹಕ್ಕುಗಳ ಬಗ್ಗೆ ವಿವರಿಸಿದರು. ಮಕ್ಕಳನ್ನು ಪ್ರೀತಿಸಿ ಅವರಿಗೆ ಸಿಗಬೇಕಾದ ಅವಶ್ಯಕತೆಗಳ ಬಗ್ಗೆ ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪರವಾಗಿ ನಿಡ್ಪಳ್ಳಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಜಯಂತಿಯವರು ಸಾಮಾಜಿಕ ಪಿಡುಗುಗಳಾದ ಬಾಲ್ಯವಿವಾಹ ಮತ್ತು ಬಾಲಕಾರ್ಮಿಕ ಬಗ್ಗೆ ಮಾಹಿತಿ ನೀಡಿದರು.

ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕಿ ವಿಜಯರವರು ರಾಷ್ಟ್ರಿಯ ಬಾಲ್ಯ ಸ್ವಾಸ್ಧ್ಯ ಕಾರ್ಯಕ್ರವ ಮತ್ತು ಮಕ್ಕಳು ಆರೋಗ್ಯವನ್ನು ಕಾಪಾಡುವ ಹಾಗೂ ಇಲಾಖೆಯಲ್ಲಿ ಇರುವ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು.

ಪಂಚಾಯತ್ ವ್ಯಾಪ್ತಿಯ ನಿಡ್ಪಳ್ಳಿ, ಚೂರಿಪದವು, ಮುಂಡೂರು ಶಾಲೆಯ ವಿದ್ಯಾರ್ಥಿಗಳು ಸಭೆಯಲ್ಲಿ ಪಾಲ್ಗೊಂಡಿದ್ದು ತಮ್ಮ ಶಾಲೆಯ  ಕೆಲವು ಬೇಡಿಕೆಗಳನ್ನು ಮಂಡಿಸಿದರು.

ಮುಂಡೂರು ಶಾಲೆಯ ಬೇಡಿಕೆಗಳು: ಕ್ರೀಡಾಂಗಣದ ವ್ಯವಸ್ಥೆ ಸರಿ ಪಡಿಸುವುದು. ಕುಡಿಯುವ ನೀರಿನ ಕೊಳವೆ ಬಾವಿಯ ಪಂಪು ದುರಸ್ತಿ ಮಾಡುವುದು.

 ಚೂರಿಪದವು ಶಾಲೆಯ ಬೇಡಿಕೆ: ರಂಗ ಮಂದಿರ ನಿರ್ಮಾಣ. ಕಂಪ್ಯೂಟರ್ ಕೊಠಡಿ. ಆವರಣ ಗೋಡೆ ರಚನೆ. ದೈಹಿಕ ಶಿಕ್ಷಕರ ನೇಮಕ.

ನಿಡ್ಪಳ್ಳಿ ಶಾಲೆಯ ಬೇಡಿಕೆ: ಆಟದ ಮೈದಾನದ ನಿರ್ಮಾಣ, ಆವರಣ ಗೋಡೆ ರಚನೆ, ಹಳೆ ಕಟ್ಟಡದ ದುರಸ್ತಿ, ದೈಹಿಕ ಶಿಕ್ಷಣ ಶಿಕ್ಷಕರ ನೇಮಕ. ಶಾಲೆಯ ಖಾಲಿ ಜಾಗಕ್ಕೆ ಬೇಲಿ ನಿರ್ಮಿಸಿ ವನ ನಿರ್ಮಿಸುವುದು.

ಮಕ್ಕಳ ಬೇಡಿಕೆಗಳನ್ನು ಪಂಚಾಯತ್ ಮಟ್ಟದಲ್ಲಿ ಸಾಧ್ಯವಾದಷ್ಟು ಈಡೇರಿಸಲು ಪ್ರಯತ್ನಿಸಲಾಗುವುದು ಎಂದು ಪಂಚಾಯತ್ ಅಧ್ಯಕ್ಷೆ ಸುಮತಿ ಭರವಸೆ ನೀಡಿದರು. ಸ್ವಚ್ಚತೆ ಬಗ್ಗೆ ಮಕ್ಕಳಿಗೆ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು. ಸ್ಪರ್ಧೆಯನ್ನು ಸಹಶಿಕ್ಷಕ ಲಿಂಗಪ್ಪ ನಾಯ್ಕ ನಡೆಸಿಕೊಟ್ಟರು. ನಿಡ್ಪಳ್ಳಿ ಶಾಲಾ ನಾಯಕ ಹರ್ಷಿತ್ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಉಪಾಧ್ಯಕ್ಷ ಅವಿನಾಶ್ ರೈ ಕುಡ್ಚಿಲ, ಸದಸ್ಯರಾದ ಬಾಲಚಂದ್ರ ರೈ ಅನಾಜೆ, ಲಕ್ಷ್ಮಣ ನಾಯ್ಕ, ಆಶಾಲತಾ, ನಂದಿನಿ ಆರ್.ರೈ, ಮುಖ್ಯ ಗುರು ತೋಪಯ್ಯ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಪಂಚಾಯತ್ ಕಾರ್ಯದರ್ಶಿ ರಾಜೀವಿ ಸ್ವಾಗತಿಸಿ ಸಹಶಿಕ್ಷಕಿ ಶಾರದಾ ವಂದಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂಧ್ಯಾಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಪಂಚಾಯತ್ ಸಿಬ್ಬಂದಿಗಳಾದ ವಿನೀತ್ ಕುಮಾರ್. ಸಂಸೀನಾ ಅಕ್ಷರ ದಾಸೋಹ ಸಿಬ್ಬಂದಿಗಳು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.