ದ.6: ಪುತ್ತೂರು ವಕೀಲರ ಸಂಘದ ಚುನಾವಣೆ; ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಜ.ಕಾರ್ಯದರ್ಶಿ, ಕೋಶಾಧಿಕಾರಿ ಸ್ಥಾನಕ್ಕೆ

Puttur_Advt_NewsUnder_1
Puttur_Advt_NewsUnder_1

vakeela-sangha

ಪುತ್ತೂರು: ಪ್ರತಿಷ್ಠಿತ ಪುತ್ತೂರು ವಕೀಲರ ಸಂಘಕ್ಕೆ ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ದ.6ರಂದು ಚುನಾವಣೆ ನಿಗದಿಯಾಗಿದೆ. ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಜತೆ ಕಾರ್ಯದರ್ಶಿ ಮತ್ತು ಕೋಶಾಧಿಕಾರಿ ಸ್ಥಾನಗಳಿಗೆ ಆಯ್ಕೆಯಾಗಬೇಕಿದ್ದು ಅವಿರೋಧ ಆಯ್ಕೆ ನಡೆಯದೇ ಇದ್ದಲ್ಲಿ ಚುನಾವಣೆ ನಡೆಯಲಿದೆ.

ನೂತನ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಅಧ್ಯಕ್ಷ ಉದಯಶಂಕರ ಶೆಟ್ಟಿ, ಪಿ.ಕೆ.ಸತೀಶನ್, ಜಯಾನಂದ ಕೆ.,ಭಾಸ್ಕರ ಕೋಡಿಂಬಾಳ, ಎಂ.ಪಿ.ಅಬೂಬಕ್ಕರ್, ಸಿಲ್ವಿಯಾ ಡಿಸೋಜರವರು ನಾಮಪತ್ರ ಸಲ್ಲಿಸಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಹಾಲಿ ಕಾರ್ಯದರ್ಶಿ ಸಂತೋಷ್ ಕುಮಾರ್, ಮಹಾಬಲ ಗೌಡ, ಹರಿಣಾಕ್ಷಿ ಜೆ.ಶೆಟ್ಟಿ, ಸಾತ್ವಿಕ್ ಆರಿಗ, ಪ್ರಸಾದ್ ಕುಮಾರ್ ರೈ ನಾಮಪತ್ರ ಸಲ್ಲಿಸಿದ್ದಾರೆ. ಕಾರ್ಯದರ್ಶಿ ಸ್ಥಾನಕ್ಕೆ ಮುರಳೀಕೃಷ್ಣ ಚಲ್ಲಂಗಾರು, ಮಹಾಬಲ ಗೌಡ, ಸಂತೋಷ್ ಕುಮಾರ್, ಕೃಷ್ಣಪ್ರಸಾದ್ ರೈ ಕೆಯ್ಯೂರು, ಹರಿಣಾಕ್ಷಿ ಜೆ.ಶೆಟ್ಟಿ, ಜತೆ ಕಾರ್ಯದರ್ಶಿ ಸ್ಥಾನಕ್ಕೆ ದೀಪಕ್ ಬೊಳುವಾರು, ತಾಹಿರಾ ಹಾಗೂ ಕೋಶಾಧಿಕಾರಿ ಸ್ಥಾನಕ್ಕೆ ಕುಮಾರನಾಥ್ ಎಸ್, ಗ್ರೆಗೊರಿ ಡಿಸೋಜ, ಸಾತ್ವಿಕ್ ಆರಿಗ ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಹಿಂತೆಗೆತಕ್ಕೆ ಇಂದು ಕಡೆ ದಿನ: ನಾಮಪತ್ರ ಹಿಂತೆಗೆದುಕೊಳ್ಳಲು ದ.2 ಕೊನೆಯ ದಿನವಾಗಿದೆ. ನ್ಯಾಯವಾದಿ ಪ್ರವೀಣ್ ಕುಮಾರ್ ಮುಖ್ಯ ಚುನಾವಣಾಧಿಕಾರಿಯಾಗಿ, ಕೆ.ಎಂ.ಸಿದ್ಧೀಕ್ ಮತ್ತು ಸಂಜಯ್ ಡಿ.ಸಹಾಯಕ ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.