ನೂಜಿಬಾಳ್ತಿಲ: ಕಂದಾಯ ಅದಾಲತ್

Puttur_Advt_NewsUnder_1
Puttur_Advt_NewsUnder_1

noojibalthilaಕಡಬ: ಪ್ರತೀ ತಿಂಗಳಿಗೊಮ್ಮೆ ನಡೆಯುತ್ತಿರುವ ಕಡಬ ಹೋಬಳಿ ಮಟ್ಟದ ಕಂದಾಯ ಅದಾಲತ್ ನ.30 ರಂದು ನೂಜಿಬಾಳ್ತಿಲ ಗ್ರಾ.ಪಂ.ವಠಾರದಲ್ಲಿ ಗ್ರಾ.ಪಂ.ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಡಬ ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಕಂದಾಯ ಇಲಾಖೆಯಿಂದ ಜನಸಾಮಾನ್ಯರಿಗೆ ಎಲ್ಲಾ ಸೌಲಭ್ಯಗಳು ಹತ್ತಿರದಲ್ಲಿ ಸಿಗುವುದರೊಂದಿಗೆ ಗ್ರಾ.ಪಂ. ಮಟ್ಟದಲ್ಲಿ 100 ಯೋಜನೆಗಳನ್ನು ತಂದು ಬಾಪೂಜಿ ಸೇವಾ ಕೇಂದ್ರದ ಮೂಲಕ ಸೌಲಭ್ಯ ಒದಗಿಸಲಾಗುತ್ತಿದೆ. ಇದರೊಂದಿಗೆ ತಿಂಗಳಿಗೊಮ್ಮೆ ಅಲ್ಲಲ್ಲಿ ಕೆಲವು ಗ್ರಾಮಗಳನ್ನು ಸೇರಿಸಿಕೊಂಡು ಕಂದಾಯ ಅದಾಲತ್ ಮೂಲಕ ಜನರ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದರೊಂದಿಗೆ ಪಹಣಿ ಪತ್ರದಲ್ಲಿ ಖಾತೆ 9-11ನಲ್ಲಿ ವ್ಯತ್ಯಾಸ ಬದಲಾವಣೆ, ಪಿಂಚಣಿ ಸೇರಿದಂತೆ ಅದೆಷ್ಟೋ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಈಗ ಸೂರಿಲ್ಲದವರಿಗೆ ನಿವೇಶನ ನೀಡುವುದರ ಮೂಲಕ 94ಸಿ ಯಲ್ಲಿ ವಾಸ್ತವ್ಯದ ಭೂಮಿಯನ್ನು ಮಂಜೂರುಗೊಳಿಸಿ ಹಕ್ಕುಪತ್ರ ನೀಡಿ ಬಡವರಿಗೆ ವಾಸ್ತವ್ಯದ ಮನೆ ಸೇರಿದಂತೆ ಎಲ್ಲಾ ಸರಕಾರಿ ಸೌಲಭ್ಯ ಸಿಗುವಂತೆ ಮಾಡಲಾಗಿದೆ. ಆದರೂ ಇನ್ನು ಕೆಲವರು ಸೌಲಭ್ಯದಿಂದ ವಂಚಿತರಾಗಿದ್ದು ಅಂತವರೂ ಕೂಡಾ ಮುಂದೆ ಬಂದು ಸೌಲಭ್ಯ ಪಡೆದುಕೊಳ್ಳಬೇಕೆಂದರು.

ವೇದಿಕೆಯಲ್ಲಿ ನೆಲ್ಯಾಡಿ ತಾ.ಪಂ.ಸದಸ್ಯೆ ಉಷಾ ಅಂಚನ್, ಉಪತಹಶೀಲ್ದಾರ್ ನವ್ಯ, ಗ್ರಾ.ಪಂ. ಸದಸ್ಯರಾದ ರಾಮಚಂದ್ರ ಗೌಡ ಎಸ್, ಪಿ.ಯು. ಸ್ಕರಿಯಾ, ರಜಿತಾ ಪದ್ಮನಾಭ, ವಲ್ಸ ಕೆ.ಜೆ, ಅಮ್ಮಣಿ ಜೋಸೆಫ್, ಹೊನ್ನಮ್ಮ ಉಪಸ್ಥಿತರಿದ್ದರು. ಭೂಮಾಪಕರಾದ ಶಂಕರ್‌ಪ್ರಭು, ಗ್ರಾಮಕರಣಿಕ ನೆಬಿಸಾಬ್, ಅಮೃತ ಸಹಕರಿಸಿದರು. ನೂಜಿಬಾಳ್ತಿಲ ರೆಂಜಿಲಾಡಿ ಗ್ರಾಮ ಕರಣಿಕರಾದ ಶ್ರೀರಾಜ್ ಭಟ್ ಫಲಾನುಭವಿಗಳ ವಿವರ ನೀಡಿದರು. ಕಡಬ ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ ಸ್ವಾಗತಿಸಿ, ಇಲಾಖಾ ಮಾಹಿತಿ ನೀಡಿ, ವಂದಿಸಿದರು.

ರಸ್ತೆಗಳ ಗಡಿ ಗುರುತಿಗೆ ಜಿ.ಪಂ. ಸದಸ್ಯರ ಸೂಚನೆ

ನಮ್ಮ ಗ್ರಾ.ಪಂ.ನ 49ರಸ್ತೆಗಳ ಗಡಿಗುರುತು ಆಗಬೇಕಾಗಿದ್ದರೂ ನಾವು ಅತೀ ಅಗತ್ಯವಾದ 3ರಸ್ತೆಗಳನ್ನು ಗಡಿಗುರುತು ಮಾಡಿ ಕೊಡುವಂತೆ ಕೇಳಿಕೊಂಡಿದ್ದೆವು ಆದರೆ ಭೂಮಾಪನಾ ಇಲಾಖೆಯವರಿಂದ ಸಾಧ್ಯವಾಗಿಲ್ಲ. ಇದು ಬಹಳ ವಿಷಾದನೀಯ. ಇನ್ನಾದರೂ ಅತೀ ಶೀಘ್ರದಲ್ಲಿ 3 ರಸ್ತೆಗಳನ್ನು ಕೂಡಲೇ ಗಡಿಗುರುತು ಮಾಡಿಸಿ ಕೊಡುವಂತೆ ವೇದಿಕೆಯಲ್ಲಿದ್ದ ಭೂಮಾಪನ ಪರ‍್ಯಾವೇಕ್ಷಕರಾದ ಪ್ರಕಾಶ್ ಬಿ.ಎಸ್.ರವರಿಗೆ ಜಿ.ಪಂ. ಸದಸ್ಯ ಪಿ.ಪಿ.ವರ್ಗೀಸ್ ಸೂಚಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.