Breaking News

’ಮುಂದಿನ ಚುನಾವಣೆಯಲ್ಲೂ ಶಕುಂತಳಾ ಶೆಟ್ಟಿಯೇ ನಮ್ಮ ಅಭ್ಯರ್ಥಿ’- ಫಝಲ್ ರಹೀಂ, ಪ್ರವೀಣ್‌ಚಂದ್ರ ಆಳ್ವ

Puttur_Advt_NewsUnder_1
Puttur_Advt_NewsUnder_1

shakunathala-shettyಪುತ್ತೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿಯೂ ಪುತ್ತೂರು ಕ್ಷೇತ್ರದ ಹಾಲಿ ಶಾಸಕಿ, ರಾಜ್ಯ ಸಂಸದೀಯ ಕಾರ್ಯದರ್ಶಿ ಶ್ರೀಮತಿ ಶಕುಂತಳಾ ಶೆಟ್ಟಿ ಅವರೇ ನಮ್ಮ ಪಕ್ಷದ ಅಭ್ಯರ್ಥಿ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝಲ್ ರಹೀಂ ಮತ್ತು ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್‌ಚಂದ್ರ ಆಳ್ವ ಹೇಳಿದ್ದಾರೆ.

ಕ್ಷೇತ್ರದ ಶಾಸಕರಾಗಿ ಚುನಾಯಿತರಾದ ಬಳಿಕ ಶ್ರೀಮತಿ ಶಕುಂತಳಾ ಟಿ.ಶೆಟ್ಟಿಯವರು ರಾಜಕೀಯ, ಜಾತಿ-ಮತ, ಧರ್ಮ ಭೇದವಿಲ್ಲದೆ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ.ಈ ನಿಟ್ಟಿನಲ್ಲಿ ಮುಂದಿನ ಚುನಾವಣೆಯಲ್ಲಿಯೂ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಶ್ರೀಮತಿ ಶಕುಂತಳಾ ಶೆಟ್ಟಿ ಅವರಿಗೇ ಅವಕಾಶ ಮಾಡಿಕೊಡಬೇಕೆಂದು ಪುತ್ತೂರು ಮತ್ತು ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್‌ನಿಂದ ಪಕ್ಷದ ಹೈಕಮಾಂಡ್‌ಗೆ ಶಿಫಾರಸ್ಸು ಮಾಡಲಾಗುವುದು ಎಂದು ಅಧ್ಯಕ್ಷರಾದ ಫಝಲ್ ರಹೀಂ ಮತ್ತು ಪ್ರವೀಣ್‌ಚಂದ್ರ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ನಿರ್ಜೀವ ಪಕ್ಷವಾದ ಜೆಡಿಎಸ್‌ನ ಜಿಲ್ಲಾಧ್ಯಕ್ಷರಿಂದ ಹಾಸ್ಯಾಸ್ಪದ ಹೇಳಿಕೆ:ಶಿಥಿಲಾವಸ್ಥೆಯಲ್ಲಿರುವ ನಿರ್ಜೀವ ಪಕ್ಷವಾದ ಜೆಡಿಎಸ್‌ನ ಜಿಲ್ಲಾಧ್ಯಕ್ಷರು ಪುತ್ತೂರಿನಲ್ಲಿ ಯಾವ ಪಕ್ಷದ ಶಾಸಕರಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ, ಇಲ್ಲಿನ ಶಾಸಕರು ಕಾಂಗ್ರೆಸ್ ಪಕ್ಷದಿಂದ ಗೆದ್ದು ಬಂದರೂ ಈಗಲೂ ಬಿಜೆಪಿಯಲ್ಲೇ ಇದ್ದಾರೆ ಎಂದು ನೀಡಿರುವ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದು ಫಝಲ್ ರಹೀಮ್ ಹೇಳಿದರು.

ಇವತ್ತಿನ ಸುದ್ದಿ ಪತ್ರಿಕೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರ ಹಾಸ್ಯಾಸ್ಪದ ಹೇಳಿಕೆ ನೋಡಿದ್ದೆ.ಜೀವಂತವಿಲ್ಲದ ಈ ಪಕ್ಷದ ಜಿಲ್ಲಾಧ್ಯಕ್ಷರ ಹೇಳಿಕೆಗೆ ಉತ್ತರ ಕೊಡುವ ಅಗತ್ಯವಿರಲಿಲ್ಲವಾದರೂ  ಜನತೆ ತಪ್ಪು ಅಭಿಪ್ರಾಯಪಡುವುದು ಬೇಡವೆಂದು ಪತ್ರಿಕಾಗೋಷ್ಠಿ ಮೂಲಕ ಉತ್ತರ ನೀಡುತ್ತಿzವೆ ಎಂದರು. ಜೆಡಿಎಸ್ ಜಿಲ್ಲಾಧ್ಯಕ್ಷರು ಕನಸು ಕಾಣುತ್ತಿದ್ದಾರೆ.ಶಾಸಕರು ರಾಜಕೀಯರಹಿತವಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ ಅವರು, ಜೆಡಿಎಸ್ ಪಕ್ಷದವರಿಗೆ ಅಧಿಕಾರದಲ್ಲಿದ್ದ ವೇಳೆ ಅವಿಭಜಿತ ಜಿಲ್ಲೆಯಲ್ಲಿದ್ದ ಎರಡು ಶಾಸಕ ಸ್ಥಾನಗಳನ್ನೂ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.ಬೆರಳೆಣಿಕೆಯಷ್ಟು ನಾಯಕರನ್ನು ಬಿಟ್ಟರೆ ಆ ಪಕ್ಷದಲ್ಲಿ ಕಾರ್ಯಕರ್ತರೇ ಇಲ್ಲ. ಹೀಗಿರುವಾಗ ಆ ಪಕ್ಷದ ಅಧ್ಯಕ್ಷರ ಹೇಳಿಕೆಗೆ ಯಾವುದೇ ಮಹತ್ವ ನೀಡಬೇಕಾಗಿಲ್ಲ ಎಂದರು.ಈ ಹಿಂದೆ ಬಿಜೆಪಿಯಲ್ಲಿದ್ದ ಶಾಸಕರು ಪಕ್ಷದ ಕಚೇರಿಯಲ್ಲಿ ಕುಳಿತುಕೊಳ್ಳುತ್ತಿದ್ದರು.ಆಗ ಒಂದು ಪಕ್ಷಕ್ಕೆ ಮಾತ್ರ ಶಾಸಕರು ಸೀಮಿತವಾಗಿದ್ದರು.ಆದರೆ ನಮ್ಮ ಶಾಸಕರು ಸರಕಾರಿ ಕಚೇರಿಯಲ್ಲೇ ಕುಳಿತು ಅಲ್ಲಿ ಎಲ್ಲರ ಕೆಲಸ ಮಾಡುತ್ತಿದ್ದಾರೆ.ವಿನಯ ಕುಮಾರ್ ಸೊರಕೆಯವರೂ ಶಾಸಕರಾಗಿದ್ದ ಸಂದರ್ಭದಲ್ಲಿ ಅದೇ ರೀತಿಯಲ್ಲಿ ಸರಕಾರಿ ಕಚೇರಿಯಲ್ಲಿ ಕುಳಿತು ಜನರ ಕೆಲಸ ಮಾಡುತ್ತಿದ್ದರು ಎಂದರು.ಜೆಡಿಎಸ್ ಈಗಾಗಲೇ ರಾಜ್ಯದಲ್ಲಿ ಪೂರ್ಣ ಖಾಲಿ ಆಗಿದೆ. ಇನ್ನು ಸೊನ್ನೆಯಾಗಲು ಮಾತ್ರ ಬಾಕಿ ಇದೆ ಎಂದವರು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ರೈ ಅಂಕೊತ್ತಿಮಾರು ಮತ್ತು ಅಮಳ ರಾಮಚಂದ್ರ, ಖಜಾಂಜಿ ವಲೇರಿಯನ್ ಡಯಾಸ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.