ಡಿ.4: ಶೇಖಮಲೆ ಜಾರತ್ತಾರುವಿನಲ್ಲಿ ಫ್ರೆಂಡ್ಸ್ ಟ್ರೋಫಿ-2016

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಅಮೆಚೂರು ಕಬಡ್ಡಿ ಅಸೋಸಿಯೇಶನ್ ಪುತ್ತೂರು ಇದರ ಸಹಕಾರದೊಂದಿಗೆ ಫ್ರೆಂಡ್ಸ್ ಶೇಖಮಲೆ ಇದರ ವತಿಯಿಂದ ಫ್ರೆಂಡ್ಸ್ ಟ್ರೋಫಿ-2016 ಪುರುಷರ ಮುಕ್ತ ಕಬಡ್ಡಿ ಪಂದ್ಯಾಟ ಡಿ.4ರಂದು ಶೇಖಮಲೆ ಜಾರತ್ತಾರುವಿನಲ್ಲಿ ನಡೆಯಲಿದೆ. ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣಾಧಿಕಾರಿ ಅಬ್ದುಲ್ ಖಾದರ್ ಪಂದ್ಯಾಟವನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಹಾಗೂ ನ್ಯಾಯವಾದಿ ಉದಯಶಂಕರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.

ಬಹುಮಾನವಾಗಿ ರೂ.6006ಮತ್ತು ಶಾಶ್ವತ ಫಲಕ (ಪ್ರಥಮ), ರೂ.4004ಮತ್ತು ಶಾಶ್ವತ ಫಲಕ (ದ್ವಿತೀಯ), ರೂ.2002ಮತ್ತು ಶಾಶ್ವತ ಫಲಕ (ತೃತೀಯ), ರೂ.1001 ಮತ್ತು ಶಾಶ್ವತ ಫಲಕ (ಚತುರ್ಥ) ಹಾಗೂ ಉತ್ತಮ ದಾಳಿಗಾರ, ಸವ್ಯಸಾಚಿ ಆಟಗಾರ, ಹಿಡಿತಗಾರ ಬಹುಮಾನ ನೀಡಲಾಗುತ್ತದೆ. ರೂ.400 ತಂಡದ ಪ್ರವೇಶ ಶುಲ್ಕ ಇರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.