Breaking News

ಫಿಲೋಮಿನಾ ಪದವಿ ಪೂರ್ವ ಕಾಲೇಜ್‌ನ ವಾರ್ಷಿಕೋತ್ಸವ

Puttur_Advt_NewsUnder_1
Puttur_Advt_NewsUnder_1

philomina

ಜೀವನದ ಪರೀಕ್ಷೆಯಲ್ಲಿ ಪಾಸಾಗುವ ಕೌಶಲ್ಯ ಬೆಳೆಸಿ-ಡಾ|ಭಂಡಾರಿ

* ಡಿಸ್ಟಿಂಕ್ಷನ್‌ನ ೩೨, ಪ್ರಸಕ್ತ ಸಾಲಿನ ಪ್ರತಿಭಾವಂತ ನಾಲ್ವರಿಗೆ ಗೌರವ

* ರಾಷ್ಟ್ರಮಟ್ಟದ೩, ರಾಜ್ಯಮಟ್ಟದ ೨೧ ಕ್ರೀಡಾಪ್ರತಿಭೆಗಳಿಗೆ ಗೌರವ

* ವರ್ಷದ ಉತ್ತಮ ಕ್ರೀಡಾಪಟುಗಳಾಗಿ ಸಿದ್ಧಾಂತ್ ಶೆಟ್ಟಿ, ಪ್ರೀಮಾ ಫೆರ್ನಾಂಡೀಸ್ ಆಯ್ಕೆ

*ವರ್ಷದ ಉತ್ತಮ ಎನ್‌ಸಿಸಿ ಕೆಡೆಟ್‌ಗಳಾಗಿ ಸಿದ್ಧಾಂತ್ ಶೆಟ್ಟಿ, ಮೋನಿಷಾ ಆಯ್ಕೆ

*ವರ್ಷದ ಬೆಸ್ಟ್ ಎನ್‌ಸಿಸಿ ಅಲ್‌ರೌಂಡರ್ ರಚನಾ,  ಬೆಸ್ಟ್ ನಿರ್ಗಮನ ವಿದ್ಯಾರ್ಥಿ ರಿಶೆಲ್ ಪಿಂಟೋ, ಬೆಸ್ಟ್ ಅಚೀವರ್ ದೀಕ್ಷಿತ್ ದಿವಾಕರ್ ಆಯ್ಕೆ

ಪುತ್ತೂರು: ಕೇವಲ ಪುಸ್ತಕದಲ್ಲಿನ ವಿಚಾರಗಳನ್ನು ಓದಿ ಪರೀಕ್ಷೆಯಲ್ಲಿ ಪಾಸಾದರೆ ಮಾತ್ರ ಭವಿಷ್ಯದ ಬದುಕನ್ನು ಕಂಡುಕೊಳ್ಳಲು ಸಾಧ್ಯವಿಲ್ಲ. ಸಮಾಜದಲ್ಲಿ ಆತ್ಮವಿಶ್ವಾಸದ ಬದುಕನ್ನು ಕಂಡುಕೊಳ್ಳಬೇಕಾದರೆ ಜೀವನದ ಪರೀಕ್ಷೆಯಲ್ಲಿ ಪಾಸಾಗುವ ಕೌಶಲ್ಯ ಬೆಳೆಸುವಂತಾಗಬೇಕು ಎಂದು ಮಂಗಳೂರು ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಸಂಸ್ಥೆಯ ಚೇರ್‌ಮ್ಯಾನ್ ಡಾ|ಮಂಜುನಾಥ ಭಂಡಾರಿರವರು ಕರೆ ನೀಡಿದರು.

ಅವರು ಡಿ.೧ ರಂದು ಕಾಲೇಜ್‌ನ ಬೆಳ್ಳಿ ಹಬ್ಬದ ಸಭಾಂಗಣದಲ್ಲಿ ನಡೆದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‌ನ ವಾರ್ಷಿಕೋತ್ಸವ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ವಿದ್ಯಾರ್ಥಿಯ ಶೈಕ್ಷಣಿಕ ಜೀವನದ ಸಂದರ್ಭದಲ್ಲಿ ಹೆತ್ತವರು ತಮ್ಮ ಅಂಧಕಾರ ಪ್ರೀತಿಯಿಂದ, ಮಕ್ಕಳ ಮೇಲಿನ ಅತೀವ ಮಮತೆಯಿಂದ ಕೇವಲ ಅಂಕ ಗಳಿಕೆಯತ್ತ ಮಾತ್ರ ಗಮನ ನೀಡುತ್ತಾ ವಿದ್ಯಾರ್ಥಿಗಳಲ್ಲಿ ಒತ್ತಡ ಹಾಕುತ್ತಿರುವುದು ಇತ್ತೀಚೆಗಿನ ವಿದ್ಯಮಾನದಲ್ಲಿ ಕಂಡುಬರುತ್ತಿದೆ. ಆದರೆ ಜೀವನವನ್ನು ಭವಿಷ್ಯದಲ್ಲಿ ಯಾವ ರೀತಿಯಲ್ಲಿ ಸಾಗಿಸಬಹುದಾಗಿದೆ ಮತ್ತು ಬದುಕಿಗೆ ಬೇಕಾಗಿರುವ ಪ್ರಾಥಮಿಕ ಕೌಶಲ್ಯಗಳನ್ನು ಹೇಗೆ ತುಂಬಿಸಬಹುದು ಎಂಬ ಅಲೋಚನೆಯನ್ನು ಸಹ ಹೆತ್ತವರು ಮಾಡದಿರುವುದು ಖೇದಕರವಾಗಿದೆ ಎಂದ ಅವರು ಸಮಾಜದಲ್ಲಿ ’ನಾನೊಬ್ಬನೇ’ ಅಥವಾ ’ನನ್ನ ಕುಟುಂಬ’ ಮಾತ್ರ ಸಂತೋಷದಲ್ಲಿರಬೇಕು ಎಂಬ ಸ್ವಾರ್ಥ ಕಲ್ಪನೆಯಿಂದ ಎಲ್ಲರೂ ಹೊರಬರಬೇಕು ಮತ್ತು ದೇಶದಲ್ಲಿ ಶಾಂತಿ ನೆಲೆಸಬೇಕಾದರೆ ’ನಾವೆಲ್ಲರೂ ಒಂದೇ’ ಎಂಬ ಮನೋಭಾವನೆಯೂ ಎಲ್ಲರದ್ದಾಗಬೇಕು ಎಂದು ಅವರು ಹೇಳಿದರು.

ಬದುಕಿನಲ್ಲಿ ಪ್ರಾಮಾಣಿಕತೆ ಮೈಗೂಡಿಸಿ-ವಂ|ಆಲ್ಫ್ರೆಡ್: ಅಧ್ಯಕ್ಷತೆ ವಹಿಸಿದ್ದ ಕಾಲೇಜ್‌ನ ಸಂಚಾಲಕ ವಂ|ಆಲ್ಫ್ರೆಡ್ ಜಾನ್ ಪಿಂಟೋರವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ವಿಮರ್ಶೆ ಮಾಡುವ ಗುಣವನ್ನು ಹೊಂದಿರಬೇಕು. ಸಮಾಜದಲ್ಲಿ ಜೀವಿಸುವಾಗ ತನ್ನಂತೆ ಇತರರು ಎಂಬ ದೃಷ್ಠಿಕೋನವಿಟ್ಟು ಮುಂದೆ ಸಾಗಬೇಕು. ಮನಸ್ಸಿನಲ್ಲಿ ಮತ್ತು ಅಂತಃಕರಣದಲ್ಲಿ ನಿರ್ಮಲವಾದ ಭಾವನೆಯಿರಬೇಕು, ಹೆತ್ತವರು ನೀಡುವ ಹಣದ ವಿಚಾರದಲ್ಲಿ ಹಣದ ಬಗೆಗಿನ ಪ್ರಾಮುಖ್ಯತೆಯನ್ನು ಅರಿಯಲು ಶಕ್ತರಾಗಬೇಕು ಎಂದ ಅವರು ಇದರ ಜೊತೆಗೆ ಸತ್ಯವನ್ನು ನುಡಿಯುವ ಹಾಗೂ ಶಿಸ್ತು, ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡಲ್ಲಿ ಉತ್ತಮ ರಾಷ್ಟ್ರ ಕಟ್ಟುವ ಯುವಸಮುದಾಯವಾಗಬಹುದು ಎಂದು ಅವರು ಹೇಳಿದರು.

ಜೀವನದಲ್ಲಿ ಧೈರ‍್ಯ, ಭರವಸೆಯಿದ್ದಾಗ ಮಾತ್ರ ರಾಮರಾಜ್ಯ-ಪ್ರೊ.ಲಿಯೋ ನೊರೊನ್ಹಾ: ಗೌರವ ಅತಿಥಿಯಾಗಿ ಭಾಗವಹಿಸಿದ್ದ ಫಿಲೋಮಿನಾ ಪದವಿ ಕಾಲೇಜ್‌ನ ಪ್ರಾಂಶುಪಾಲ ಪ್ರೊ.ಲಿಯೋ ನೊರೊನ್ಹಾ ರವರು ಮಾತನಾಡಿ, ಮನುಷ್ಯ ಜೀವನದಲ್ಲಿ ಕಲಿಯಬೇಕಾದ್ದು ಸಾಕಷ್ಟಿದೆ. ಸಮಾಜದಲ್ಲಿ ಕೇವಲ ಆಡಂಬರದ ಬದುಕನ್ನು ಸಾಗಿಸಿದರೆ ಮಾತ್ರ ಮನುಷ್ಯ ಪರಿಪೂರ್ಣ ವ್ಯಕ್ತಿಯಾಗೋದಿಲ್ಲ. ಬದಲಾಗಿ ಸಮಾಜದಲ್ಲಿನ ಇತರರ ಕಷ್ಟದ ನೋವಿನ ಕಾಳಜಿ ಹೊಂದಿದಾಗ, ತನ್ನ ಆದರ್ಶ ಜೀವನವೇ ಇತರರಿಗೆ ಸ್ಫೂರ್ತಿಯಾದಾಗ, ಜೀವನದಲ್ಲಿ ಧೈರ‍್ಯ, ಭರವಸೆಯಿದ್ದಾಗ ಮಾತ್ರ ರಾಮರಾಜ್ಯವಾಗಬಲ್ಲುದು ಎಂದು ಹೇಳಿದರು.

ಜೀವನದ ಪ್ರತಿಯೊಂದು ಹಂತದಲ್ಲೂ ಕೌಶಲ್ಯವನ್ನು ತೋರ್ಪಡಿಸಿ-ವಂ|ಡಾ|ಆಂಟನಿ: ಗೌರವ ಅತಿಥಿ ಫಿಲೋಮಿನಾ ಕಾಲೇಜ್‌ನ ಕ್ಯಾಂಪಸ್ ನಿರ್ದೇಶಕ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೋರವರು ಮಾತನಾಡಿ, ಹೇಗೆ ಅಂದವಾದ ಉಡುಪು ತೊಟ್ಟಾಗ ಮನುಷ್ಯ ಹೇಗೆ ಶೋಭಿಸುತ್ತಾನೆಯೋ ಹಾಗೆಯೇ ವಿದ್ಯಾರ್ಥಿಗಳು ಶೈಕ್ಷಣಿಕ ಜೀವನದ ಸಂದರ್ಭದಲ್ಲಿ ತನ್ನ ಕಲಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಮತ್ತು ಜೀವನ ಪ್ರತಿಯೊಂದು ಹಂತದಲ್ಲೂ ತನ್ನ ಕೌಶಲ್ಯವನ್ನು ತೋರ್ಪಡಿಸುವಂತಾಗಬೇಕು ಎಂದರು ವಿದ್ಯಾರ್ಥಿಗಳು ನಕಾರಾತ್ಮಕ ನಿಲುವನ್ನು ತಾಳದೆ ಸಕಾರಾತ್ಮಕ ನಿಲುವನ್ನು ತನ್ನ ಜೀವನದುದ್ದಕ್ಕೂ ಅಳವಡಿಸಿಕೊಳ್ಳುವಂತಾಗಬೇಕು ಎಂದು ಅವರು ಹೇಳಿದರು.

ಡಿಸ್ಟಿಂಕ್ಷನ್ ವಿದ್ಯಾರ್ಥಿಗಳಿಗೆ ಗೌರವ: ಕಳೆದ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಾದ ವಿರಾಜ್ ಡ್ಯಾನಿಯಲ್, ಅರುಣ್‌ಕುಮಾರ್ ಭಟ್, ಆರ್ಶಿತಾ ರೈ, ರಾಯನ್ ಮ್ಯಾಕ್ಲಿನ್ ಡಿ’ಸೋಜ, ರೂಪಶ್ರೀ, ಅನ್ಸಿರಾ ಪಿ.ಬಿ, ಸುಮ ಎಸ್, ಡ್ಯಾನಿಯಲ್ ಬೊನಿಪಾಸ್ ಪಿರೇರಾ, ಹಸೀನಾ ಬೇಗಂ, ಹರ್ಷಲ್ ಜೇಸನ್ ಡಿ’ಸೋಜ, ಮಧುರ ಪಿ.ಕೆ, ಶುಭ ಕೆ, ಅಬ್ದುಲ್ ರಹಿಮಾನ್ ನಿಹಾಲ್, ಅಶ್ವಿತ ಎಮ್.ಪಿ, ಚೈತ್ರಾ ಜಿ.ಎನ್, ಚೈತ್ರ ಪಿ, ದೇಚಮ್ಮ ಪಿ.ಎಸ್, ಎಲ್ರೋಯ್ ಡಿ’ಸೋಜ, ಫ್ರಾನ್ ಸ್ಟೀವ್ ಮಸ್ಕರೇನ್ಹಸ್, ಕೇಶವ ಶೆಣೈ, ಲವೀಶ್‌ಕುಮಾರ್, ಲಿಶಾ ಗ್ಲ್ಯಾನಿ, ಮಹಮ್ಮದ್ ಹನೀಫ್, ನಿರೀಶ್ಮಾ ಸುವರ್ಣ, ರಯಾನ, ರಂಜನ್ ನಾಯಕ್, ಸಲೀಮಾ ಮರಿಯ, ಆಯಿಷತ್ ಶಕೀರಾ, ಶರೂನ್ ಗ್ಲೆವಿನಾ, ಸುಜನಾ ಪಿ, ಸುನೇತ್ರ ಜೆ.ಎಸ್,ಆದಂ ಇಂಫಾಲ್ ಹಾಗೂ ಪ್ರಸಕ್ತ ಸಾಲಿನ ಪ್ರತಿಭಾವಂತ ವಿದ್ಯಾರ್ಥಿಗಳಾದ ಕೃತಿ ಎ.ಟಿ, ಡಿಂಪಲ್ ಮಿಶೆಲ್ ತಾವ್ರೋ, ಮಹಮ್ಮದ್ ಸಿನಾನ್, ರುತ್ವಿಕ್ ಡಿ’ಸೋಜರವರಿಗೆ ಶಾಲು ಹೊದಿಸಿ, ಹೂ ನೀಡಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕ್ರೀಡಾ ಪ್ರತಿಭೆಗಳಿಗೆ ಗೌರವ: ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಸಾಧನೆಗೈದ ಈಜುಪಟುಗಳಾದ ಸಿದ್ಧಾಂತ್ ಎಸ್.ಶೆಟ್ಟಿ, ಸುಹಾಸ್ ಪಿ.ಎಂ, ದೀಕ್ಷಿತ್ ದಿವಾಕರ್ ಮತ್ತು ರಾಜ್ಯಮಟ್ಟದಲ್ಲಿ ವಿವಿಧ ವಿಭಾಗದಲ್ಲಿ ಸ್ಪರ್ಧಿಸಿದ ಕ್ರೀಡಾ ಪ್ರತಿಭೆಗಳಾದ ಕೀರ್ತನ್ ಎಸ್.ಗೌಡ, ಸಾಗರ್ ನಂಜಪ್ಪ, ನೂತನ್ ಕೆ.ವಿ, ಅಕ್ಷಿತ್ ಕಾವೇರಪ್ಪ, ರೆಹಲ್ ತೋಮಸ್, ಜ್ಞಾನೇಶ್ವರಿ, ಮೋನಿಷ ಕೆ.ಸಿ, ಪ್ರೀಮಾ ಫೆರ್ನಾಂಡೀಸ್, ಪ್ರತೀಕ್ಷಾ ಎನ್.ಕೆ, ಹರ್ಷಿತ ಎಲ್, ಕೆ.ಜೆ ಪ್ರಥ್ವಿ, ಯಶಸ್ವಿ ಎನ್.ಆರ್(ಹಾಕಿ ವಿಭಾಗ), ಚಂದನ್ ಎಸ್.ಭಟ್, ರೋಯ್ಸ್‌ಟನ್ ರೊಡ್ರಿಗಸ್, ಶ್ರೀಲಕ್ಷ್ಮೀ (ಈಜು ವಿಭಾಗ), ಜೀವನ್ ವಿನೀತ್ ಪಾಸ್, ಶಶಾಂಕ್ ಕೆ.ಎಮ್(ಫುಟ್‌ಬಾಲ್ ವಿಭಾಗ), ನಿಧಿ ಯು.ಕುಮಾರ್(ಡಿಸ್ಕಸ್ ತ್ರೋ ವಿಭಾಗ)ರವರನ್ನು ಗೌರವಿಸಲಾಯಿತು. ಹುಡುಗರ ವಿಭಾಗದಲ್ಲಿ ಉತ್ತಮ ಕ್ರೀಡಾಪಟುವಾಗಿ ಸಿದ್ಧಾಂತ್ ಎಸ್.ಶೆಟ್ಟಿ ಮತ್ತು ಹುಡುಗಿಯರ ವಿಭಾಗದಲ್ಲಿ ಪ್ರೀಮಾ ಫೆರ್ನಾಂಡೀಸ್‌ರವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಎನ್‌ಸಿಸಿ ವಿಭಾಗದ ಸಾಧಕರಿಗೆ ಗೌರವ: ಪ್ರಸಕ್ತ ಸಾಲಿನ ಎನ್‌ಸಿಸಿ ವಿಭಾಗದಲ್ಲಿ ಅತ್ತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳಾದ ಬೆಸ್ಟ್ ಅಲ್‌ರೌಂಡರ್ ಸಾರ್ಜಂಟ್ ರಚನಾ ಎನ್.ಆರ್, ಬೆಸ್ಟ್ ಔಟ್‌ಸ್ಟ್ಯಾಂಡಿಂಗ್ ಕೆಡೆಟ್ ಆಗಿ ಸಾರ್ಜಂಟ್ ರಿಶಲ್ ಪಿಂಟೋ, ಬೆಸ್ಟ್ ಎನ್‌ಸಿಸಿ ಕೆಡೆಟ್ ಆಗಿ ಹುಡುಗರ ವಿಭಾಗದಲ್ಲಿ ಸಾರ್ಜಂಟ್ ಸಿದ್ಧಾಂತ್ ಎಸ್.ಶೆಟ್ಟಿ, ಹುಡುಗಿಯರ ವಿಭಾಗದಲ್ಲಿ ಸಾರ್ಜಂಟ್ ಮೋನಿಷಾ ಕೆ.ಸಿ, ಬೆಸ್ಟ್ ಎನ್‌ಸಿಸಿ ಅಚೀವರ್ ಆಗಿ ದೀಕ್ಷಿತ್ ದಿವಾಕರ್ ಮತ್ತು ಎನ್‌ಸಿಸಿ ಕ್ಯಾಂಪ್‌ನಲ್ಲಿ ಭಾಗವಹಿಸಿದ ಕೆಡೆಟ್‌ಗಳಾದ ಜೆಸ್ವಿನ್ ರಾಜನ್, ಜೊವಿನ್ ಜೋಸೆಫ್, ಭವಿತ್ ಕುಮಾರ್, ಶರೂನ್ ಜೋನ್ಸನ್ ಪಡಲ್ಕರ್, ಬಿ.ಎಸ್ ಕಾಂಚನ್ ಕಾವೇರಿರವರನ್ನು ಗೌರವಿಸಲಾಯಿತು.

ಬಹುಮಾನ ವಿತರಣೆ: ಈ ಸಂದರ್ಭದಲ್ಲಿ ಪಾಠ ಹಾಗೂ ಪಠ್ಯೇತರ ವಿಭಾಗದಲ್ಲಿ ಸಾಧನೆಗೈದ ಮತ್ತು ವಾರ್ಷಿಕೋತ್ಸವದ ಪ್ರಯುಕ್ತ ಏರ್ಪಡಿಸಿದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಬಹುಮಾನ ವಿತರಿಸಲಾಯಿತು.

ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯಕುಮಾರ್ ರೈ ಎಂ.ಆರ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಡಾ.ಸೂರ್ಯನಾರಾಯಣ ಕೆ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಿದ್ಧಾಂತ್ ಎಸ್ ಶೆಟ್ಟಿರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ವೇತಲ್ ಮತ್ತು ಬಳಗ ಪ್ರಾರ್ಥಿಸಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಅನುಪಮಾ ಪೈ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ದೀಪಾ ಸಿ.ಭಟ್ ವಂದಿಸಿದರು. ಪ್ರಾಂಶುಪಾಲ ವಂ|ವಿಜಯ್ ಲೋಬೋರವರು ವರದಿ ಮಂಡಿಸಿದರು. ವಿದ್ಯಾರ್ಥಿ ಕೆ.ಆರ್ ತಿಲಕ್ ಅತಿಥಿಗಳ ಪರಿಚಯ ಮಾಡಿದರು. ಉಪನ್ಯಾಸಕರಾದ ಪ್ರಶಾಂತ್ ಭಟ್, ಸ್ಟೆಲ್ಲಾ ಲೂವಿಸ್, ಅನಿಲ್ ಕುಮಾರ್, ಸಂಜಯ್ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ್ ಡಿ’ಸೋಜರವರು ವಿಜೇತರ ಹೆಸರನ್ನು ಓದಿದರು. ಶರ್ಮಾನ್ ಬ್ಯಾಪ್ಟಿಸ್ಟ್ ರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಲ್ಪಟ್ಟಿತು. ವಿದ್ಯಾರ್ಥಿ ಸಂಘದ ನಿರ್ದೇಶಕರುಗಳಾದ ಭರತ್ ಕುಮಾರ್ ಹಾಗೂ ಉಷಾ ಯಶ್ವಂತ್‌ರವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು.

ಸ್ವಂತ ನಿರ್ಧಾರ ಜೀವನದ ಭರವಸೆಯಾಗಲಿ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಹಾಕುವ ’ಒಂದು ಮತ’ ದೇಶದ ನಿರ್ಧಾರವನ್ನು ಸೂಚಿಸುತ್ತದೆ. ಹಾಗೆಯೇ ಜೀವನದಲ್ಲಿ ನಾವು ತೆಗೆದುಕೊಳ್ಳುವ ’ಸ್ವಂತ ನಿರ್ಧಾರ’ವೆಂಬುದು ಜೀವನದಲ್ಲಿ ಪಾಠವನ್ನು ಕಲಿಸುತ್ತದೆ. ಯಾವುದೇ ಹಂತದಲ್ಲಾಗಲಿ ನಾವು ಜೀವನದಲ್ಲಿ ಗೆಲುವಿನೊಂದಿಗೆ ಸೋಲುವುದನ್ನೂ ಕಲಿಯಬೇಕು. ಯಾವಾಗ ನಾವು ಸೋಲನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತೇವೆಯೋ ಆವಾಗ ಮಾತ್ರ ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಗಳನ್ನು ಹೋಗಲಾಡಿಸಲು ಸುಲಭವಾಗುತ್ತದೆ ಅಲ್ಲದೆ ಸಮಾಜದಲ್ಲಿ ಒಳ್ಳೆಯ ಮತ್ತು ಆದರ್ಶ ವ್ಯಕ್ತಿಯಾಗಿ ಬಾಳಲು ಸಾಧ್ಯ. ಎಲ್ಲರನ್ನು ಗೌರವದಿಂದ ಕಾಣುತ್ತಾ ಸ್ವಂತ ನಿರ್ಧಾರ ಜೀವನದ ಭರವಸೆಯಾಗಿ ಉಳಿಯಲಿದೆ.

-ಡಾ|ಮಂಜುನಾಥ ಭಂಡಾರಿ, ಚೇರ್‌ಮ್ಯಾನ್, ಸಹ್ಯಾದ್ರಿ ವಿದ್ಯಾಸಂಸ್ಥೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.