ಅಂತು..ಇಂತು..ಸವಣೂರು ಸಿಂಡಿಕೇಟ್ ಬ್ಯಾಂಕ್‌ಗೆ ಬಂತು 30 ಲಕ್ಷ ರೂ. 140 ಗ್ರಾಹಕರಿಗೆ 10 ಸಾವಿರದಂತೆ 14 ಲಕ್ಷ ರೂ. ವಿತರಣೆ;ಸವಣೂರಿನಲ್ಲಿ ಗ್ರಾಹಕರಿಗೆ ಫುಲ್‌ಖುಷ್

Puttur_Advt_NewsUnder_1
Puttur_Advt_NewsUnder_1

savanooruಉಮಾಪ್ರಸಾದ್ ರೈ ನಡುಬೈಲು

ಪುತ್ತೂರು: ರೂ. 500,1000ದ ನೋಟು ಚಲಾವಣೆ ಅಮಾನ್ಯಗೊಂಡು 23 ದಿನ ಕಳೆದ ಬಳಿಕ ದ. 1ರಂದು, ಸರಕಾರಿ ನೌಕರರಿಗೆ ಸಂಬಳ ದಿನವಾದ ಕಾರಣ ಬ್ಯಾಂಕ್‌ಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚು ಇದ್ದರೂ, ಸವಣೂರು ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಗ್ರಾಹಕರು ಮಧ್ಯಾಹ್ನದ ನಂತರ  ಫಲ್‌ಖುಷ್ ಆದ ಘಟನೆ ನಡೆಯಿತು.

ಬೆಳಿಗ್ಗೆ ಮಾತಿನ ಚಕಮಕಿಮಧ್ಯ ಪ್ರವೇಶಗೈದ ಮ್ಯಾನೇಜರ್:  ಸವಣೂರು ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಬೆಳಿಗ್ಗೆ 8.30ಕ್ಕೆ ಗ್ರಾಹಕರು ಸರದಿ ಸಾಲಿನಲ್ಲಿ ನಿಲ್ಲತೊಡಗಿದರು. ಸುಮಾರು 10 ಗಂಟೆಯಾಗುವ ವೇಳೆಗೆ ಗ್ರಾಹಕರ ಸಂಖ್ಯೆ 85 ದಾಟಿತು. ಆದರೆ ಬ್ಯಾಂಕಿನಲ್ಲಿ ಇದ್ದ ಹಣ 88 ಸಾವಿರ ಮಾತ್ರ, 44 ಗ್ರಾಹಕರಿಗೆ ಟೋಕನ್ ನೀಡಲಾಯಿತು. ಟೋಕನ್ ಸಿಗದ ಗ್ರಾಹಕರು ನಿರಾಶರಾದರು.  ಆಗ ಕೆಲ ಗ್ರಾಹಕರು ಈ ಬ್ಯಾಂಕಿಗೆ ಮಾತ್ರ ಕಡಿಮೆ ಹಣ ಯಾಕೆ ಬರುತ್ತದೆ, ನಮಗೆ ದಿನ 2 ಸಾವಿರ ಕೊಟ್ಟರೆ ಏನು ಮಾಡುವುದು, ದಿನ ಈ ರೀತಿ ಆದರೆ ಏನು ಗತಿ ಎಂದು ಪ್ರಶ್ನಿಸತೊಡಗಿದರು. ನಮಗೆ ಜಾಸ್ತಿ ಹಣ ಕೊಡಬೇಕು ಎಂದು ಆಕ್ರೋಶಭರಿತರಾದರು. ಕೆಲ ವ್ಯಾಪಾರಸ್ಥರು ನಮಗೆ 2 ಸಾವಿರ ಹಣ ನೀಡಿದರೆ ನಾವು ವ್ಯವಹಾರ ಮಾಡುವುದು  ಹೇಗೆ ಎಂದು ಪ್ರಶ್ನಿಸಿದರು, ಕೆಲ ಹೊತ್ತು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದರು

ಸ್ಥಳಕ್ಕೆ ಆಗಮಿಸಿದ ಪ್ರಭಾರ ಮ್ಯಾನೇಜರ್: ಆಗ ಸ್ಥಳಕ್ಕೆ ಬ್ಯಾಂಕಿನ ಪ್ರಭಾರ ಮ್ಯಾನೇಜರ್  ಲಿಂಟೋಡೊಮಿನಿಕ್ ಆಗಮಿಸಿ ಗ್ರಾಹಕರ ಸಮಸ್ಯೆಯನ್ನು ಆಲಿಸಿ, ನಿಮ್ಮ ಸಮಸ್ಯೆ ನನಗೆ ಅರ್ಥವಾಗಿದೆ ಇಂದು ಮಧ್ಯಾಹ್ನ ಹೆಚ್ಚು ಹಣ ಬರುತ್ತದೆ ಎಂದು ಹೇಳಿ, ಗ್ರಾಹಕರ ಸಹಕಾರವನ್ನು ಕೋರಿದರು, ಗ್ರಾಹಕರಾದ ನ್ಯಾಯವಾದಿ ವೆಂಕಟೇಶ್ ಭಟ್ ಕೊಯಕುಡೆರವರು ಮಾತನಾಡಿ ಗ್ರಾಹಕರು ತಾಳ್ಮೆಯಿಂದ ಇರಬೇಕು, ಈಗಾಗಲೇ ಇಲ್ಲಿನ ಸಮಸ್ಯೆಯ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ. ಸಮಸ್ಯೆ ಸರಿಯಾಗಬಹುದು ಎಂದರು.

ಮಧ್ಯಾಹ್ನ ಬಂತು 30 ಲಕ್ಷ ರೂಪಾಯಿ: ಮಧ್ಯಾಹ್ನ ಬ್ಯಾಂಕಿಗೆ ಆರ್‌ಬಿಐನಿಂದ 30 ಲಕ್ಷ ರೂಪಾಯಿ ಹಣ ಬಂತು, ಅದರಲ್ಲಿ 140 ಮಂದಿಗೆ ಗ್ರಾಹಕರಿಗೆ ತಲಾ 10 ಸಾವಿರದಂತೆ 14  ಲಕ್ಷ ರೂಪಾಯಿಯನ್ನು ವಿತರಿಸಲಾಯಿತು. ಅಂತೂ ಈ ಬೆಳವಣಿಗೆಯಿಂದ ಬ್ಯಾಂಕಿನ ಗ್ರಾಹಕರಿಗೆ ತುಂಬಾ ಸಂತೋಷವಾಯಿತು.

ಇಂದು, ನಾಳೆ, 16 ಲಕ್ಷ ರೂ. ವಿತರಣೆಲಿಂಟೋಡೊಮಿನಿಕ್

ಸವಣೂರು ಸಿಂಡಿಕೇಟ್ ಬ್ಯಾಂಕಿಗೆ ದ.1 ರಂದು 30ಲಕ್ಷ ರೂಪಾಯಿ ಹಣ ಬಂದಿದೆ, ಅದರಲ್ಲಿ 14 ಲಕ್ಷ ರೂ. ಹಣವನ್ನು 140 ಮಂದಿ ಗ್ರಾಹಕರಿಗೆ ತಲಾ 10ಸಾವಿರದಂತೆ ವಿತರಿಸಲಾಗಿದೆ.  ದ.2 ಮತ್ತು 3ರಂದು ಉಳಿದ 16 ಲಕ್ಷ ರೂಪಾಯಿ ಹಣವನ್ನು ನೀಡಲಾಗುವುದು ಎಂದು ಬ್ಯಾಂಕಿನ ಪ್ರಭಾರ ಮ್ಯಾನೇಜರ್ ಲಿಂಟೋಡೊಮಿನಿಕ್ ತಿಳಿಸಿದ್ದಾರೆ

ಬ್ಯಾಂಕ್‌ಗೆ ಹೆಚ್ಚು ಹಣ ಬಂದಿರುವುದರಿಂದ ಗ್ರಾಹಕರು ಸಂತೋಷಪಟ್ಟಿದ್ದಾರೆ, ಬ್ಯಾಂಕಿನ ಎಲ್ಲಾ ಸಿಬ್ಬಂದಿಗಳು ಉತ್ತಮ ಸೇವೆಯನ್ನು ಕೊಟ್ಟಿದ್ದಾರೆ. ಬ್ಯಾಂಕಿನ ನಿವೃತ್ತ ಮ್ಯಾನೇಜರ್ ವೆಂಕಪ್ಪ ನಾಯ್ಕ್‌ರವರು ಕೂಡ ಮಧ್ಯಾಹ್ನ ಬಳಿಕ ಬ್ಯಾಂಕ್‌ಗೆ ಬಂದು ಗ್ರಾಹಕರಿಗೆ ಸೇವೆ ನೀಡಿರುವುದು ಶ್ಲಾಘನೀಯ ಕಾರ‍್ಯವಾಗಿದೆ

ಸುರೇಶ್ ರೈ ಸೂಡಿಮುಳು-ಅಧ್ಯಕ್ಷರು

ಪುತ್ತೂರು ತಾಲೂಕು ಯುವಜನ ಒಕ್ಕೂಟ

ಬ್ಯಾಂಕಿಗೆ ಹೆಚ್ಚು ಹಣ ಬಂದಿರುವುದರಿಂದ ಸಂಜೆ4.30 ರವರೆಗೆ ಬಂದ ಎಲ್ಲಾ ಗ್ರಾಹಕರಿಗೆ ತಲಾ 10 ಸಾವಿರದಂತೆ ಹಣ ನೀಡಿದ್ದಾರೆ, ಬ್ಯಾಂಕಿನ ಎಲ್ಲಾ  ಸಿಬ್ಬಂದಿಗಳ ಸೇವೆ ಉತ್ತಮವಾಗಿದೆ.

ವೆಂಕಟೇಶ್ ಭಟ್ ಕೊಯಕುಡೆ-ನ್ಯಾಯವಾದಿ

ಬ್ಯಾಂಕ್‌ಗೆ ಇಂದು 30 ಲಕ್ಷ ರೂ. ಹಣ ಬಂದಿರುವುದು ತುಂಬಾ ಸಂತೋಷ ತಂದಿದೆ, ಬ್ಯಾಂಕಿನವರು ಮಧ್ಯಾಹ್ನ 2 ಗಂಟೆಯಿಂದಲೇ ಗ್ರಾಹಕರಿಗೆ ಹಣ ಕೊಡಲು ಪ್ರಾರಂಭಿಸಿದ್ದಾರೆ, ಈ ರೀತಿಯಲ್ಲಿ ಹೆಚ್ಚು ಹಣ ಸವಣೂರು ಬ್ಯಾಂಕಿಗೆ ಬರಬೇಕು

ಬಿ.ಎಂ.ಮಹಮ್ಮದ್ ಕಾಯರ್ಗ– ಉದ್ಯಮಿ

ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಬ್ಯಾಂಕ್‌ಗೆ ಹೆಚ್ಚು ಹಣ ಬರಬೇಕುಗ್ರಾಹಕರಿಗೆ ಖುಷಿಯಾಗಿದೆ ಉತ್ತಮ ರೀತಿಯಲ್ಲಿ ಸವಣೂರು ಸಿಂಡಿಕೇಟ್ ಬ್ಯಾಂಕ್ ನಡೆಯಲಿ

ಕೇಶವಚಂದ್ರ ಸರ್ವೆ– ಪ್ರಗತಿಪರ ಕೃಷಿಕರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.