ನೋಟು ರದ್ದು  ಪರಿಣಾಮ:  ಲೇಖನ, ಅಭಿಪ್ರಾಯಗಳು-ಸಂವಾದಕ್ಕೆ ಆಹ್ವಾನ

Puttur_Advt_NewsUnder_1
Puttur_Advt_NewsUnder_1

abhiprayaನಮ್ಮ ದೇಶದಲ್ಲಿ ಕಾಳಧನವನ್ನು ಮರೆಮಾಚಲು ಸುಗಮವಾದ, ಸುರಕ್ಷಿತವಾದ ತಾಣ ಎಂದರೆ ಅದು ರಾಜಕೀಯ. ಇಲ್ಲಿ ಚಲಾವಣೆಯಾಗುವುದು ಕಪ್ಪು ಹಣದ ಪ್ರಭಾವ. ಈ ನೋಟ್ ಬ್ಯಾನ್‌ನಿಂದ ಹೆಚ್ಚು ತಲೆಬಿಸಿಯಾದದ್ದು ಮಾತ್ರ ರಾಜಕೀಯ ವ್ಯಕ್ತಿಗಳದ್ದು. ಅವರ ದೃಷ್ಟಿ ಬಿದ್ದದ್ದು ಮಾತ್ರ ಬಿಸಿಲಿನಲ್ಲಿ ನಿಂತ ಬಡ ವ್ಯಕ್ತಿಗಳ ಮೇಲೆ. ಹಿಂದೆ ಇದೇ ವ್ಯಕ್ತಿಗಳು ಅರ್ಜಿ ಹಿಡಿದು ಜನತಾದರ್ಶನದಲ್ಲಿ ನಿಂತದ್ದು ಕಾಣಿಸಲಿಲ್ಲ. ಆಗ ಬಂದ ಬೆವರಿನ ವಾಸನೆ ಇವರ ಮೂಗಿಗೆ ಬಡಿದದ್ದು ಮಾತ್ರ ಈಗ. ಮೋದಿಜಿಯವರ ಈ ನಡೆಗೆ ಚೀನಾದವರೆ ಭೇಷ್ ಎನ್ನಬೇಕಾದರೆ, ನಮ್ಮವರ ನಮ್ಮತನ, ನಮ್ಮ ದೇಶ ಎನ್ನುವುದು ಎಲ್ಲಿ ಹೋಯಿತು ಸ್ವಾಮಿ?

ಮೋದಿಜಿಯವರ ನೋಟು ಬ್ಯಾನ್ ನಿರ್ಧಾರ ಮಾತ್ರ ಎಂಟನೆಯದ್ದು. ಸಾಧಾರಣ ವ್ಯಕ್ತಿತ್ವದ ಪ್ರಧಾನಿಗೆ ಈ ರೀತಿಯ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ನಮಗೆ ಇವರ ನಿರ್ಧಾರ ದಿಢೀರ್ ಆಗಿ ಕಂಡುಬಂದರೂ ಇದರ ಹಿಂದೆ ಇದ್ದಿರಬಹುದಾದ ಸಾಧಕ-ಬಾಧಕಗಳನ್ನು ನಾವು ಊಹಿಸಬಹುದು. ಎಲ್ಲಿ ಇಲ್ಲ ಸ್ವಾಮಿ. ಮಾಧ್ಯಮಗಳು, ಪತ್ರಿಕೋದ್ಯಮಗಳು ಅದಕ್ಕಿಂತ ವೇಗವಾಗಿ ಈ ರೀತಿಯಾಗಿ ಜನರ ಸ್ಪಂದನೆ ದೊರೆತದ್ದು ಹೇಗೆ? ಬಡವರಿಗೆ, ಕೃಷಿಕರಿಗೆ, ನಮ್ಮಂತ ಸಣ್ಣ ವ್ಯಾಪಾರಸ್ಥರಿಗೆ ಸ್ವಲ್ಪ ಮಟ್ಟಿನ ಹೊಡೆತ ಬಿದ್ದದ್ದು ಸಹಜ. ನಮಗೆ ಸಹನೆಯಿದೆ. ಮುಂದಿನ ಭವಿಷ್ಯ ಚೆನ್ನಾಗಿರಬಹುದು ಎಂಬ ಒಂದು ಸಣ್ಣ ಆಶಾಕಿರಣವಿದೆ. ಇಲ್ಲಿ ಇನ್ನೊಂದು ಪ್ರಶ್ನೆ ಎಂದರೆ  ಶ್ರೀಮಂತರು ಬ್ಯಾಂಕಿನಲ್ಲಿ ಕ್ಯೂ ನಿಂತಿಲ್ಲ ಎಂಬುದು. ಅದೇ ಸ್ವಾಮಿ ಬಡವರಿಗೂ, ಶ್ರೀಮಂತರಿಗೂ ಇರುವ ವ್ಯತ್ಯಾಸ. ಅವರು ನೋಟಿನ ಕಟ್ಟು ಹಿಡಿದುಕೊಂಡು ವ್ಯವಹಾರ ಮಾಡಲ್ಲ. ಅವರ ಬಳಿ ಡೆಬಿಟ್/ಕ್ರೆಡಿಟ್ ಕಾರ್ಡ್ ಇದೆ. ಎಲ್ಲಾ ವ್ಯವಹಾರಕ್ಕೂ ಕಾರ್ಡ್ ಬಳಸುವಾಗ ಕ್ಯೂ ಯಾಕೆ ನಿಲ್ತಾರೆ ಸ್ವಾಮಿ? ತಪ್ಪು ಮಾಹಿತಿಯಿಂದಾಗಿ ಜನಸಾಮಾನ್ಯರ ಜೀವನದಲ್ಲಿ ಆಟವಾಡುವ ಇವರು ಯಾವ ಬಡವರ ರಕ್ಷಕರು? ಶ್ರೀಸಾಮಾನ್ಯನ ಹೆಸರು ಹೇಳಿ ತಮ್ಮ ರಾಜಕೀಯ ನೆಲೆಯನ್ನು ಭದ್ರಗೊಳಿಸಲು ಪಣ ತೊಟ್ಟಿರುವ ಕೇಜ್ರಿವಾಲ್/ಮಮತಾ ಬ್ಯಾನರ್ಜಿಯವರೂ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವ ಆಶ್ವಾಸನೆ ನೀಡಿಯೇ ಅಧಿಕಾರಕ್ಕೆ ಬಂದವರು. ಆದರೆ ಜನಸಾಮಾನ್ಯರು ಮಾತ್ರ ಇದ್ಯಾವುದರ ಪರಿವೆಯೂ ಇಲ್ಲದೆ ತಮ್ಮ ಸಮಸ್ಯೆಗಳಿಗೆ ತಾವೇ ಪರಿಹಾರ ಹುಡುಕಿಕೊಂಡು ಜೀವನವನ್ನು ತೂಗಿಸಿಕೊಂಡು ಹೋಗುತ್ತಾರೆ. ಈ ಸಮಸ್ಯೆ ಅಲ್ಪವಾದಿಯದ್ದು. ಇದು ಸರಿಹೋಗುವ ಕಾಯಿಲೆ. ಮಾರುಕಟ್ಟೆಗೆ ಹೆಚ್ಚಿನ ಹಣಕಾಸಿನ ಹರಿವು ಹೆಚ್ಚಿದಂತೆ ಸಮಸ್ಯೆ ಪರಿಹಾರವಾಗುತ್ತದೆ. ವಿರೋಧಿಗಳಿಗೆ ಮೋದಿಜಿಯವರ ಸೂಟು, ಬೂಟು ಮಾತ್ರ ಕಾಣುತ್ತದೆ. ಅವರ ಹೃದಯದಲ್ಲಿ ಭಾರತ ಬೆಳಗುವ ಬೆಳಕು ಕಾಣುವುದಿಲ್ಲ. ಇದು ದೇಶದ ಸಮಸ್ಯೆ. ಬಂದ್ ಎಂಬ ಮಹಾಮಾರಿಯಿಂದ ಸಮಸ್ಯೆ ಪರಿಹಾರ ಆಗುತ್ತದೆ ಎಂದಾದರೆ ಇಷ್ಟು ಸಮಯ ಯಾಕೆ ಕಾಯೋದು ಸ್ವಾಮಿ. ತಿಂಗಳು ಕಾಲ ಬಂದ್ ಮಾಡಿ ಭಾರತವನ್ನು ಪ್ರಕಾಶಿಸಿ ಕೋಟಿ ಕೋಟಿ ಖರ್ಚು ಮಾಡಿ ಅಧಿವೇಶನವನ್ನು ನುಂಗಿ ನೀರು ಕುಡಿಯುವ ಭ್ರಷ್ಟ ರಾಜಕೀಯದಿಂದ ಜನಸಾಮಾನ್ಯ ಏನನ್ನು ನಿರೀಕ್ಷೆ ಮಾಡಬಹುದು. ಅನ್ಯ ರಾಷ್ಟ್ರದ ಗಮನಸೆಳೆಯುತ್ತಿರುವ ಭಾರತದ ನಡೆಯನ್ನು ನಾವು ಸ್ವಾಗತಿಸೋಣ. ನಾವು ನೀವೂ ಜೈಕಾರ ಹಾಕಿ ಹೇಳಬೇಕು. ಮೋದಿಜಿ ಯೂ ಆರ್ ಗ್ರೇಟ್…

ಪ್ರವೀಣ್ ರೈ ಬರೆ, ರೆಂಜ-ಬೆಟ್ಟಂಪಾಡಿ

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.