Breaking News

ರಾಜ್ಯ ಮಟ್ಟದ 24ನೇ ಮಕ್ಕಳ ವಿಜ್ಞಾನ ಸಮಾವೇಶ- ಸಹಾಯಕ ಕಮೀಷನರ್‌ರವರಿಂದ ಮಾರ್ಗದರ್ಶನ ಸಭೆ 

Puttur_Advt_NewsUnder_1
Puttur_Advt_NewsUnder_1

img_20161202_123422 img_20161202_123503 img_20161202_121607

ಪುತ್ತೂರು: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ದ.ಕ ಜಿಲ್ಲಾ ಸಮಿತಿಯಿಂದ ದ.3 ರಿಂದ 5ರ ತನಕ ಸುದಾನ ವಸತಿಯುತ ಶಾಲೆಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ 24ನೇ ಮಕ್ಕಳ ವಿಜ್ಞಾನ ಸಮಾವೇಶದ ಅಂತಿಮ ಪೂರ್ವಭಾವಿ ಮಾರ್ಗದರ್ಶನ ಸಭೆ ದ.2ರಂದು ಸುದಾನ ವಸತಿಯುತ ಶಾಲೆಯ ಎಡ್ವರ್ಡ್ ಹಾಲ್‌ನಲ್ಲಿ ನಡೆಯಿತು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಬೆಂಗಳೂರು, ದ.ಕ.ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ದ.ಕ.ಜಿಲ್ಲಾಡಳಿತ, ಜಿ.ಪಂ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಸಹಯೋಗದಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಹಕಾರದೊಂದಿಗೆ ನಡೆಯುವ ಈ ಕಾರ‍್ಯಕ್ರಮದ ಅಂತಿಮವಾಗಿ ನಡೆದ ಸಿದ್ಧತೆಯ ಕುರಿತು ಸಹಾಯಕ ಕಮೀಷನರ್‌ರವರು ಕಾರ್ಯಕ್ರಮಕ್ಕಾಗಿ ಸಿದ್ದವಾಗಿರುವ 15 ಸಮಿತಿಗಳಿಂದ ವಿವರಣೆ ಪಡೆದರು. ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್‌ರರವರ ಪ್ರಸ್ತಾವಿಕವಾಗಿ ಮಾತನಾಡಿದರು. ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಹೇಮನಾಥ ಶೆಟ್ಟಿ ಕಾವು, ಪ್ರಾಂಶುಪಾಲ ಮನೋಹರ್ ರೈ,  ಕರ್ನಾಟಕ ರಾಜ್ಯವಿಜ್ಞಾನ ಪರಿಷತ್‌ನ ಕುದ್ದಾರ್ ಬಾಗಲಕೋಟೆ, ಸುದಾನ ವಸತಿಯುತ ಶಾಲೆಯ ಸಂಚಾಲಕ ರೇ ವಿಜಯ ಹಾರ್ವಿನ್, ಪ್ರಾಂಶುಪಾಲೆ ಶೋಭ ನಾಗರಾಜ್, ಪ್ರೊ. ಬಿ.ಜೆ.ಸುವರ್ಣ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಜಿಲ್ಲಾ ಸಮಿತಿ ಪ್ರಧಾನ ಕಾರ‍್ಯದರ್ಶಿ ಕರುಣಾಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾಧ್ಯಕ್ಷ ಕಡಮಜಲು ಸುಭಾಶ್ ರೈ ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.