Breaking News

ಡಿ.3ರಿಂದ ಸುರುಳಿ ಶ್ರೀ ಬಾಲಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ  ಚೌತಿ, ಪಂಚಮಿ, ಷಷ್ಠಿ ಉತ್ಸವ

Puttur_Advt_NewsUnder_1
Puttur_Advt_NewsUnder_1

ಅಲಂಕಾರು : ಸುರುಳಿ ಶ್ರೀ ಬಾಲಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ  ಇಂದಿನಿಂದ ಶನಿವಾರ ಬೆಳಿಗ್ಗೆ ಚೌತಿಯಂದು   ಕ್ಷೀರಾಭಿಷೇಕ , ಪಂಚಾಮೃತಾಭಿಷೇಕ, ಗಣಹವನ ಮಹಾಪೂಜೆ, ಅನ್ನಸಂತರ್ಪಣೆಯನ್ನು ಬೆಂಗಳೂರಿನ  ಉದ್ಯಮಿ ರತನ್ ರೈ ಮತ್ತು ಪ್ರೀತಾ ರೈ ಯಶಸ್ ರೈಯವರ ಸೇವಾರ್ಥವಾಗಿ ನಡೆಯಲಿದೆ, ರವಿವಾರ ಪಂಚಮಿಯಂದು  ಬೆಳಿಗ್ಗೆ  ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ಹೂವಿನ ಪೂಜೆ, ಸಹಸ್ರನಾಮಾರ್ಚನೆ, ಮಹಾಪೂಜೆ, ಅನ್ನಸಂತರ್ಪಣೆ  ನಯನ ಮತ್ತು ವಿಠಲ ರೈ ಮತ್ತು ಮಕ್ಕಳು  ಶ್ರೀ ದುರ್ಗಾ ನಿಲಯ  ಪೊಯ್ಯೊಲೆ  ಕೆಯ್ಯೂರು ಇವರಿಂದ ಸೇವಾರ್ಥವಾಗಿ ನಡೆಯಲಿದೆ. ರಾತ್ರಿ  ರಂಗಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಸೋಮವಾರ ಬೆಳಿಗ್ಗೆ   ಷಷ್ಠಿಯಂದು ನವಕಲಶಾಭಿಷೇಕ, ಪಂಚಾಮೃತಾಭಿಷೇಕ, ಮಹಾಪೂಜೆ, ಬ್ರಾಹ್ಮಣ ಸುಹಾಸಿನಿ ಆರಾಧನೆ, ಅನ್ನಸಂತರ್ಪಣೆ ಮುದಲೆಮಾರು  ಮತ್ತು ಅಂಜಾರುಬೇಡು ಕುಟುಂಬಸ್ಥರಿಂದ ಕಾರ್ಯಕ್ರಮ  ನಡೆಯಲಿದೆ ಎಂದು ಅನುವಂಶಿಕ  ಮೊಕ್ತೇಸರ ಮುದಲೆಮಾರು  ರಾಮಮೋಹನ ರೈ ಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.