ಹಳೆನೇರೆಂಕಿ: ಶಾಲಾ ಪ್ರಭಾರ ಮುಖ್ಯ ಶಿಕ್ಷಕಿಯಿಂದ ಅವ್ಯವಹಾರ ಆರೋಪ ಶಿಕ್ಷಣ ಸಚಿವ, ಡಿಡಿಪಿಐಗೆ ದೂರು-ತನಿಖೆಗೆ ಆಗ್ರಹ

Puttur_Advt_NewsUnder_1
Puttur_Advt_NewsUnder_1

 

* ಕ್ರೀಡಾಕೂಟದಲ್ಲಿ ಅಕ್ರಮವಾಗಿ ಸೇರ್ಪಡೆ,   ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ

*ಮುಖ್ಯ ಶಿಕ್ಷಕರ ಭರ್ತಿ, ನಿಯೋಜನೆ ರದ್ಧತಿಗೆ ಆಗ್ರಹ

* ಅತಿಥಿ ಶಿಕ್ಷಕರ ನೇಮಕಾತಿಯಲ್ಲೂ ಅಕ್ರಮ

* ಅವ್ಯವಹಾರ ನಡೆಸಿಲ್ಲ, ಸುಳ್ಳು ಆಪಾದನೆ-ಶಶಿಕಲಾ

ಉಪ್ಪಿನಂಗಡಿ: ಹಳೇನೇರೆಂಕಿ ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಸರ್ವಾಧಿಕಾರಿಯಾಗಿ ವರ್ತಿಸುತ್ತಿದ್ದು, ಶಾಲೆಯ ಆರ್ಥಿಕ ವ್ಯವಸ್ಥೆಯಲ್ಲಿ ಅವ್ಯವಹಾರ ಎಸಗುತ್ತಿದ್ದು, ಕ್ರೀಡಾಕೂಟದಲ್ಲಿ ಮಕ್ಕಳನ್ನು ಅಕ್ರಮವಾಗಿ ಸೇರ್ಪಡೆಗೊಳಿಸುವುದು, ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ಎಸಗುವುದು ಮೊದಲಾದ ರೀತಿಯಲ್ಲಿ ಅವ್ಯವಹಾರ ನಡೆಸುತ್ತಿದ್ದಾರೆ ಎಂದು ಶಾಲಾ ಮೇಲುಸ್ತುವಾರಿ ಸಮಿತಿ ಮಾಜಿ ಅಧ್ಯಕ್ಷ, ಪೋಷಕ ಗಣೇಶ್ ಹಿರಿಂಜರವರು ರಾಜ್ಯ ಸರ್ಕಾರದ ಪ್ರಾಥಮಿಕ ಶಿಕ್ಷಣ ಸಚಿವರು ಮತ್ತು ದ.ಕ. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ದೂರು ನೀಡಿದ್ದಾರೆ.

ಶಾಲೆಯ ಆರ್ಥಿಕ ವ್ಯವಸ್ಥೆ ನಿರ್ವಹಣೆ ಸಲುವಾಗಿ ರಾಮಕುಂಜದಲ್ಲಿರುವ ಇಂಡಿಯನ್ ಓವರ್‌ಸಿಸ್ ಬ್ಯಾಂಕ್‌ನಲ್ಲಿ ಖಾತೆ ಇರುತ್ತದೆ, ಆದರೆ ಶಾಲೆ ಅಭಿವೃದ್ಧಿ ಸಲುವಾಗಿ ಬರುವ ದೇಣಿಗೆ ಮೊದಲಾದ ಹಣವನ್ನು ಪ್ರಭಾರ ಮುಖ್ಯ ಶಿಕ್ಷಕಿ ಬ್ಯಾಂಕ್ ಖಾತೆಗೆ ಜಮೆ ಮಾಡದೆ ತನ್ನ ವಶ ಇರಿಸಿಕೊಂಡು ತನಗೆ ಬೇಕಾದ ರೀತಿಯಲ್ಲಿ ವ್ಯವಹರಿಸುತ್ತಾ ಅವ್ಯವಹಾರ ಎಸಗುತ್ತಿದ್ದಾರೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ.

 ಕ್ರೀಡಾಕೂಟದಲ್ಲಿ ಅಕ್ರಮವಾಗಿ ಸೇರ್ಪಡೆ, ವಂಚಿತರಾದ ಪ್ರತಿಭಾವಂತ ವಿದ್ಯಾರ್ಥಿಗಳು: ಈಚೆಗೆ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕಿರಿಯ ಮಕ್ಕಳ ಕೂಟದಲ್ಲಿ ಹಿರಿಯ ತರಗತಿಯ ಮಕ್ಕಳನ್ನು ಸೇರ್ಪಡೆಗೊಳಿಸಿದ್ದು, ಕ್ರೀಡಾಕೂಟ ನಡೆಯುತ್ತಿದ್ದಾಗ ಬಹಿರಂಗಗೊಂಡು ಆಕ್ಷೇಪ ವ್ಯಕ್ತವಾಗಿತ್ತು. ಹೀಗಾಗಿ ಶಾಲಾ ತಂಡ ಸ್ಪರ್ಧೆಯಿಂದ ವಂಚಿತವಾಗಿದೆ ಮತ್ತು ತಾಲೂಕು ಮಟ್ಟದ ಸ್ಪರ್ಧೆಗೆ ಅವಕಾಶ ತಪ್ಪುವಂತಾಗಿದೆ. ಶಿಕ್ಷಕಿಯ ಈ ಧೋರಣೆಯಿಂದಾಗಿ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟದ ಸ್ಪರ್ಧೆಯಿಂದ ವಂಚಿತರಾಗುವಂತಾಗಿದೆ, ಈ ರೀತಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ ಎಸಗಲಾಗಿದೆ ಎಂದೂ ದೂರಿನಲ್ಲಿ ಆಪಾದಿಸಲಾಗಿದೆ.

ಶಾಲೆಯಲ್ಲಿ ಮುಖ್ಯ ಶಿಕ್ಷಕರ ಹುದ್ದೆ ಖಾಲಿ ಇದ್ದು, ಇದನ್ನು ಭರ್ತಿ ಮಾಡಬೇಕಾಗಿದೆ ಮತ್ತು ಇಲ್ಲಿಂದ ಬೇರೆ ಶಾಲೆಗೆ ನಿಯೋಜನೆ ಹೊಂದಿರುವ ಶಿಕ್ಷಕರನ್ನು ಇಲ್ಲಿಗೆ ಮರು ನಿಯೋಜನೆ ಮಾಡಬೇಕು. ಇಲ್ಲಿ ಖಾಲಿ ಇರುವ ಹುದ್ದೆಯಲ್ಲಿ ಪ್ರಭಾರ ವಹಿಸಿರುವ ಮುಖ್ಯ ಶಿಕ್ಷಕಿ ಸರ್ವಾಧಿಕಾರಿ ಧೋರಣೆಯಿಂದ ಇದ್ದು, ಸಮಸ್ಯೆ ಬಗೆಹರಿಸುವ ಸಲುವಾಗಿ ಸಭೆ ಕರೆಯಲು ಸೂಚಿಸಿದ ಅಧ್ಯಕ್ಷರನ್ನು ಕಡೆಗಣಿಸಿ, ಶಾಲೆಯ ಪೋಷಕರಲ್ಲದ ವ್ಯಕ್ತಿಯ ಮೂಲಕ ಶಾಲಾಭಿವೃದ್ಧಿ ಸಮಿತಿ ಸಭೆ ಕರೆದು ತನಗೆ ಬೇಕಾದ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಅದಾಗ್ಯೂ ಅತಿಥಿ ಶಿಕ್ಷಕರ ನೇಮಕಾತಿಯಲ್ಲಿಯೂ ತನಗೆ ಬೇಕಾದ ರೀತಿಯಲ್ಲಿ ವ್ಯವಹರಿಸಿದ್ದಾರೆ ಎಂದು ಆಪಾದಿಸಲಾಗಿದೆ.

93 ವರ್ಷ ಇತಿಹಾಸ ಹೊಂದಿರುವ ಈ ಶಾಲೆ ಶತಮಾನದ ಹೊಸ್ತಿಲಲ್ಲಿ ಇದ್ದು, ಶಾಲೆ ಈ ಹಿಂದಿನಿಂದಲೂ ತಾಲ್ಲೂಕು ಮತ್ತು ಜಿಲ್ಲೆಯಲ್ಲಿ ತನ್ನದೇ ಆದ ಛಾಪು ಉಳಿಸಿಕೊಂಡು ಒಳ್ಳೆಯ ಹೆಸರು ಪಡೆದಿರುತ್ತದೆ. ಆದರೆ ಇದೀಗ ಪ್ರಭಾರ ಮುಖ್ಯ ಶಿಕ್ಷಕಿಯ ಸರ್ವಾಧಿಕಾರಿ ಧೋರಣೆಯಿಂದಾಗಿ ಶಾಲೆ ಬೇರೆ ಬೇರೆ ಅಕ್ರಮ, ಅವ್ಯವಹಾರದ ಚಟುವಟಿಕೆಯಿಂದಾಗಿ ಅವನತಿಗೆ ತಲುಪುತ್ತಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕ ಹಿತದೃಷ್ಠಿಯಿಂದ ಇಲ್ಲಿನ ಅವ್ಯವಸ್ಥೆ, ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಸಿ ಶಾಲೆಯನ್ನು ಉತ್ತಮ ರೀತಿಯಲ್ಲಿ ಇರುವಂತೆ ಅಗತ್ಯ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ.

ಅವ್ಯವಹಾರ ನಡೆಸಿಲ್ಲ, ಸುಳ್ಳು ಆಪಾದನೆ-ಶಶಿಕಲಾ

ಶಾಲೆಯ ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳು ಇದೆ, ಯಾವುದೇ ರೀತಿಯ ಅವ್ಯವಹಾರ ನಡೆಸಿಲ್ಲ, ಇದೆಲ್ಲ ಸುಳ್ಳು ಆಪಾದನೆ ಆಗಿರುತ್ತದೆ ಮತ್ತು ನಾನು ಯಾವತ್ತೂ ಸರ್ವಾಧಿಕಾರಿಯಾಗಿ ವರ್ತಿಸುತ್ತಿಲ್ಲ ಎಂದು ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಶಶಿಕಲಾ ಪ್ರತಿಕ್ರಿಯಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.