ಪುರುಷರಕಟ್ಟೆ: ಪರವಾನಿಗೆ ರಹಿತವಾಗಿ ಲಾರಿಯಲ್ಲಿ ಮರದ ದಿಮ್ಮಿಗಳ ಸಾಗಾಟ-ಆರೋಪಿ ಬಂಧನ

Puttur_Advt_NewsUnder_1
Puttur_Advt_NewsUnder_1

 

purusharakatteಪುತ್ತೂರು: ಪರವಾನಿಗೆ ರಹಿತವಾಗಿ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿದ್ದ ಲಾರಿಯನ್ನು ತಪಾಸಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿರುವ ಘಟನೆ ನರಿಮೊಗರು ಸಮೀಪ ನಡೆದಿದೆ.

ನರಿಮೊಗರು ಗ್ರಾಮದ ಪುರುಷರಕಟ್ಟೆ ಸಮೀಪ ದ.2ರಂದು ಬೆಳಿಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್‌ರವರ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಕೋಡಿಂಬಾಳದಿಂದ ಬಂಟ್ವಾಳಕ್ಕೆ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಸ್ವರಾಜ್ ಮಜ್ದ ಲಾರಿ (ಕೆ.ಎ. 12 3232)ನ್ನು ತಪಾಸಣೆ ನಡೆಸಿದ ವೇಳೆ ಲಾರಿಯಲ್ಲಿ ಪರವಾನಿಗೆ ರಹಿತವಾಗಿ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು ಆರೋಪಿ ಚಾಲಕ, ಬಂಟ್ವಾಳ ಕಜೆಕ್ಕಾರು ಪಾಂಡವರಕಲ್ಲು ನಿವಾಸಿ ಸಾಬುಲ್ಲ(32ವ)ರವರನ್ನು ಬಂಧಿಸಲಾಗಿದೆ. ಲಾರಿಯಲ್ಲಿದ್ದ 13 ಮರದ ದಿಮ್ಮಿಯ ಪೈಕಿ ೪ ಚಿರ್ವೆ, 8ಹೆಬ್ಬಲಸುವಿನ ಮರದ ದಿಮ್ಮಿಗಳನ್ನು ಹಾಗೂ ಲಾರಿಯನ್ನು ವಶಕ್ಕೆ ಪಡೆದು ಕೊಳ್ಳಲಾಗಿದೆ. ಲಾರಿಯ ಮೌಲ್ಯ ರೂ. 85 ಸಾವಿರವಾಗಿದ್ದು, ಮರದ ಮೌಲ್ಯ ರೂ.80ಸಾವಿರ ಆಗಿದೆ. ಕಾರ್ಯಾಚರಣೆಯಲ್ಲಿ ಎ.ಎಸ್.ಐ ಲೋಕನಾಥ್, ಕಾನ್‌ಸ್ಟೇಬಲ್‌ಗಳಾದ ಹರೀಶ್, ಲಿಂಗಪ್ಪ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.