ದ.ಕ.ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಡಾ.ಎಂ.ಆರ್. ರವಿ ಅಧಿಕಾರ ಸ್ವೀಕಾರ

Puttur_Advt_NewsUnder_1
Puttur_Advt_NewsUnder_1

raviಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ನೂತನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕೆಎಎಸ್ ಅಧಿಕಾರಿ ಡಾ. ಎಂ. ಆರ್. ರವಿಯವರು ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದ ಶ್ರೀವಿದ್ಯಾರವರಿಂದ ತೆರವಾಗಿರುವ ಸ್ಥಾನಕ್ಕೆ ಆಗಮಿಸಿರುವ ಪತ್ರಕರ್ತರೂ, ಸಾಹಿತಿಯೂ ಆಗಿರುವ ಡಾ. ಎಂ.ಆರ್. ರವಿಯವರು ದ.ಕ. ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ್‌ರವರಿಂದ ಅಧಿಕಾರ ಸ್ವೀಕರಿಸಿದ್ದಾರೆ.

ಮೈಸೂರಿನ ಲಲಿತ್‌ಮಹಲ್ ನಗರದ ‘ಬೆಳಕು’ ನಿವಾಸಿಯಾಗಿದ್ದು ಕಣ್ಣಿನ ಶಸ್ತ್ರ ಚಿಕಿತ್ಸಕರಾಗಿರುವ ಎಂ.ಆರ್. ರಾಜರತ್ನಂ ಮತ್ತು ಯಶೋಧಮ್ಮ ದಂಪತಿಯ ಪುತ್ರರಾಗಿರುವ ಎಂ.ಆರ್.ರವಿಯವರು 1987ರಲ್ಲಿ ಮೈಸೂರು ಮಹಾರಾಜ ಕಾಲೇಜ್‌ನಲ್ಲಿ ಬಿ.ಎ. ಪದವಿಯನ್ನು ೮ನೇ ರ‍್ಯಾಂಕ್‌ನೊಂದಿಗೆ ಪಡೆದಿದ್ದು 1989ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ(ಇತಿಹಾಸ)ಪದವಿಯನ್ನು ಪ್ರಥಮ ರ‍್ಯಾಂಕ್‌ನೊಂದಿಗೆ ಪೂರೈಸಿದ್ದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ 1997ರಲ್ಲಿ ಇಂಗ್ಲೀಷ್ ಎಂ.ಎ ಪದವಿ ಪಡೆದ ಇವರು 1990ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಪದವಿ ಪಡೆದಿದ್ದಾರೆ. 2010ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇತಿಹಾಸ ವಿಭಾಗದ ಪಿಎಚ್‌ಡಿ ಪದವಿ ಪಡೆದಿರುವ ಡಾ.ಎಂ.ಆರ್.ರವಿಯವರು ೧೯೮೮ರಿಂದ ೧೯೯೨ರವರೆಗೆ ಮೈಸೂರಿನ ಇಂಗ್ಲೀಷ್ ದಿನಪತ್ರಿಕೆ ಸ್ಟಾರ್ ಆಫ್ ಮೈಸೂರಿನಲ್ಲಿ ವರದಿಗಾರನಾಗಿ, ೧೯೯೨ರಿಂದ ೨೦೦೧ರವರೆಗೆ ಚಿಂತಾಮಣಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೈಲಹೊಂಗಲ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಚಾಮರಾಜನಗರ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಇತಿಹಾಸ ವಿಭಾಗದ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ೨೦೦೧-೦೬ರಿಂದ ಮೈಸೂರಿನ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ, ೨೦೦೭ರಿಂದ ೨೦೧೦ರವರೆಗೆ ಹುಣಸೂರು, ಕಾರವಾರ ಮತ್ತು ಮಡಿಕೇರಿ ಉಪವಿಭಾಗದ ಸಹಾಯಕ ಕಮೀಷನರ್ ಆಗಿ, ರಾಜ್ಯ ಉನ್ನತ ಶಿಕ್ಷಣ ಸಚಿವರ ಆಪ್ತ ಕಾರ್ಯದರ್ಶಿಯಾಗಿ, ೨೦೧೧ರಿಂದ ೨೦೧೨ರವರೆಗೆ ಕೊಡಗು ಮಡಿಕೇರಿಯಲ್ಲಿ ಹಿರಿಯ ಸಹಾಯಕ ಕಮೀಷನರ್ ಆಗಿ, ೨೦೧೨ರಿಂದ ೧೩ರವರೆಗೆ ಮೈಸೂರು ಸಿಟಿ ಕಾರ್ಪೋರೇಷನ್‌ನ ಕಮೀಷನರ್ ಆಗಿ, ೨೦೧೩ರಲ್ಲಿ ಶಿವಮೊಗ್ಗ ಸಿಎಂಸಿ ಕಮೀಷನರ್ ಆಗಿ, ಬೆಳಗಾಮ್‌ನ ಅಪರ ಜಿಲ್ಲಾಧಿಕಾರಿಯಾಗಿ, ೨೦೧೩ರಿಂದ ೧೬ರ ಜೂನ್ ೨೩ರವರೆಗೆ ಮೈಸೂರಿನ ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾಗಿ ಮತ್ತು ೨೦೧೬ರ ಜೂನ್ ೨೭ರಿಂದ ನವೆಂಬರ್ ೩೦ರವರೆಗೆ ಬೆಂಗಳೂರಿನ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಜನರಲ್ ಮೆನೇಜರ್ ಆಗಿ ಕಾರ್ಯ ನಿರ್ವಹಿಸಿದ ಅನುಭವವುಳ್ಳ ಡಾ. ಎಂ.ಆರ್. ರವಿಯವರು ಇದೀಗ ದ.ಕ. ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಬರಹಗಾರರೂ ಆಗಿರುವ ಡಾ. ಎಂ.ಆರ್.ರವಿಯವರು ವಿವಿಧ ಪುಸ್ತಕಗಳನ್ನು ಬರೆದಿದ್ದು ಆಧುನಿಕ ಶಿಕ್ಷಣ ಮತ್ತು ಸಾಮಾಜಿಕ ಬದಲಾವಣೆ, ಮೋಡೆರ್ನ್ ಎಜುಕೇಶನ್ ಸೋಶಿಯಲ್ ಚೇಂಜ್, ಈ ಜೀವನ ನಮ್ಮದು, ಯಾರನ್ನೂ ನಿರ್ಲಕ್ಷಿಸಬೇಡಿ ಪ್ಲೀಸ್, ನಮ್ಮ ಉದ್ಧಾರ ನಮ್ಮಿಂದಲೇ, ಅಂಬೇಡ್ಕರ್ ಇಲ್ಲದ ಭಾರತ, ಬದುಕೋಣ ಬಾರಾ, ಪ್ರೇಮಲಾಲಿ(ಕವನ ಸಂಕಲನ) ಪ್ರಕಟಗೊಂಡಿದೆ. ಸರಕಾರಿ ಸೇವೆಯ ಜತೆ ಸಾಹಿತ್ಯ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿರುವ ಡಾ.ಎಂ.ಆರ್.ರವಿಯವರು ಸೇವಾ ಚೇತನ ಪ್ರಶಸ್ತಿ, ಪ್ರೊ.ಹೆಚ್.ಎಸ್.ಕೆ. ಲಿಟ್ರೆರಿ ಅವಾರ್ಡ್, ಬಸವರತ್ನ ಅವಾರ್ಡ್ ಮತ್ತು ಹೊಯ್ಸಳ ಅವಾರ್ಡ್ ಪುರಸ್ಕೃತರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.