ಮುಕ್ರಂಪಾಡಿ ಮಹಿಳಾ ಕಾಲೇಜ್‌ನಲ್ಲಿ ಅಪರಾಧ ತಡೆ ಮಾಸಾಚರಣೆ

Puttur_Advt_NewsUnder_1
Puttur_Advt_NewsUnder_1

mukrampadyಪುತ್ತೂರು: ಮುಕ್ರಂಪಾಡಿ ಮಹಿಳಾ ಪದವಿ ಪೂರ್ವ ಕಾಲೇಜ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ಇಲಾಖಾ ನೇತೃತ್ವದಲ್ಲಿ ಪುತ್ತೂರು ನಗರ ಪೋಲಿಸ್ ಠಾಣೆಯ ವತಿಯಿಂದ ಅಪರಾಧ ತಡೆ ಮಾಸಾಚರಣೆ ಮತ್ತು ಮಕ್ಕಳ ಸುರಕ್ಷತೆ ಬಗ್ಗೆ ಮಾಹಿತಿ ಶಿಬಿರ ಡಿ.2 ರಂದು ನಡೆಯಿತು. ಈ ಮಾಹಿತಿ ಶಿಬಿರವು ಡಿ.30ರವರೆಗೆ ನಡೆಯಲಿದೆ.

ಪೋಲಿಸ್ ಸಿಬ್ಬಂದಿ ಹರೀಶ್‌ರವರು ಮಾತನಾಡಿ, ಮನೆಯಲ್ಲಿ ಒಂಟಿಯಾಗಿರುವ ಸಂದರ್ಭದಲ್ಲಿ ಕಂಪ್ಯೂಟರೈಸ್ಡ್ ಲಾಕರ್ ಅಳವಡಿಸುವ ಸಹಿತ ಮುಂಬಾಗಿಲು ಮತ್ತು ಹಿಂಬಾಗಿಲು ಹಾಕಿಕೊಂಡು ಕೆಲಸ ಮಾಡುವಂತಾಗಬೇಕು, ಬೆಲ್ ಮಾಡಿದಾಗ ಕೂಡಲೇ ಬಾಗಿಲು ತೆರೆಯದೆ ಕಿಟಕಿಯಿಂದ ಖಚಿತ ಪಡಿಸಿಕೊಂಡ ಮೇಲೆಯೇ ಬಾಗಿಲನ್ನು ತೆರೆಯಿರಿ, ಅಪರಿಚಿತರ ಬಗ್ಗೆ ಜಾಗೃತೆಯಿಂದ ವ್ಯವಹರಿಸಬೇಕು, ಬೆಲೆ ಬಾಳುವ ವಸ್ತುಗಳ ಮೇಲೆ ಹೆಚ್ಚಿನ ಸುರಕ್ಷೆ ವಹಿಸಿ, ವಾಹನಗಳನ್ನು ಪಾರ್ಕ್ ಮಾಡುವ ಸಂದರ್ಭದಲ್ಲಿ ಅಗತ್ಯ ಕ್ರಮಗಳನ್ನು ಪಾಲಿಸಲು ಮರೆಯದಿರಿ, ಮನೆ ಬಾಡಿಗೆಗೆ ಬರುವ ವ್ಯಕ್ತಿಗಳ ಸಂಪೂರ್ಣ ವಿಳಾಸದೊಂದಿಗೆ ಮಾಹಿತಿಯನ್ನು ಸಂಗ್ರಹಿಸಿ, ಅನುಮಾನಾಸ್ಪದ ವ್ಯಕ್ತಿ ಅಥವಾ ವಾಹನದ ಬಗ್ಗೆ ಹತ್ತಿರದ ಪೋಲಿಸ್ ಠಾಣೆಗೆ ದೂರು ನೀಡಿ, ಚಿನ್ನದ ಒಡವೆಗಳನ್ನು ಪಾಲಿಷ್ ಮಾಡುತ್ತೇವೆಂದು ಹೇಳಿಕೊಂಡು ಬರುತ್ತಿರುವವರ ಬಗ್ಗೆ ಜಾಗೃತೆ ವಹಿಸಿ, ಒಡವೆಗಳನ್ನು ತೆಗೆದುಕೊಳ್ಳುವಾಗ ಪರಿಚಯವಿರುವವರಲ್ಲಿಯೇ ವ್ಯವಹಾರ ಮಾಡಿ, ವೃದ್ಧರು, ಅಪ್ರಾಪ್ತರಲ್ಲಿ ಒಡವೆಗಳನ್ನು ನೀಡಬೇಡಿ, ಪ್ರಯಾಣದ ಸಂದರ್ಭದಲ್ಲಿ ಮೈಮರೆತು ನಿದ್ರೆ ಮಾಡದಂತೆ ನಿಮ್ಮ ವಸ್ತುಗಳ ಬಗ್ಗೆ ಜಾಗೃತೆ ವಹಿಸಿ, ಅಪರಿಚಿತರು ನೀಡಿದ ತಿಂಡಿಗಳನ್ನು ತೆಗೆದುಕೊಳ್ಳಬೇಡಿ, ಅಪರಿಚಿತ ವಾಹನದಲ್ಲಿ ಪ್ರಯಾಣಿಸುವಾಗ ವಾಹನದ ಸಂಪೂರ್ಣ ಮಾಹಿತಿಯನ್ನು ಹೊಂದುವಂತಾಗಬೇಕು ಎಂದರು. ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿ, ಜನರಿಲ್ಲದ ಪ್ರದೇಶಗಳಲ್ಲಿ, ಕಾಲುದಾರಿಯಲ್ಲಿ ಒಂಟಿಯಾಗಿ ಓಡಾಡಬೇಡಿ, ಜನನಿಭಿಡ ಪ್ರದೇಶಗಳಲ್ಲಿ, ಪಾರ್ಕ್‌ಗಳಲ್ಲಿ, ಕತ್ತಲೆಯಲ್ಲಿ ಕುಳಿತುಕೊಳ್ಳುವ ಅವಕಾಶವನ್ನು ತಪ್ಪಿಸಿ, ಎಟಿಎಂನ ಸೀಕ್ರೆಟ್ ನಂಬರನ್ನು ಗೌಪ್ಯವಾಗಿಡಿ, ಆತ್ಮರಕ್ಷಣೆಗೆ ಬಳಸುವ ಸಾಮಾಗ್ರಿಗಳಾದ ದೊಣ್ಣೆ, ಖಾರದಹುಡಿ, ಮಚ್ಚು ಇತ್ಯಾದಿ ತಕ್ಷಣ ಕೈಗೆ ಸಿಗುವಂತೆ ಇಟ್ಟುಕೊಳ್ಳುವಂತಾಗಬೇಕು ಎಂದು ಮಹಿಳೆಯರ ಸುರಕ್ಷತೆ ಕುರಿತು ಅಗತ್ಯ ಮಾಹಿತಿಗಳನ್ನು ನೀಡಿದರಲ್ಲದೆ ಸರಗಳ್ಳತನದ ಸಂದರ್ಭದಲ್ಲಿ, ಪ್ರಯಾಣಿಸುವಾಗ ಪಾಲಿಸಬೇಕಾದ ಸಲಹೆಗಳನ್ನು, ಸುಲಿಗೆ ನಿರೋಧಕ ಮುನ್ನೆಚ್ಚರಿಕೆಗಳ ಬಗ್ಗೆ, ವಾಹನ ಕಳವು ನಿಷೇಧ ಮುನ್ನೆಚ್ಚರಿಕೆಗಳ ಬಗ್ಗೆ, ಡಕಾಯಿತ ನಿರೋಧಕ ಮುನ್ನೆಚ್ಚರಿಕೆಗಳ ಬಗ್ಗೆ, ಪೋಕ್ಸೋ ಕಾಯ್ದೆ ಬಗ್ಗೆ, ಲಿಂಗ ಅಸಮಾನತೆ ಭ್ರೂಣ ಹತ್ಯೆ ಬಗ್ಗೆ, ಜಿಲ್ಲಾ ಮಕ್ಕಳ ಹಕ್ಕುಗಳ ಬಗ್ಗೆ, ಮಕ್ಕಳ ಗ್ರಾಮ ಸಭೆ ಬಗ್ಗೆ ಅಗತ್ಯ ಮಾಹಿತಿಯನ್ನು ನೀಡಿದರು. ಉಪನ್ಯಾಸಕ ಕೊರಗಪ್ಪ ರೈರವರು ಮಾತನಾಡಿ, ಸರಕಾರದಿಂದ ಸಿಗುವ ಸವಲತ್ತುಗಳು ತುಂಬಾ ಕಡಿಮೆಯಿರುವುದರ ಜೊತೆಗೆ ಒತ್ತಡದಲ್ಲಿ ಪ್ರಾಮಾಣಿಕವಾಗಿ ಸೇವೆ ಮಾಡುವವರು ದೇಶ ಕಾಯುವ ಸೈನಿಕರು ಮತ್ತು ದೇಶದೊಳಗೆ ಶಿಸ್ತನ್ನು ಕಾಪಾಡುವ ಪೋಲಿಸ್ ಸಿಬ್ಬಂದಿಗಳು ಎಂದು ಹೇಳಿ ವಂದಿಸಿದರು.

ಎಸ್‌ಐ ಒಮನ, ಕಾಲೇಜ್‌ನ ಪ್ರಾಂಶುಪಾಲೆ ಜಯಂತಿ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ಭೋಜರಾಜ ಆಚಾರ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಜೀವನ ಬೆಳಕಾಗುವ ನಿಟ್ಟಿನಲ್ಲಿ ದೊಡ್ಡ ಗುರಿಯನ್ನು ಹೊಂದದಿದ್ದರೂ ನಿರ್ದಿಷ್ಟವಾದ ಗುರಿಯನ್ನು ಹೊಂದಿರಲೇಬೇಕು. ಯಾರೂ ದುಶ್ಚಟಗಳಿಗೆ ಒಳಗಾಗದೆ ದೇವರು ಕೊಟ್ಟ ಶಕ್ತಿ ಮತ್ತು ಜ್ಞಾನವನ್ನು ಉಪಯೋಗಿಸುವಂತಾಗಬೇಕು. ಯಾವುದೇ ತೊಂದರೆಯಾದಲ್ಲಿ ಮಕ್ಕಳ ಸಹಾಯವಾಣಿ ನಂ:1098 ಅಥವಾ 0824-2437795 ನಂಬರಿಗೆ ಕರೆ ಮಾಡಬಹುದು.

-ಹರೀಶ್, ಪೊಲೀಸ್ ಸಿಬ್ಬಂದಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.