ವಕೀಲರ ಸಂಘದ ಚುನಾವಣೆ-7 ಮಂದಿ ನಾಮಪತ್ರ ಹಿಂತೆಗೆತ; ಕಾರ್ಯದರ್ಶಿಯಾಗಿ ಕೃಷ್ಣ ಪ್ರಸಾದ್ ರೈ, ಜತೆಕಾರ್ಯದರ್ಶಿ ದೀಪಕ್ ಬೊಳುವಾರು ಅವಿರೋಧ ಆಯ್ಕೆ

vakeela

ಪುತ್ತೂರು: ಪ್ರತಿಷ್ಠಿತ ಪುತ್ತೂರು ವಕೀಲರ ಸಂಘಕ್ಕೆ ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ದ.6ರಂದು ಚುನಾವಣೆ ನಡೆಯಲಿದ್ದು, ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಜತೆ ಕಾರ್ಯದರ್ಶಿ ಮತ್ತು ಕೋಶಾಧಿಕಾರಿ ಸ್ಥಾನಗಳಿಗೆ ಒಟ್ಟು ಸಲ್ಲಿಸಲಾದ 22 ನಾಮಪತ್ರಗಳಲ್ಲಿ 7 ಮಂದಿ ನಾಮಪತ್ರವನ್ನು ಹಿಂದಕ್ಕೆ ಪಡೆದು ಕೊಂಡಿದ್ದಾರೆ. ಕಾರ್ಯದರ್ಶಿ ಮತ್ತು ಜತೆಕಾರ್ಯದರ್ಶಿ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ನಡೆದಿದೆ. ಉಳಿದಂತೆ ಅಧ್ಯಕ್ಷ ಉಪಾಧ್ಯಕ್ಷ ಮತ್ತು ಕೋಶಾಧಿಕಾರಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಕಾರ್ಯದರ್ಶಿ ಸ್ಥಾನಕ್ಕೆ ಮುರಳೀಕೃಷ್ಣ ಚಲ್ಲಂಗಾರು, ಸಂತೋಷ್ ಕುಮಾರ್, ಹರಿಣಾಕ್ಷಿ ಜೆ.ಶೆಟ್ಟಿಯವರು ನಾಮಪತ್ರ ಹಿಂದಕ್ಕೆ ಪಡೆದಿರುವ ಹಿನ್ನೆಲೆಯಲ್ಲಿ ಕೃಷ್ಣಪ್ರಸಾದ್ ರೈಯವರು ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಜತೆ ಕಾರ್ಯದರ್ಶಿ ಸ್ಥಾನಕ್ಕೆ ತಾಹಿರಾರವರು ನಾಮಪತ್ರ ಹಿಂದಕ್ಕೆ ಪಡೆದಿರುವ ಹಿನ್ನೆಲೆಯಲ್ಲಿ ದೀಪಕ್ ಬೊಳುವಾರುರವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಜಿ. ಜಗನ್ನಾಥ ರೈಯವರೂ ನಾಮಪತ್ರ ಸಲ್ಲಿಸಿದ್ದು, ದ.೨ರ ಪತ್ರಿಕೆಯಲ್ಲಿ ಅವದ ಹೆಸರು ಬಿಟ್ಟು ಹೋಗಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.