Breaking News

ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲುವ ನಳೀಲು ದೇವಸ್ಥಾನದಲ್ಲಿ ಚಂಪಾಷಷ್ಠಿ

Puttur_Advt_NewsUnder_1
Puttur_Advt_NewsUnder_1

naleelu*ಪ್ರವೀಣ್ ಚೆನ್ನಾವರ

ಪುತ್ತೂರು: ಕುಕ್ಕೆ ಸುಬ್ರಹಣ್ಯದ ಆದಿ ಸುಬ್ರಹ್ಮಣ್ಯದಲ್ಲಿ ಹುತ್ತಕ್ಕೆ ಪೂಜೆ ಸಲ್ಲುವುದು ಎಲ್ಲರಿಗೂ ತಿಳಿದ ಸಂಗತಿ. ಅದೇ ರೀತಿ ಪುತ್ತೂರು ತಾಲೂಕಿನಲ್ಲಿಯೂ ಹುತ್ತಕ್ಕೆ ಪೂಜೆ ಸಲ್ಲುವ ದೇವಳವೊಂದಿದೆ. ಕೊಳ್ತಿಗೆ ಗ್ರಾಮದ ನಳೀಲು ಸುಬ್ರಹ್ಮಣ್ಯ ದೇವಳದಲ್ಲಿ ಆದಿ ಕುಕ್ಕೆಯ ಮಾದರಿಯಲ್ಲಿ ಆರಾಧನೆ ನಡೆಯುತ್ತದೆ. ಹಾಗಾಗಿ ಭಕ್ತರ ಪಾಲಿಗೆ ಇದು ಎರಡನೆಯ ಸುಬ್ರಹ್ಮಣ್ಯ. ಕೊಳ್ತಿಗೆ ಗ್ರಾಮದ ನೆಟ್ಟಾರಿನಿಂದ ಬಾಯಂಬಾಡಿ ಪಾಲ್ತಾಡಿ ತನಕ ಹಬ್ಬಿರುವ ಪರ್ವತ ಪಂಕ್ತಿಯ ಮಧ್ಯ  ಭಾಗ ನಳೀಲು. ನಾಲ್-ಇಲ್ ಸೇರಿ ನಳೀಲು ಆಗಿದೆ. ತುಳುವಿನಲ್ಲಿ ನಾಲ್ ಎಂದರೆ ನಾಲ್ಕು, ಇಲ್ಲ್ ಎಂದರೆ ಮನೆ ಎಂದರ್ಥ. ಪ್ರಾಕೃತಿಕ ಸೊಬಗಿನ ಊರಿದು. ಇಲ್ಲಿ ನಾಗರೂಪೀ ಸುಬ್ರಹ್ಮಣ್ಯ ಹತ್ತೂರಿನ ಭಕ್ತರ ಆರಾಧ್ಯ ದೇವರು. ಇತಿಹಾಸದ ಪ್ರಕಾರ ನಳೀಲಿನ ಸುಬ್ರಹ್ಮಣ್ಯ ಗುಡಿ ಮೂಲತಃ ಜೈನರಸರ ಆಳ್ವಿಕೆ ಕಾಲದಲ್ಲಿ ನಿರ್ಮಾಣಗೊಂಡಿರಬೇಕು. 300ವರ್ಷಗಳ ಇತಿಹಾಸ ಇದೆ. ಗುಡಿಯು ಪಾಳು ಬಿದ್ದಾಗ ಮೂರ್ತಿಯ ಸುತ್ತ ಹುತ್ತ ಬೆಳೆದು, ಬಳಿಕ ಅದಕ್ಕೆ ಆರಾಧನೆ ಸಲ್ಲುತ್ತದೆ ಎಂಬ ಐತಿಹ್ಯ ಇದೆ. ಹುತ್ತರೂಪದಲ್ಲಿ ನೆಲೆ ನಿಂತ ಸುಬ್ರಹ್ಮಣ್ಯನಿಗೆ ಬಗೆ-ಬಗೆಯ ಸೇವೆಗಳು ಅರ್ಪಣೆಯಾಗುತ್ತಿದೆ. ದಿನನಿತ್ಯ ಅರ್ಚಕರು ನಾಗನಿಗೆ ಪೂಜೆ ಸಲ್ಲಿಸುತ್ತಾರೆ. ಹುತ್ತರೂಪದ ಗುಡಿಗೆ ಆರಾಧನೆ ನಡೆಯುತ್ತದೆ. ಪೂಜೆಯ ಬಳಿಕ ಬಟ್ಟಲಲ್ಲಿ ಹಾಲು-ನೀರಿಟ್ಟು ಬರುತ್ತಾರೆ. ಈ ಹಾಲನ್ನು ನಾಗ ಕುಡಿಯುತ್ತಾನೆ ಎಂಬ ನಂಬಿಕೆ ಇದರ ಹಿಂದಿದೆ. ಅದಕ್ಕೆ ಪುಷ್ಠಿ ನೀಡುವಂತೆ ಆಗಾಗ ನಾಗ ಪ್ರತ್ಯಕ್ಷನಾಗಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಾನೆ. ಆಳೆತ್ತರಕ್ಕೆ ನಿಂತ ವಾಲ್ಮೀಕಿ ಕೆಲವೊಮ್ಮೆ ಪವಾಡದಂತೆ ಕುಬ್ಜಗೊಳ್ಳುತ್ತದೆ. ದೇವಳ ಪಕ್ಕದಲ್ಲಿ ಸಣ್ಣ ಕುಂಡಿಕೆಯೊಂದರಲ್ಲಿ ನೀರು ಮೇಲೇಳುತ್ತಿರುವುದು ವಿಶೇಷ. ಬಿರು ಬೇಸಿಗೆಯಲ್ಲೂ ನೀರು ಬತ್ತುವುದಿಲ್ಲ. ಇಲ್ಲಿ ಆಶ್ಲೇಷ ಬಲಿ, ಸರ್ಪ ಸೇವೆ ನಡೆಯುತ್ತದೆ.ಜತೆಗೆ ರಂಗಪೂಜೆ, ಹೂವಿನಪೂಜೆ, ನಾಗತಂಬಿಲ ಮೊದಲಾದ ಸೇವೆಗಳಿವೆ. 2 ದಿನಗಳ ಕಾಲ ಚಂಪಾ ಷಷ್ಠಿ ಮಹೋತ್ಸವ ವಿಜೃಂಭಣೆಯಿಂದ ಜರಗುತ್ತದೆ. ಷಷ್ಠಿ ವೃತವು ಇಲ್ಲಿದೆ. ವಿಶೇಷ ಕಾರ್ತಿಕ ಪೂಜೆಯು ನಡೆಯುತ್ತದೆ.ಈ ಬಾರಿ ಡಿ.4ರಂದು ರಾತ್ರಿ ವಿಶೇಷ ಕಾರ್ತಿಕ ಪೂಜೆ ನಡೆದರೆ.ಡಿ.5ರಂದು ಚಂಪಾಷಷ್ಠಿ ಮಹೋತ್ಸವ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.