Breaking News

ಕೋಡಿಂಬಾಡಿ: ಮೂರ್ತೆದಾರರ ಮಹಾಮಂಡಲದ ಸ್ವ-ಸಹಾಯ ಸಂಘ ಅಧ್ಯಕ್ಷರಾಗಿ ರೇವತಿ ವೀರಪ್ಪ ಪೂಜಾರಿ, ಶಶಿಧರ ಡೆಕ್ಕಾಜೆ ಆಯ್ಕೆ

Puttur_Advt_NewsUnder_1
Puttur_Advt_NewsUnder_1

 

kodimbadyಪುತ್ತೂರು: ಮೂರ್ತೆದಾರರ ಮಹಾ ಮಂಡಲ ಒಕ್ಕೂಟದ ಕೋಡಿಂಬಾಡಿ ಡೆಕ್ಕಾಜೆ ವನದುರ್ಗೆ ಮತ್ತು ಮಹಿಷಮರ್ದಿನಿ ಸ್ವ-ಸಹಾಯ ಗುಂಪುಗಳ ಉದ್ಘಾಟನಾ ಕಾರ್ಯಕ್ರಮ ಡೆಕ್ಕಾಜೆ ವೀರಪ್ಪ ಪೂಜಾರಿಯವರ ಮನೆಯಲ್ಲಿ ನಡೆಯಿತು. ಮೂರ್ತೆದಾರರ ಮಹಾಮಂಡಲದ ಅಧ್ಯಕ್ಷ ಸಂಜೀವ ಪೂಜಾರಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವನದುರ್ಗೆ ಸ್ವಸಹಾಯ ಸಂಘದ ಅಧ್ಯಕ್ಷರಾಗಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ರೇವತಿ ವೀರಪ್ಪ ಪೂಜಾರಿ, ಕಾರ್ಯದರ್ಶಿಯಾಗಿ ಪ್ರೇಮ ದೇವದಾಸ, ಮಹಿಷಮರ್ದಿನಿ ಸಂಘದ ಅಧ್ಯಕ್ಷರಾಗಿ ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ಶಶಿಧರ ಡೆಕ್ಕಾಜೆ, ಕಾರ್ಯದರ್ಶಿಯಾಗಿ ದಿವಾಕರ ಡೆಕ್ಕಾಜೆರವರನ್ನು ಆಯ್ಕೆ ಮಾಡಲಾಯಿತು. ಬಿಲ್ಲವ ಗ್ರಾಮ ಸಮಿತಿಯ ಅಧ್ಯಕ್ಷ ಶೇಖರ ಪೂಜಾರಿ ಜೇಡರಪಾಲು, ನ್ಯಾಯವಾದಿ ಕುಮಾರನಾಥ ಎಸ್., ಶೇಖರ ಪೂಜಾರಿ ಡೆಕ್ಕಾಜೆ ಮತ್ತು ಪಡೀಲು ಮೂರ್ತೆದಾರರ ಸೊಸೈಟಿಯ ಸಿಬ್ಬಂದಿ ರಾಧಾಕೃಷ್ಣ, ಉಗಪ್ಪ ಪೂಜಾರಿ ಪರನೀರು ಉಪಸ್ಥಿತರಿದ್ದರು. ಮಹಾಮಂಡಲದ ರಾಘವ ಪೂಜಾರಿ ಸ್ವಾಗತಿಸಿ, ಶೇಖರ ಪೂಜಾರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಮೂರ್ತೆದಾರರ ಮಹಾಮಂಡಲದ ಅಧ್ಯಕ್ಷ ಸಂಜೀವ ಪೂಜಾರಿಯವರನ್ನು ಬಿಲ್ಲವ ಗ್ರಾಮ ಸಮಿತಿಯ ವತಿಯಿಂದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.