ಪೆಟ್ರೋಲ್ ಪಂಪಿನಲ್ಲೂ ಇಂದಿನಿಂದ ರೂ.500ರ ಹಳೆಯ ನೋಟು ಸ್ವೀಕಾರವಿಲ್ಲ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೇಂದ್ರ ಸರಕಾರವು ರೂ.500 ಮತ್ತು ಸಾವಿರದ ನೋಟುಗಳ ಚಲಾವಣೆ ಅಮಾನ್ಯಗೊಳಿಸಿದ್ದ ನಂತರದ ಬೆಳವಣಿಗೆಯಲ್ಲಿ ಪೆಟ್ರೋಲ್ ಪಂಪ್‌ಗಳಲ್ಲಿ ಹಳೆಯ ನೋಟುಗಳನ್ನು ಸ್ವೀಕರಿಸಲಾಗುತ್ತಿತ್ತು. ಬಳಿಕ ಸಾವಿರದ ನೋಟು ಸ್ವೀಕರಿಸದೆ ರೂ.500ರ ನೋಟುಗಳನ್ನು ಸ್ವೀಕರಿಸಲಾಗುತ್ತಿತ್ತು. ಇದೀಗ ರೂ.500ರ ಹಳೆಯ ನೋಟನ್ನೂ ದ.3ರಿಂದ ಪೆಟ್ರೋಪ್ ಪಂಪ್‌ಗಳಲ್ಲಿ ಸ್ವೀಕರಿಸಲಾಗುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ನೋಟುಗಳ ಚಲಾವಣೆ ರದ್ದುಗೊಳಿಸಿದ ಬಳಿಕ ಕೇಂದ್ರ ಸರಕಾರವು ಪೆಟ್ರೋಲ್ ಪಂಪ್‌ಗಳ ಮೇಲೆ ವಿಶ್ವಾಸವಿರಿಸಿಕೊಂಡು ನೋಟುಗಳನ್ನು ಸ್ವೀಕರಿಸುವ ಅವಕಾಶ ನೀಡಿತ್ತು.ನಾವೂ ಸರಕಾರದ ಮೇಲೆ ಭರವಸೆಯಿರಿಸಿ, ಅಮಾನ್ಯಗೊಂಡಿರುವ ಹಳೆಯ ನೋಟುಗಳನ್ನು ಸ್ವೀಕರಿಸುವ ಮೂಲಕ ಉತ್ತಮ ರೀತಿಯ ಸೇವೆ ನೀಡಿದ್ದು ಜನತೆಯೂ ಈ ಕಾರ್ಯದಲ್ಲಿ ಒಳ್ಳೆಯ ರೀತಿಯಲ್ಲಿ ಸಹಕಾರ ನೀಡಿದ್ದು ಅವರಿಗೆ ಸಂಘ ಅಭಾರಿಯಾಗಿರುವುದಾಗಿ ಕರ್ನಾಟಕ ರಾಜ್ಯ ಪೆಟ್ರೋಲ್ ವಿತರಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ವಿಶ್ವಾಸ್ ಶೆಣೈಯವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.