ಗೋಳಿಕಟ್ಟೆ: ಇಂಟರ್‌ಲಾಕ್ ರಸ್ತೆ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

golikatteಪುತ್ತೂರು: ಪರ್ಲಡ್ಕ-ಗೋಳಿಕಟ್ಟೆ ಮಸೀದಿ ಬಳಿ ನೂತನವಾಗಿ ನಿರ್ಮಿಸಲಾದ ಇಂಟರ್‌ಲಾಕ್ ರಸ್ತೆಯನ್ನು ಡಿ.2 ರಂದು ಉದ್ಘಾಟನೆಗೊಂಡಿತು.

ಸ್ಥಳೀಯ ನಗರಸಭಾ ಸದಸ್ಯೆ ಜೆಸಿಂತಾ ಮಸ್ಕರೇನ್ಹಸ್‌ರವರು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡುರವರು ಮಾತನಾಡಿ, ಪುತ್ತೂರಿನ ಎಲ್ಲಾ ವಾರ್ಡುಗಳಲ್ಲಿ ಸಮಾನಾಂತರ ಅಭಿವೃದ್ಧಿಪಡಿಸಲು ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಈಗಾಗಲೇ ಈ ಭಾಗದ ಜನರ ಬೇಡಿಕೆಯಂತೆ ರಸ್ತೆ ನಿರ್ಮಾಣ, ಚರಂಡಿ ನಿರ್ಮಾಣಕ್ಕಾಗಿ ಅನುದಾನ ಮಂಜೂರಾಗಿದೆ. ಕುಡಿಯುವ ನೀರಿನ ಸಮಸ್ಯೆಯ ನಿವಾರಿಸಲಾಗಿದೆ ಎಂದರು.

ನಗರಸಭಾ ಸದಸ್ಯ ಎಚ್.ಮಹಮ್ಮದ್ ಆಲಿರವರು ಮಾತನಾಡಿ, ರೂ,೪೭ ಕೋಟಿಯ ನಳ್ಳಿನೀರಿನ ಯೋಜನೆಗೆ ಈಗಾಗಲೇ ಡಿಪಿಆರ್ ಮಂಜೂರಾಗಿದೆ. ಈ ಭಾಗದ ಕೆಲವು ಎತ್ತರ ಪ್ರದೇಶಗಳಿಗೆ ನೀರು ವಿತರಣೆ ಸಮಸ್ಯೆಯಾಗಿದ್ದು ಅದರ ಸಮಸ್ಯೆಯ ಪರಿಹಾರಕ್ಕೆ ಯೋಜನೆ ರೂಪಿಸಲಾಗಿದೆ ಎಂದ ಅವರು ಬಡವರಿಗೆ ಮನೆ ಕಟ್ಟಲು ರೂ,೧.೫೦ ಲಕ್ಷ ಸಬ್ಸಿಡಿ ನೀಡಲಾಗುವುದು, ಎಲ್ಲಾ  ನಿವೇಶನರಹಿತ ಬಡವರಿಗೆ ನಿವೇಶನ ಹಂಚಲು ಕಾರ್ಯಯೋಜನೆ ಹಾಕಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ನಗರಸಭಾ ಸದಸ್ಯರಾದ ಶಕ್ತಿ ಸಿನ್ಹಾ, ಮುಖೇಶ್ ಕೆಮ್ಮಿಂಜೆ, ಅನ್ವರ್ ಖಾಸಿಂ ಮತ್ತು ಸ್ಥಳೀಯರಾದ ಬಶೀರ್, ಬಶೀರ್ ಪರ್ಲಡ್ಕ, ಝೈನುದ್ಧೀನ್, ಅಶ್ರಫ್ ಗೋಳಿಕಟ್ಟೆ, ಖಾಸಿಂ ಗೋಳಿಕಟ್ಟೆ, ಮೊದು ಕುಂಞ, ಅಬ್ದುಲ್ ಅಝೀರh ಗೋಳಿಕಟ್ಟೆ ಮತ್ತೀತರರು ಉಪಸ್ಥಿತರಿದ್ದರು. ಅಬ್ದುಲ್ ರಶೀದ್ ಹಾಜಿ ಸ್ವಾಗತಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.