Breaking News

ಚಾರ್ವಾಕ ಸಿ.ಎ ಬ್ಯಾಂಕ್ ಸಮೀಪದಲ್ಲಿಯೇ ಖಾಸಗಿ ಬೋರ್‌ವೆಲ್ ಕೊರೆತದಿಂದ ಕಟ್ಟಡಕ್ಕೆ ಹಾನಿ-ದೂರು

Puttur_Advt_NewsUnder_1
Puttur_Advt_NewsUnder_1

charvakaಕಾಣಿಯೂರು: ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾಣಿಯೂರು ಪ್ರಧಾನ ಕಚೇರಿಯ ಸಮೀಪವೇ ಖಾಸಗಿಯಾಗಿ ಬೋರ್‌ವೆಲ್ ಕೊರೆತದಿಂದ ಹಾನಿಯಾಗಿರುವ ಬಗ್ಗೆ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶೋಕ್‌ರವರು ಕಾಣಿಯೂರು ಗ್ರಾ.ಪಂ, ಬೆಳ್ಳಾರೆ ಪೋಲೀಸ್ ಠಾಣೆ, ತಹಶೀಲ್ದಾರರು ಕಡಬ, ಮೆಸ್ಕಾಂ ಸವಣೂರು ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕರು ದ.1 ರಂದು ದೂರು ನೀಡಿದ್ದಾರೆ.

ಕಾಣಿಯೂರಿನ ಅಬ್ದುಲ್ ಕರೀಂ ಎಂಬವರು ನ 30 ರಂದು ರಾತ್ರೋರಾತ್ರಿ ಸಂಘದ ತೀರಾ ಸಮೀಪದಲ್ಲಿಯೇ ಅಕ್ರಮವಾಗಿ ಬೋರ್‌ವೆಲ್ ಕೊರೆದಿರುವುದು ನಮ್ಮ ಗಮನಕ್ಕೆ ಬಂದಿದ್ದು, ಸಂಘದ ಕಟ್ಟಡದ ಕೇವಲ 7 ಅಡಿ ಸಮೀಪದಲ್ಲಿ ಈ ಬೋರ್‌ವೆಲ್ ಕೊರೆದಿರುವುದರಿಂದ ಸಂಘದ ಆಫೀಸು ಕಟ್ಟಡ ಹಾಗೂ ಆವರಣ ಗೋಡೆ ಬಿರುಕು ಬಿಟ್ಟು ಸಂಪೂರ್ಣ ಹಾನಿಯಾಗಿರುತ್ತದೆ ಮತ್ತು ನಷ್ಟ ಉಂಟಾಗಿದೆ. ಅಲ್ಲದೇ ಸಂಘವು ಸುಮಾರು 10 ವರ್ಷಗಳ ಹಿಂದೆ ಸಂಘದ ಆವರಣದಲ್ಲಿ ಬೋರ್‌ವೆಲ್ ತೆಗೆದು ಉಪಯೋಗವನ್ನು ಮಾಡುತ್ತಿದೆ. ಈಗ ಅನಧಿಕೃತವಾಗಿ ತೆಗೆದಿರುವ ಬೋರ್‌ವೆಲ್ ನಮ್ಮ ಸಂಘದ ಬೋರ್‌ವೆಲ್‌ಗೆ ಕೇವಲ 15 ಅಡಿ ಅಂತರದಲ್ಲಿರುವುದರಿಂದ ಸಂಘದ ಬೋರ್‌ವೆಲ್ ಬರಿದಾಗುವ ಸಂಭವ ಬಹಳಷ್ಟಿದೆ ಎಂದು ದೂರಿನಲ್ಲಿ ತಿಳಿಸಿ, ಅಕ್ರಮವಾಗಿ ಬೋರ್‌ವೆಲ್ ಕೊರೆದಿರುವವರ ಮೇಲೆ ಸೂಕ್ತ ಕ್ರಮಕೈಗೊಳ್ಳುವಂತೆ ತಿಳಿಸಿದ್ದಾರೆ.

ಸಂಘದ ಆಡಳಿತ ಮಂಡಳಿಯ ತುರ್ತು ಸಭೆ: ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾಣಿಯೂರು ಪ್ರಧಾನ ಕಚೇರಿಯ ಸಮೀಪ ಬೋರ್‌ವೆಲ್ ಕೊರೆತದಿಂದ ಸಂಘದ ಅಫೀಸು ಕಟ್ಟಡ ಮತ್ತು ಆವರಣ ಗೋಡೆಗೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ಆರಂಭದಲ್ಲಿ ಆಡಳಿತ ಮಂಡಳಿಯ ತುರ್ತು ಸಭೆಯು ದ 1 ರಂದು ಸಂಘದ ಕಚೇರಿಯಲ್ಲಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಪಟೇಲ್ ಚಾರ್ವಾಕರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ಕಟ್ಟಡ ಮತ್ತು ಆವರಣ ಗೋಡೆಗೆ ಸಂಪೂರ್ಣ ಹಾನಿಯಾದ  ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಮುಂದಕ್ಕೆ ಅವರು ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಿದಲ್ಲಿ ಸಂಘದ ಬೋರ್‌ವೆಲ್ ಬರಿದಾಗುವ ಸಂಭವವಿದ್ದು ಈ ಬಗ್ಗೆ ಕಾಣಿಯೂರು ಗ್ರಾ.ಪಂ, ಬೆಳ್ಳಾರೆ ಪೋಲೀಸ್ ಠಾಣೆ, ತಹಶೀಲ್ದಾರರು ಕಡಬ, ಮೆಸ್ಕಾಂ ಸವಣೂರು ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಪುತ್ತೂರು ಇವರಿಗೆ ಸಂಘದ ವತಿಯಿಂದ ದೂರು ನೀಡುವ ಕುರಿತು ತೀರ್ಮಾನಿಸಲಾಗಿತ್ತು. ಸಂಘದ ಉಪಾಧ್ಯಕ್ಷ ಧರ್ಮೇಂದ್ರ ಗೌಡ ಕಟ್ಟತ್ತಾರು, ನಿರ್ದೇಶಕರುಗಳಾದ ರಾಮಣ್ಣ ಗೌಡ ನಾವೂರು, ಸೀತಾರಾಮ ಗೌಡ ಖಂಡಿಗ, ದೇವಿಪ್ರಸಾದ್ ದೋಳ್ಪಾಡಿ, ಪದ್ಮಯ್ಯ ಗೌಡ ಅನಿಲ, ಹರೀಶ್ ಅಂಬುಲ, ಸವಿತಾ ಆತಾಜೆ, ಭಾಗೀರಥಿ ರೈ ಕುಮೇರು, ಚಂರ್ಬ ಅಮೈರವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.