ಎತ್ತಿನಹೊಳೆ ವಿರೋಧಿಸಿ, ಜೀವನದಿ ನೇತ್ರಾವತಿ ಉಳಿಸಿ , ದ.10-12 ಪಂಚತೀರ್ಥ ಸಪ್ತಕ್ಷೇತ್ರ ರಥಯಾತ್ರೆ; ನೆಲ್ಯಾಡಿಯಲ್ಲಿ ಪೂರ್ವಭಾವಿ ಸಭೆ

Puttur_Advt_NewsUnder_1
Puttur_Advt_NewsUnder_1

ಪಕ್ಷಾತೀತ ಹೋರಾಟ, ಎಲ್ಲರೂ ಕೈಜೋಡಿ: ನಳಿನ್‌ಕುಮಾರ್

56

ನೆಲ್ಯಾಡಿಯಲ್ಲಿ ಮೆರವಣಿಗೆ, ಸಭೆ
ಡಿ.10 ರಂದು ಬೆಳಿಗ್ಗೆ ಸುಬ್ರಹ್ಮಣ್ಯದಿಂದ ಹೊರಟ ರಥಯಾತ್ರೆ ಮರ್ದಾಳ,ಇಚ್ಲಂಪಾಡಿ ಮೂಲಕ ಮಧ್ಯಾಹ್ನ ನೆಲ್ಯಾಡಿಗೆ ಬರಲಿದೆ. ಪೆರಿಯಶಾಂತಿಯಲ್ಲಿ ರಥವನ್ನು ಸ್ವಾಗತಿಸಿ ಅಲ್ಲಿಂದ ಮೆರವಣಿಗೆ ಮೂಲಕ ನೆಲ್ಯಾಡಿಗೆ ಬಂದು ನೆಲ್ಯಾಡಿಯಲ್ಲಿ ಸಭೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಮೆರವಣಿಗೆ ಹಾಗೂ ಸ್ವಾಗತ ಸಮಿತಿಯನ್ನು ಈ ವೇಳೆ ರಚಿಸಲಾಯಿತು. ಗೌರವಾಧ್ಯಕ್ಷರಾಗಿ ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಸಂಚಾಲಕ ಅಬ್ರಹಾಂ ವರ್ಗೀಸ್, ಅಧ್ಯಕ್ಷರಾಗಿ ಜಿ.ಪಂ.ಮಾಜಿ ಸದಸ್ಯ ಬಾಲಕೃಷ್ಣ ಬಾಣಜಾಲು, ಪ್ರಧಾನ ಕಾರ್ಯದರ್ಶಿಗಳಾಗಿ ರವಿಚಂದ್ರ ಹೊಸವೊಕ್ಲು, ರವಿಪ್ರಸಾದ್ ಶೆಟ್ಟಿಯವರನ್ನು ಆಯ್ಕೆ ಮಾಡಲಾಯಿತು.

ನೆಲ್ಯಾಡಿ: ‘ಎತ್ತಿನಹೊಳೆ ವಿರೋಧಿಸಿ, ಜೀವನದಿ ನೇತ್ರಾವತಿ ಉಳಿಸಿ’ ಪಂಚತೀರ್ಥ ಸಪ್ತ ಕ್ಷೇತ್ರ ರಥಯಾತ್ರೆ ಡಿ.10,11,12ರಂದು ದ.ಕ.ಜಿಲ್ಲೆಯಲ್ಲಿ ಸಂಚರಿಸಲಿದ್ದು ಇದರ ಪೂರ್ವಭಾವಿ ಸಭೆ ದ.3ರಂದು ನೆಲ್ಯಾಡಿ-ಕೌಕ್ರಾಡಿ ಶ್ರೀ ಶಬರೀಶ ಕಲಾಮಂದಿರದಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ಸಂಸದ ನಳಿನ್‌ಕುಮಾರ್ ಕಟೀಲ್, ಎತ್ತಿನಹೊಳೆ ಯೋಜನೆ ವಿರೋಧಿಸಿ, ದ.ಕ.ಜಿಲ್ಲೆಯ ಜೀವನದಿ ನೇತ್ರಾವತಿ ಉಳಿಸಲು ಪಂಚತೀರ್ಥ ಸಪ್ತ ಕ್ಷೇತ್ರ ರಥಯಾತ್ರೆ ದ.10,11,12ರಂದು ನಡೆಯಲಿದೆ. ಡಿ.10ರಂದು ಸುಬ್ರಹ್ಮಣ್ಯದಿಂದ ಹೊರಟು ಧರ್ಮಸ್ಥಳ, ಬೆಳ್ತಂಗಡಿ, ಕಲ್ಲಡ್ಕ, ಕದ್ರಿ, ಸುರತ್ಕಲ್ ಮೂಲಕ ಸಂಚರಿಸಿ ದ.12ರಂದು ಕಟೀಲಿನಲ್ಲಿ ಸಮಾಪನಗೊಳ್ಳಲಿದೆ. ಈ ವೇಳೆ ಸುಬ್ರಹ್ಮಣ್ಯ, ಧರ್ಮಸ್ಥಳ, ಉಪ್ಪಿನಂಗಡಿ, ಪೊಳಲಿ, ಕದ್ರಿ, ಬಪ್ಪನಾಡು,ಕಟೀಲು ಕ್ಷೇತ್ರಗಳ ಸಂದರ್ಶನವೂ ನಡೆಯಲಿದೆ. ಜಿಲ್ಲೆಯಲ್ಲಿ ಹರಿಯುವ 5 ಪವಿತ್ರ ನದಿಗಳಾದ ಕುಮಾರಧಾರ, ನೇತ್ರಾವತಿ, ಪಲ್ಗುಣಿ, ಶಾಂಭವಿ, ನಂದಿನಿ ನದಿಗಳ ತೀರ್ಥವನ್ನು ರಥದಲ್ಲಿರುವ ಕಲಶಕ್ಕೆ ಸೇರಿಸಲಾಗುವುದು. ಜಿಲ್ಲೆಯ 5  ತಾಲೂಕು ಹಾಗೂ 8 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಯಾತ್ರೆ ಸಂಚರಿಸಲಿದ್ದು ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲೂ 1 ಸಭೆ ನಡೆಯಲಿದೆ ಎಂದರು. ಇದೊಂದು ಪಕ್ಷ, ಧರ್ಮದ ಅಡಿಯಲ್ಲಿ ನಡೆಯುವ ಕಾರ್ಯಕ್ರಮವಲ್ಲ. ಎಲ್ಲಾ ಸಮುದಾಯದವರನ್ನು ಸೇರಿಸಿಕೊಂಡು ಜಿಲ್ಲೆಯ ಜೀವನದಿ ನೇತ್ರಾವತಿ ಉಳಿವಿಗಾಗಿ ನಡೆಯುವ ಹೋರಾಟವಾಗಿದೆ. ಈ ಹೋರಾಟದಲ್ಲಿ ಎಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದರು. ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಮಾತನಾಡಿ, ಈ ಹಿಂದೆ ನೇತ್ರಾವತಿ ನದಿಯ ಉಳಿವಿಗಾಗಿ ಸಂಸದ ನಳಿನ್ ಕುಮಾರ್ ಕಟೀಲ್‌ರವರ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಾಗಿದೆ. ಇದೀಗ ಜಿಲ್ಲೆಯ ಜಲ,ನೆಲದ ರಕ್ಷಣೆಗಾಗಿ ಪಕ್ಷಾತೀತವಾಗಿ ಪಂಚ ತೀರ್ಥ ಸಪ್ತ ಕ್ಷೇತ್ರ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಹೇಳಿದರು. ದ.ಕ.ಜಿಲ್ಲೆಯಲ್ಲಿ ದೇವಸ್ಥಾನ, ಚರ್ಚ್, ಮಸೀದಿಗಳಿವೆ. ಎಲ್ಲರೂ ಪರಸ್ಪರ ಪ್ರೀತಿ, ವಿಶ್ವಾಸದಿಂದ ಜೀವನ ನಡೆಸಿಕೊಂಡು ಬರುತ್ತಿದ್ದೇವೆ. ಚರ್ಚ್,ಮಸೀದಿ, ದೇವಸ್ಥಾನ, ದೈವಸ್ಥಾನ, ಭಜನಾಮಂದಿರಗಳ ಮುಖ್ಯಸ್ಥರನ್ನು, ರಾಜಕೀಯ ಪಕ್ಷಗಳ ಮುಖಂಡರ ಜೊತೆ ಮಾತುಕತೆ ನಡೆಸಿ, ಸಮಾಜದ ಎಲ್ಲಾ ವರ್ಗ, ಸಮುದಾಯದ ಜನರು ಪಂಚತೀರ್ಥ ಸಪ್ತ ಕ್ಷೇತ್ರ ರಥಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದು ಹೇಳಿದರು.
ಸಭೆಯಲ್ಲಿ ರಥಯಾತ್ರೆ ಸಮಿತಿ ಸಂಚಾಲಕರಾದ ಕೆ.ಮೋನಪ್ಪ ಭಂಡಾರಿ, ಗೋಪಾಲಕೃಷ್ಣ ಹೇರಳೆ, ಸಹ ಸಂಚಾಲಕರಾದ ಸತ್ಯಜಿತ್ ಸುರತ್ಕಲ್, ಉಪಾಧ್ಯಕ್ಷರುಗಳಾದ ಜಿತೇಂದ್ರ ಕೊಟ್ಟಾರಿ, ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ, ಬಿಜೆಪಿ ನೆಲ್ಯಾಡಿ ಶಕ್ತಿಕೇಂದ್ರದ ಅಧ್ಯಕ್ಷ ಧರ್ಮಪಾಲ ರಾವ್ ಕಜೆ, ಪ್ರಮುಖರಾದ ಆರ್.ಸಿ.ನಾರಾಯಣ, ಕಿಶೋರ್ ಶಿರಾಡಿ, ಬಿ.ದೇವದಾಸ್ ಶೆಟ್ಟಿ, ಶಾರದಾ ಆರ್.ರೈ., ಗಣೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿ.ಪಂ.ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು ಸ್ವಾಗತಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.