Breaking News

ಸುಳ್ಯಪದವು ಸರ್ವೋದಯ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವ, ಪರಂಪರೆಯ ಶಿಕ್ಷಣ ನಮ್ಮ ದೇಶದಲ್ಲಿ ಇನ್ನೂ ಜಾಗೃತ-ರಾಧಾಕೃಷ್ಣ

Puttur_Advt_NewsUnder_1
Puttur_Advt_NewsUnder_1

56ಪುತ್ತೂರು: ಸುಳ್ಯಪದವು ಸರ್ವೋದಯ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವವು ದ.2 ರಂದು ವಿದ್ಯಾಸಂಸ್ಥೆಯ ಅಧ್ಯಕ್ಷ ನಿತ್ಯಾನಂದ ನಾಯಕ್ ಎಸ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಶಿರ್ವ ಸೈಂಟ್ ಮೇರಿಸ್ ಮಹಾವಿದ್ಯಾಲಯ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ| ರಾಧಾಕೃಷ್ಣ ಭಟ್‌ರವರು ಮಾತನಾಡಿ ಶಿಕ್ಷಣ ಪದ್ಧತಿ ಬೇರೆ ಬೇರೆ ರಾಷ್ಟ್ರಗಳಲ್ಲಿ ಬೇರೆ ಬೇರೆ ರೀತಿಯಲ್ಲಿದ್ದು ಅವು ವಿಕೃತ ಮಟ್ಟಕ್ಕೆ ಬೆಳೆದರೂ ನಮ್ಮ ದೇಶದಲ್ಲಿ ಇನ್ನೂ ಕೂಡಾ ಶಿಕ್ಷಣ ಕ್ಷೇತ್ರದಲ್ಲಿ ಸತ್ಕರ್ಮ ಪರಂಪರೆ ಇದೆ ಎಂದು ಹೇಳಿದರು. ಶಿಕ್ಷಣಾಸಕ್ತಿಯಿರುವ ಊರವರು, ವಿದ್ಯಾಭಿಮಾನಿಗಳಿಗೆ ಇಲ್ಲಿ ಕೊರತೆ ಇಲ್ಲ. ಈ ನಿಟ್ಟಿನಲ್ಲಿ ಪರಿಪೂರ್ಣತೆಯ ದಾರಿಯಲ್ಲಿ ಈ ಶಾಲೆ ಮುಂದುವರಿಯುತ್ತಿದೆ ಎಂದರು.

2015-16ನೇ ಸಾಲಿನಲ್ಲಿ 10ನೇ ತರಗತಿಯಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಾದ ನಟರಾಜ್, ಕಲಾಶ್ರೀ ಎನ್, ಆಯಿಶತ್‌ಬುಶ್ರಾ ಜ್ಯೋತಿ ಎನ್, ಕಾರ್ತಿಕ್ ಎಸ್.ಹೆಚ್,ಭಾರತಿ ಎಂ ಎಸ್.ಮಮತಾ ಬಿ ಎನ್, ಕೌಸಲ್ಯಾ, ನಿಶ್ಚಿತಾ, ಅಮೃತಾ, ಸುಶ್ಮಿತಾ ಮತ್ತು ಕ್ರೀಡೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ 10ನೇ ತರಗತಿಯ ರಾಹುಲ್ ಹಾಗೂ ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ಪ್ರವೀಣ್,ಚರಣ್, ಶಮಾ, ನೇಹಾ, ಸೌಮ್ಯಾ ಟಿ, ಅಶ್ವಿತಾ, ರಮ್ಲಾರವರನ್ನು ಸನ್ಮಾನಿಸಲಾಯಿತು. ಆಡಳಿತ ಮಂಡಳಿ ನಿರ್ದೇಶಕರಾದ ಬೀರಮೂಲೆ ರಾಮ್ ಭಟ್, ಕನ್ನಡ್ಕ ಅರುಣ್ ಕುಮಾರ್ ಕೆ,ಸುಬ್ರಹ್ಮಣ್ಯ ಭಟ್, ವೀರೆಂದ್ರ ಹೊಸಮನೆ, ರಾಮಕೃಷ್ಣ ಭಟ್ ಚಂದು ಕೂಡ್ಲು, ಕೋಶಾಧಿಕಾರಿ ದೇರಣ್ಣ ಗೌಡ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ರುಕ್ಮಾಂಗದ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯಗುರು ಹೆಚ್.ಡಿ. ಶಿವರಾಮ್ ವಾರ್ಷಿಕ ವರದಿ ವಾಚಿಸಿದರು, ಪ್ರಾಥಮಿಕ ಶಾಲಾ ಮುಖ್ಯ ಗುರು ಪುರಂದರ ರೈ ಪ್ರಾಥಮಿಕ ಶಾಲೆಯ ವಾರ್ಷಿಕ ವರದಿ ವಾಚಿಸಿದರು. ಶಿಕ್ಷಕ ನಾರಾಯಣ ಭಟ್ ದತ್ತಿನಿಧಿ ವಾಚಿಸಿದರು. ಅಟೋಟ ಸ್ಪರ್ಧೆಯಲ್ಲಿ ವಿಜೇತರಾದವರ ವಿವರವನ್ನು ದೈಹಿಕ ಶಿಕ್ಷಕ ಸುಖೇಶ್ ರೈ ವಾಚಿಸಿದರು. ವಿದ್ಯಾಸಂಸ್ಥೆಯ ಸಂಚಾಲಕ ಕೊಲ್ಯ ಮಹಾದೇವ ಭಟ್ ಸ್ವಾಗತಿಸಿದರು. ಶಿಕ್ಷಕ ಸತ್ಯಶಂಕರ್ ಭಟ್ ಕಾರ್ಯಕ್ರಮ ನಿರೂಪಿಸಿ, ವೆಂಕಟೇಶ್ ಭಟ್ ಕಜೆಮೂಲೆ ವಂದಿಸಿದರು.
ಬೆಳಿಗ್ಗೆ ನಡೆದ ಉದ್ಘಾಟನಾ ಕಾರ್‍ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕುಂಬ್ರ ಪ್ರಾ.ಕೃ.ಪ.ಸಂಘ ನಿ; ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ.ಉಳ್ಳಾಲ ಮೋಗವೀರ ಹಿ.ಪ್ರಾ.ಶಾಲೆಯ ನಿವೃತ್ತ ಅಧ್ಯಾಪಿಕೆ ಸುಶೀಲ ಆಗಮಿಸಿದರು ಪೂರ್ವಾಹ್ನ ಸಾಮೂಹಿಕ ಕವಾಯತು, ಛದ್ಮವೇಷ, ಬಹುಮಾನ ವಿತರಣೆ ನಡೆಯಿತು. ಬಳಿಕ ಅಂಗನವಾಡಿ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ವೈವಿಧ್ಯ ನಡೆಯಿತು.

6778

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.