Breaking News

ಮಕ್ಕಳ ಫೋಟೋ ಸ್ಪರ್ಧೆ: ರಿಶಾನ್ ಜಿ. ಪ್ರಥಮ

Puttur_Advt_NewsUnder_1
Puttur_Advt_NewsUnder_1

78ಪುತ್ತೂರು: ಉದ್ಯಾವರ ಮಾಡದ ತೀಯಾ ಸಮಾಜ ಭವನದಲ್ಲಿ ನ.25ರಂದು ನಡೆದ ‘ತುಳುನಾಡ ತೇರ್‌ನ್ ಎದ್ಕೊನುನಾ’ ಕಾರ್ಯಕ್ರಮದ ಅಂಗವಾಗಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಏರ್ಪಡಿಸಿದ ‘ತುಳುನಾಡ ಬಾಲೆ ಬಂಗಾರ್‌’ ಮಕ್ಕಳ ಫೋಟೋ ಸ್ಪರ್ಧೆಯಲ್ಲಿ ರಿಶಾನ್ ಜಿ. ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ದರ್ಬೆ ಗಣೇಶ್ ಯು. ಮತ್ತು ಸುಶ್ಮಾರವರ ಪುತ್ರ. ಕಾಸರಗೋಡು, ದಕ್ಷಿಣ ಕನ್ನಡ, ಕೊಡಗು ಮತ್ತು ಉಡುಪಿಯ 4 ಜಿಲ್ಲಾಮಟ್ಟದಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ತುಳುನಾಡ ಸಾಂಪ್ರದಾಯಿಕ ಉಡುಗೆ-ತೊಡುಗೆ, ಸಂಸ್ಕಾರ, ಕಲೆ ಮೊದಲಾದ ಅಂಶಗಳಿಗೆ ಆದ್ಯತೆ ನೀಡಿ ವಿಜೇತರನ್ನು ಆಯ್ಕೆ ಮಾಡಲಾಗಿದೆ.
ತೀರ್ಪುಗಾರರಾಗಿ ಹಿರಿಯ ಛಾಯಾಚಿತ್ರಾಕಾರ ಸತೀಶ್ ಇರಾ ಹೊಸಂಗಡಿ, ಸುರಕ್ಷಾ ಚಿಕಿತ್ಸಾಲಯದ ಡಾ. ರಾಜಶ್ರೀ ಮೋಹನ್, ಚಿತ್ರಕಲಾ ಸಂಘದ ಆರ್ಟಿಸ್ಟ್ ಜಯಪ್ರಸಾದ್ ಕೋಟೆಕ್ಕಾರ್ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.