ಸಂಜಯನಗರದಲ್ಲಿ ಸ್ವಚ್ಚತಾ ಜಾಗೃತಿ

Puttur_Advt_NewsUnder_1
Puttur_Advt_NewsUnder_1

45

ಪುತ್ತೂರು: ಸ್ವಚ್ಚತಾ ಕಾರ್ಯವನ್ನು ಅಂತಃಕರಣದಿಂದ ಮಾಡಬೇಕು ಎಂದು ಪುತ್ತೂರು ನಗರ ಸಭಾ ಸದಸ್ಯರಾದ ಎಚ್.ಮಹಮ್ಮದ್ ಆಲಿ ಹೇಳಿದರು. ಅವರು ಸಂತ ಫೀಲೋಮಿನಾ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಮತ್ತು ಸಂಜಯನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜಂಟಿ ಆಶ್ರಯದಲ್ಲಿ ಪಳಿಕೆ ರಸ್ತೆಯಲ್ಲಿ ನಡೆದ ಸ್ವಚ್ಚತಾ ಜಾಗೃತಿ ಮಾಹಿತಿ ಮತ್ತು ಸ್ವಚ್ಚತಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸ್ವಚ್ಚತೆ ಎಂಬುದು ಇನ್ನೊಬ್ಬರಿಗೆ ಹೇಳುವುದಲ್ಲ ತಾವೇ ಮಾಡಿ ತೋರಿಸಬೇಕಾಗಿದೆ. ಈ ದೇಶದ ಪ್ರತಿಯೊಬ್ಬ ನಾಗರಿಕ ತಾನು ಬದಲಾದರೆ ದೇಶ ಬದಲಾದಂತೆ ಎಂದು ಭಾವಿಸಬೇಕೆಂದು ತಿಳಿಸಿದರು. ಸಂಜಯನಗರ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಇಸುಬುರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸ್ವಚ್ಚತೆ ಪ್ರತಿಯೊಬ್ಬನ ಆದ್ಯ ಕರ್ತವ್ಯ ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಜಾನೆಟ್ ಡಿ.ಅಲ್ಮೇಡಾ ಮಾತನಾಡಿ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳದಿದ್ದರೆ ಆಪತ್ತು ಖಂಡಿತ ಎಂದರು. ನಗರಸಭಾಧ್ಯಕ್ಷೆ ಜಯಂತಿ ಬಲ್ನಾಡು, ಸಮಾಜಕಾರ್ಯ ವಿಭಾಗದ ಉಪನ್ಯಾಸಕಿ ಕೃತಿ, ಸಂಜಯನಗರ ಶಾಲಾ ಮುಖ್ಯಶಿಕ್ಷಕ ರಮೇಶ ಉಳಯ ಸಂದರ್ಭೋಚಿತವಾಗಿ ಮಾತನಾಡಿದರು. ಶಾಲಾ ಮಕ್ಕಳು ಪ್ರಾರ್ಥಿಸಿ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿ ಧೀರಜ್ ಸ್ವಾಗತಿಸಿದರು. ಕಾವ್ಯಶ್ರೀ ವಂದಿಸಿದರು. ಮಿಲನ್ ಮತ್ತು ಜಾನೆಟ್ ವಿಲ್ಮಾ ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ಶಿಕ್ಷಕರಾದ ಸಿಸಿಲಿಯಾ ಲೋಬೊ, ಸ್ಮಿತಾಶ್ರೀ ಬಿ. ಸುನಿಲ ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಸ್ವಚ್ಚತೆಯ ಬಗ್ಗೆ ಕಿರುಪ್ರಹಸನ, ಲೇಜಿಮ್, ಹೂಪ್ಸ, ಡಂಬಲ್ಸಗಳ ಕವಾಯತು ಪ್ರದರ್ಶನ ನಡೆಯಿತು. ಸಭೆಯ ಮೊದಲು ವಿದ್ಯಾರ್ಥಿಗಳು ಬೀದಿಗಳಲ್ಲಿ ಮೆರವಣಿಗೆ ಮೂಲಕ ಮನೆಮನೆಗಳಿಗೆ ಸ್ವಚ್ಚತಾ ಜಾಗೃತಿಯ ಕರಪತ್ರ ಹಂಚಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.