Breaking News

ಅನಾಥವಾಗಿದ್ದ ಹಣದ ಬ್ಯಾಗ್ ವಾರೀಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಪತ್ರಕರ್ತ ಸರ್ವೇಶ್

Puttur_Advt_NewsUnder_1
Puttur_Advt_NewsUnder_1

67

ಉಪ್ಪಿನಂಗಡಿ: ಬಸ್ ನಿಲ್ದಾಣದಲ್ಲಿ ಅನಾಥವಾಗಿ ಬಿದ್ದಿದ್ದ ಹಣವಿದ್ದ ಬ್ಯಾಗನ್ನು ಅದರ ವಾರೀಸುದಾರರಿಗೆ ಮುಟ್ಟಿಸುವ ಮೂಲಕ ಪತ್ರಕರ್ತರೋರ್ವರು ಮಾನವೀಯತೆ ತೋರಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಹಿರೇಬಂಡಾಡಿ ಗ್ರಾಮ ನಿವಾಸಿ ಮನೋರಮಾ ಎಂಬವರು ಶುಕ್ರವಾರ ಉಪ್ಪಿನಂಗಡಿ ಬಸ್ ನಿಲ್ದಾಣಕ್ಕೆ ಬಂದವರು, ಪರಿಚಯಸ್ಥರಲ್ಲಿ ಮಾತನಾಡಿ ಹೋಗುವಾಗ ಹಣವಿದ್ದ ಬ್ಯಾಗನ್ನು ಅಲ್ಲೇ ಬಿಟ್ಟು ಹೋಗಿದ್ದರು. ರಾತ್ರಿಯಾದರೂ ಯಾರೊಬ್ಬರೂ ಬ್ಯಾಗಿನ ವಾರಸುದಾರರು ಬಾರದೇ ಇದ್ದುದ್ದರಿಂದ ಬ್ಯಾಗ್ ಅನಾಥವಾಗಿಯೇ ಬಸ್ ನಿಲ್ದಾಣದಲ್ಲೇ ಉಳಿದಿತ್ತು. ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಬಸ್ ನಿಲ್ದಾಣದ ಬಳಿ ಕಚೇರಿಯನ್ನು ಹೊಂದಿದ್ದ ಸ್ಥಳೀಯ ಪತ್ರಿಕಾ ವರದಿಗಾರರೂ ಆಗಿರುವ ಸರ್ವೇಶ್ ಕುಮಾರ್‌ರವರು, ರಾತ್ರಿ ವೇಳೆ ಈ ಅನಾಥ ಬ್ಯಾಗ್ ಕಂಡವರ ಪಾಲಾಗುವ ಸಾಧ್ಯತೆಯನ್ನು ಗ್ರಹಿಸಿ ಬ್ಯಾಗಿನ ಸುರಕ್ಷತೆಗಾಗಿ ತನ್ನ ಕಚೇರಿಯಲ್ಲಿರಿಸಿದ್ದರು. ಶನಿವಾರದಂದು ಬ್ಯಾಗನ್ನು ಹುಡುಕಿಕೊಂಡು ಬಂದಿದ್ದ ಮನೋರಮಾರವರನ್ನು ವಿಚಾರಿಸಿದಾಗ , ತನ್ನ ಹಣದ ಪರ್ಸನ್ನೂ ಒಳಗೊಂಡಿದ್ದ ಬ್ಯಾಗ್ ನಿನ್ನೆ ದಿನ ಇಲ್ಲೇ ಇಟ್ಟು ಹೋಗಿರುವುದಾಗಿ ತಿಳಿಸಿದರು. ಬ್ಯಾಗ್ ನಲ್ಲಿದ ಹಣದ ಬಗ್ಗೆ ತನಗೇನೂ ಗೊತ್ತಿಲ್ಲ. ಆದರೆ ಬ್ಯಾಗ್ ಕಂಡವರ ಪಾಲಾಗದಿರಲಿ ಎಂದು ರಕ್ಷಿಸಿ ತನ್ನ ಕಚೇರಿಯಲ್ಲಿರಿಸಿzನೆ ಎಂದು ಸರ್ವೇಶ್ ಕುಮಾರ್ ತಿಳಿಸಿ ಬ್ಯಾಗನ್ನು ಮನೋರಮಾ ರವರ ಕೈಗಿತ್ತರು. ಬ್ಯಾಗ್ ಪರಿಶೀಲಿಸಿದ ಮನೋರಮಾ ರವರಿಗೆ ಅದರಲ್ಲಿರಿಸಿದ್ದ ಸಾವಿರಾರು ರೂ. ಹಣ ಸುರಕ್ಷಿತವಾಗಿತ್ತು. ಈ ಸಂತಸದಿಂದ ಅವರು ಪತ್ರಕರ್ತ ಸರ್ವೇಶ್ ಕುಮಾರ್‌ರವರನ್ನು ಹರಸಿದರು. ಬ್ಯಾಗ್ ರಕ್ಷಿಸಿದಕ್ಕೆ ಇನಾಮ್ ನೀಡುತ್ತೇನೆಂದು ಆಕೆ ಮುಂದಾದರೂ ಸರ್ವೇಶ್‌ಕುಮಾರ್‌ರವರು ನಯವಾಗಿ ನಿರಾಕರಿಸುವ ಮೂಲಕ ಮಾನವೀಯತೆ ತೋರಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.