ನೂಜಿಬಾಳ್ತಿಲ ಗ್ರಾ.ಪಂ. ಮಕ್ಕಳ ಗ್ರಾಮ ಸಭೆ ಹೆಚ್ಚು ಪ್ಲಾಸ್ಟಿಕ್ ಸಂಗ್ರಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ಘೋಷಣೆ

Puttur_Advt_NewsUnder_1
Puttur_Advt_NewsUnder_1

 

67ಕಡಬ: ನೂಜಿಬಾಳ್ತಿಲ ಗ್ರಾ.ಪಂ. ವತಿಯಿಂದ ಮಕ್ಕಳ ಗ್ರಾಮ ಸಭೆ ನೂಜಿಬಾಳ್ತಿಲ ಉ.ಹಿ.ಪ್ರಾ.ಶಾಲೆಯಲ್ಲಿ ಶಾಲಾ ವಿದ್ಯಾರ್ಥಿ ನಾಯಕಿ ಕು|ಮೋಕ್ಷಿತಾರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಗ್ರಾ.ಪಂ.ಅಧ್ಯಕ್ಷ ಸದಾನಂದ ಗೌಡರವರು ವಿದ್ಯಾರ್ಥಿಗಳ ವಿವಿಧ ಸಮಸ್ಯೆಗಳಿಗೆ ಉತ್ತರಿಸಿ ಬೇಡಿಕೆಗಳಿಗೆ ಸ್ಪಂದಿಸುವಂತೆ ತಿಳಿಸಿದರು.

ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್‌ರವರು ತಮ್ಮ ಜಿ.ಪಂ.ಮಟ್ಟದಲ್ಲಿ  ಆಗುವಂತಹ ಕಾರ್‍ಯಗಳನ್ನು ಮಾಡಿಸುವ ಭರವಸೆ ನೀಡಿ ಉಳಿದ ವಿಚಾರಗಳ ಬಗ್ಗೆ ಸಂಬಂದಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು. ಬೇಡಿಕೆಗಳ ಕುರಿತು ಶಾಲಾ ಎಸ್‌ಡಿಎಂಸಿ ಅಧ್ಯಕ್ಷರ ಮುಖಾಂತರ ಅರ್ಜಿ ಸಲ್ಲಿಸುವಂತೆ ಅವರು ಸೂಚಿಸಿದರು. ನೂಜಿಬಾಳ್ತಿಲ ಶಾಲಾ ಮೋಕ್ಷಿತಾ, ರೆಂಜಿಲಾಡಿ ಶಾಲಾ ಮಹಮ್ಮದ್ ಮುಸ್ತಫಾ, ಪೂರ್ಣ ಎ.ಆರ್, ನಿಶ್ಮಿತಾ ಕುಮಾರಿ, ಉಲ್ಲಾಸ್, ಶರಣ್ಯ, ನೂಜಿ ಶಾಲಾ ವಿದ್ಯಾರ್ಥಿಗಳಾದ ಯಶಸ್, ಕುಮುದಾಕ್ಷಿ ಹಾಗೂ ಅಡೆಂಜಿ ಶಾಲಾ ವಿದ್ಯಾರ್ಥಿಗಳಾದ ಅಶ್ವತ್, ರೂಪೇಶ್ ತಮ್ಮ ಶಾಲೆಗಳಿಗೆ ಅತೀ ಅಗತ್ಯವಾಗಿರುವ ಮಾಡಿನ ದುರಸ್ತಿ, ರಸ್ತೆ ದುರಸ್ತಿ, ಶಾಲಾ ಆವರಣ ಗೋಡೆ, ಕಂಪೌಂಡ್, ಗೋಳಿಯಡ್ಕ ಜಂಕ್ಷನ್‌ನಲ್ಲಿ ರಾಜ್ಯ ಹೆದ್ದಾರಿಗೆ ಬ್ಯಾರಿಕೇಡ್ ಅಳವಡಿಸುವಂತೆ ಆಗ್ರಹಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖಾ ಕಡಬ ವಲಯ ಮೇಲ್ವಿಚಾರಕಿ ಹೇಮರಾಮ್‌ದಾಸ್ ಮಾಹಿತಿ ನೀಡಿ ಮಕ್ಕಳ ಮಾರಾಟದ ಬಗ್ಗೆ ಬಾಲಕಾರ್ಮಿಕರ ಬಗ್ಗೆ, ಜಾಗ್ರತೆ ವಹಿಸುವಂತೆ ಪೋಷಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಜಾಗೃತಿ ವಹಿಸುವುದರೊಂದಿಗೆ ಅವರ ಚಲನವಲನಗಳ ಬಗ್ಗೆ ನಿಗಾ ಇಡಬೇಕು, ಅಲ್ಲದೆ ಮನೆಯಿಂದ ಶಾಲೆಗೆ ಶಾಲೆಯಿಂದ ನೇರವಾಗಿ ಬರುವುದನ್ನು ಖಚಿತಪಡಿಸಿಕೊಳ್ಳಬೇಕು. ಯಾರೂ ಅಪರಿಚಿತ ವ್ಯಕ್ತಿಗಳ ಆಮಿಷಕ್ಕೆ ಒಳಗಾಗದೆ ಅವರು ನೀಡುವ ತಿಂಡಿ ತಿನಿಸುಗಳನ್ನು ಸ್ವೀಕರಿಸದೆ ಏನಾದರೂ ತೊಂದರೆ ಆದರೆ ಬೊಬ್ಬೆ ಹಾಕುವುದರೊಂದಿಗೆ ನೆರೆಯಲ್ಲಿದ್ದವರಿಗೆ ಮಾಹಿತಿ ನೀಡುವುದಲ್ಲದೆ ಪೋಷಕರಿಗೆ ಫೋನ್ ಮಾಡಿ ತಕ್ಷಣ ತಿಳಿಸಬೇಕು. ಯಾವುದೇ ತುರ್ತು ಸಂದರ್ಭದಲ್ಲಿ ಹೆದರದೆ ನೇರವಾಗಿ ೧೦೯೮ ಸಹಾಯವಾಣಿಗೆ ಕರೆ ಮಾಡಬೇಕೆಂದು ಸಲಹೆ ನೀಡಿದರು.

ಸಿ.ಆರ್.ಪಿ ಗೋವಿಂದ ನಾಕ್, ಪಂಚಾಯತ್ ಸದಸ್ಯರಾದ ರಾಮಚಂದ್ರ, ರಜಿತಾ ಪದ್ಮನಾಭ, ಹೊನ್ನಮ್ಮ, ಅಮ್ಮಣಿ ಜೋಸೆಫ್, ವಲ್ಸ ಕೆ.ಜೆ, ಪುಷ್ಪಲತಾ, ನೆಲ್ಯಾಡಿ ಗ್ರಾ.ಪಂ. ಸದಸ್ಯ ಅಬ್ರಹಾಂ, ಮರ್ದಾಳ ಗ್ರಾ.ಪಂ. ಸದಸ್ಯ ಅಬೂಬಕ್ಕರ್ ಉಪಸ್ಥಿತರಿದ್ದರು. ಅಂಗನವಾಡಿ ಕಾರ್‍ಯಕರ್ತೆಯರಾದ ಪ್ರಫಲ್ಲಾ ರೈ, ಅಮೀನ ಕೆ, ವಾರಿಜ, ಸಾರಮ್ಮ ಎಲಿಯಮ್ಮ, ಹೇಮಾವತಿ, ಸುಮಿತ್ರಾ, ರಾಜೀವಿ, ಆರೋಗ್ಯ ಸಹಾಯಕಿಯರಾದ ದಯಾಕಿರಣ್, ಮಧುರ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಸಾಮುವೆಲ್ ಒ.ಜೆ. ಸ್ವಾಗತಿಸಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ.ಆರ್. ಪ್ಲಾಸ್ಟಿಕ್ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದರು.

ಹೆಚ್ಚು ಪ್ಲಾಸ್ಟಿಕ್ ಸಂಗ್ರಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ

ಗ್ರಾ.ಪಂ.ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಯಂತ್ರಣ ಬಗ್ಗೆ ಮಾಹಿತಿ ನೀಡಿದ ಅಭಿವೃದ್ದಿ ಅಧಿಕಾರಿ ಜಯಪ್ರಕಾಶ್ ಎಂ.ಆರ್ ರವರು, ಪ್ರತಿ ಅಂಗನವಾಡಿಗಳಲ್ಲಿ ಅಂಗನವಾಡಿ ಕಾರ್‍ಯಕರ್ತೆಯರು ಪ್ಲಾಸ್ಟಿಕ್ ಚೀಲಗಳನ್ನು ಶೇಖರಿಸಿ ಕ್ಲೀನ್ ಇಲ್ಲದ ಪ್ಲಾಸ್ಟಿಕ್‌ಗಳನ್ನು ಕ್ಲೀನ್ ಮಾಡಿ ಚೀಲದಲ್ಲಿ ತುಂಬುವ ಮೂಲಕ ವಾರದಲ್ಲಿ ಒಮ್ಮೆ ಸಂಗ್ರಹಿಸಿದ ಪ್ಲಾಸ್ಟಿಕ್‌ಗಳನ್ನು ಗ್ರಾ.ಪಂ.ಗೆ ನೀಡಬೇಕು, ಹೆಚ್ಚು ಸಂಗ್ರಹಿಸಿದವರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಗುವುದು. ಅದೇ ರೀತಿ ಪ್ರತೀ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಆಸುಪಾಸಿನಲ್ಲಿ ಪ್ಲಾಸ್ಟಿಕ್‌ಗಳನ್ನು ಸಂಗ್ರಹಿಸಿ ಶಾಲೆಗೆ ತಂದು ಒಪ್ಪಿಸಬೇಕು. ಶಾಲಾ ಶಿಕ್ಷಕರು ಮಕ್ಕಳಿಂದ ಪ್ಲಾಸ್ಟಿಕ್ ಪಡೆದುಕೊಂಡು ಅತೀ ಹೆಚ್ಚು ಸಂಗ್ರಹಿಸಿದ ವಿದ್ಯಾರ್ಥಿಗಳ ಪಟ್ಟಿಯನ್ನು ಆಯಾ ಶಾಲಾ ಮುಖ್ಯಸ್ಥರು ಗ್ರಾ.ಪಂ.ಗೆ ತಿಳಿಸಬೇಕು. ಅವರಿಗೂ ಪಂಚಾಯತ್ ವತಿಯಿಂದ ಪ್ರೋತ್ಸಾಹಕ ಬಹುಮಾನ ನೀಡಲಾಗುವುದು. ಒಟ್ಟಿನಲ್ಲಿ ನಮ್ಮ ನೂಜಿಬಾಳ್ತಿಲ ರೆಂಜಿಲಾಡಿ ಗ್ರಾಮಗಳಲ್ಲಿ ಎಲ್ಲೂ ಪ್ಲಾಸ್ಟಿಕ್ ಬೇಕಾಬಿಟ್ಟಿ ಬಿಸಾಡುವುದನ್ನು ಸಂಪೂರ್ಣ ನಿಯಂತ್ರಿಸಲಾಗುವುದು ಎಂದರು.

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.